Breaking News
Home / ಆರೋಗ್ಯ / ತೂಕ ಹೆಚ್ಚಾಗಿದೆ ಅನ್ನೋ ಚಿಂತೆ ಬಿಡಿ ಈ ರೀತಿ ಮಾಡಿ ತೂಕ ಕಡಿಮೆಯಾಗುತ್ತದೆ..!

ತೂಕ ಹೆಚ್ಚಾಗಿದೆ ಅನ್ನೋ ಚಿಂತೆ ಬಿಡಿ ಈ ರೀತಿ ಮಾಡಿ ತೂಕ ಕಡಿಮೆಯಾಗುತ್ತದೆ..!

ತೂಕ ಹೆಚ್ಚಾಗಿದೆ ಹೊಟ್ಟೆ ದಪ್ಪಗಿದೆ ಅಂತ ಚಿಂತೆ ಮಾಡಬೇಡಿ ಈ ರೀತಿಯಾಗಿ ಮಾಡಿ. ಬೊಜ್ಜು ಕರಗಿಸುವಲ್ಲಿ ವ್ಯಾಯಾಮ ಶೇ. 20ರಷ್ಟು ಸಹಾಯ ಮಾಡಿದರೆ ಶೇ.80ರಷ್ಟು ಸಹಾಯ ಮಾಡುವುದು ನಮ್ಮ ಆಹಾರ.

ಆದ್ದರಿಂದ ತೂಕ ಕಮ್ಮಿ ಮಾಡ ಬಯಸುವವರು ಈ ಟಾಪ್ 5 ಟಿಪ್ಸ್‌ ಪಾಲಿಸಿದರೆ ಸಾಕು ಬೊಜ್ಜನ್ನು ಕರಗಿಸಬಹುದು:

ಆರೋಗ್ಯಕರ ಬ್ರೇಕ್‌ಫಾಸ್ಟ್
ತೆಳ್ಳಗಾಗಬೇಕೆಂದು ಕೆಲವರು ಬೆಳಗ್ಗೆ ಏನೂ ತಿನ್ನದೇ ಇರುವುದನ್ನು ನೋಡುತ್ತೇವೆ. ಹೀಗೆ ಮಾಡಿದರೆ ತೆಳ್ಳಗಾಗ ಬದಲು ಕಾಯಿಲೆ ಬರುವುದು. ಬೆಳಗ್ಗೆ ಬ್ರೆಡ್ ಸ್ಯಾಂಡ್‌ವಿಚ್‌, ಒಂದು ಗ್ಲಾಸ್‌, ಉಪ್ಪಿಟ್ಟು, ಇಡ್ಲಿ, ಮೊಳಕೆ ಕಾಳುಗಳು ಹೀಗೆ ಏನಾದರೂ ಆರೋಗ್ಯಕರ ಆಹಾರವನ್ನು ತಿನ್ನಿ.

ನಾರಿನಂಶ ಹಾಗೂ ಪ್ರೊಟೀನ್
ಬೇಗನೆ ಹಸಿವು ಆಗದಿರಲು ನಾವು ತಿನ್ನುವ ಆಹಾರದಲ್ಲಿಅತ್ಯಧಿಕ ನಾರಿನಂಶ ಹಾಗೂ ಪ್ರೊಟೀನ್‌ ಇದೆಯೇ ಎಂದು ಗಮನಿಸುವುದು ಒಳ್ಳೆಯದು.

ನೋ ಜ್ಯೂಸ್‌
ಹಣ್ಣುಗಳನ್ನು ಜ್ಯೂಸ್‌ ಮಾಡಿ ತಿನ್ನುವ ಬದಲು ಕಚ್ಚಿ ತಿನ್ನಿ.

ಮೊಳಕೆ ಕಾಳುಗಳು ಹಾಗೂ ಧಾನ್ಯಗಳು
ಡಯಟ್‌ ಎಂದು ಬಾಯಿಗೆ ರುಚಿಯಿಲ್ಲದ ಆಹಾರವನ್ನು ತಿಂದು ಕಷ್ಟ ಪಡುವುದು ಬೇಡ. ರಾಗಿ, ಗೋಧಿ, ಮೊಳಕೆ ಕಾಳುಗಳನ್ನು ಬಳಸಿ ರುಚಿ-ರುಚಿಯಾದ ಪದಾರ್ಥ ಮಾಡಿ ಸೇವಿಸಿ.


ನಟ್ಸ್‌ ಸ್ನ್ಯಾಕ್ಸ್‌
ಕುರುಕುಲು ತಿಂಡಿಗಳು ಬಾಯಿಗಷ್ಟೇ ರುಚಿ. ಅದೇ ನಟ್ಸ್ ಬಾಯಿಗೂ ರುಚಿ, ಆರೋಗ್ಯಕ್ಕೂ ಒಳ್ಳೆಯದು, ತೂಕ ಹೆಚ್ಚಾಗುತ್ತದೆ ಎಂಬ ಟೆನ್ಷನ್ ಇರಲ್ಲ.

About admin

Check Also

ಹುಳುಕಡ್ಡಿ ಸಮಸ್ಯೆಗೆ ನೇರಳೆಯಲ್ಲಿ ಅಡಗಿದೆ ಓಷಧಿ ಗುಣಗಳು..!

ನಮಗೆ ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು …

Leave a Reply

Your email address will not be published. Required fields are marked *