Breaking News
Home / ಇತ್ತೀಚಿನ ಸುದ್ದಿಗಳು / ಮರಕ್ಕಿಂತ ಮರ ದೊಡ್ಡದಿರುತ್ತದೆ, ಹಾಗೆ ವ್ಯಕ್ತಿಗಿಂತ ದೊಡ್ಡ ವ್ಯಕ್ತಿ ಇದ್ದೆ ಇರುತ್ತಾನೆ ಅನ್ನೋದಕ್ಕೆ ಈ ನೈಜ ಕಥೆಯೇ ಸಾಕ್ಷಿ ಕಣ್ರೀ..!

ಮರಕ್ಕಿಂತ ಮರ ದೊಡ್ಡದಿರುತ್ತದೆ, ಹಾಗೆ ವ್ಯಕ್ತಿಗಿಂತ ದೊಡ್ಡ ವ್ಯಕ್ತಿ ಇದ್ದೆ ಇರುತ್ತಾನೆ ಅನ್ನೋದಕ್ಕೆ ಈ ನೈಜ ಕಥೆಯೇ ಸಾಕ್ಷಿ ಕಣ್ರೀ..!

ಅಮಿತಾ ಬಚ್ಚನ್ ವೃತ್ತಿಜೀವನದಲ್ಲಿ ಉತ್ತುಂಗದಲದ್ದ ಸಮಯ ಆಗ ಒಮ್ಮೆ ಅವರು ವಿಮಾನದಲ್ಲಿ ಪ್ರಯಾಣಿಸುತ್ತದ್ದರು,ಅವರ ಪಕ್ಕದಲ್ಲಿ ಒಬ್ಬ ಪ್ರಯಾಣಿಕನು ಸರಳ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದ ಒಬ್ಬರು ವಯಸ್ಸಾದ ಸಂಭಾವಿತ ವ್ಯಕ್ತಿ ಕುಳಿತಿದ್ದರು.ಅವರನ್ನ ನೋಡಿದರೆ ಮಧ್ಯಮ ವರ್ಗದವರು ಮತ್ತು ವಿದ್ಯಾವಂತರು ಎಂಬುದು ಸ್ಪಷ್ಟವಾಗಿ ತಿಳಿಯುತ್ತಿತ್ತು.

ಅಮಿತಾ ಬಚ್ಚನ್ ಗೆ ಇದ್ದ ಒಂದು ಭಾವನೆ ಎಂದರೆ ನಾನು ಯಾರೆಂದು ಇತರ ಪ್ರಯಾಣಿಕರು ಬಹುಶಃ ಗುರುತಿಸುತ್ತಾರೆ ಎಂಬುದು ಆದರೆ ಆ ಸಂಭಾವಿತ ವ್ಯಕ್ತಿ ಅಮಿತಾ ಬಚ್ಚನ್ ಪಕ್ಕದಲ್ಲಿ ಕುಳಿತಿದ್ದರೂ ಆತನನ್ನ ಗುರುತಿಸುವುದಿರಲಿ ತಿರುಗಿಯು ನೋಡುವುದಿಲ್ಲ, ತನ್ನ ಪಾಡಿಗೆ ಆತ ನ್ಯೂಸ್ ಪೇಪರ್ ಓದುತ್ತ ಕಾಫಿಯನ್ನ ಹೀರುತ್ತ ಕುಳಿತಿರುತ್ತಾನೆ .

ಆಗ ಅಮಿತಾ ಬಚ್ಚನ್ ಆತನನ್ನು ಮಾತನಾಡಿಸಲು ಪ್ರಯತ್ನಿಸುತ್ತಾರೆ ಅದಕ್ಕೆ ಪ್ರತಿಯಾಗಿ ಆ ವ್ಯಕ್ತಿಯು ಕೂಡ ಹಸನ್ಮುಖನಾಗಿ ಹಲೋ ಎನ್ನುತ್ತಾನೆ.
ಹೀಗೆ ಮಾತನಾಡುತ್ತಾ ಸಿನಿಮಾಗಳ ವಿಷಯವನ್ನ ತೆಗೆದ ಅಮಿತಾಬ್ ಆ ವ್ಯಕ್ತಿಯನ್ನ ‘ನೀವು ಚಲನಚಿತ್ರಗಳನ್ನು ನೋಡುತ್ತೀರಾ?’ ಎಂದು ಕೇಳುತ್ತಾರೆ.

ಅದಕ್ಕೆ ಆ ವ್ಯಕ್ತಿಯು, ‘ಓಹ್, ಬಹಳ ಕಡಿಮೆ.
ನಾನು ಅನೇಕ ವರ್ಷಗಳ ಹಿಂದೆ ಒಂದು ಸಿನಿಮಾ ನೋಡಿದ್ದ ನೆನಪು ಆಷ್ಟೆ” ಎನ್ನುತ್ತಾನೆ.

ಆಗ ಅಮಿತಾಬ್ “ನಾನು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ” ಎಂದು ನಾನು ಪ್ರಸ್ತಾಪಿಸುತ್ತಾರೆ.

ಆಗ ಆ ವ್ಯಕ್ತಿಯು “ಓಹ್, ಹೌದ ಒಳ್ಳೆಯದು, ನೀನೇನು ಮಾಡುತ್ತೀರಿ ಸಿನಿಮಾಗಳಲ್ಲಿ ಎಂದು ಅಮಿತಾಬ್ ರನ್ನ ಕೇಳುತ್ತಾನೆ?”
ಅದಕ್ಕೆ ಅಮಿತಾಬ್ ‘ನಾನು ಒಬ್ಬ ನಟನಾಗಿದ್ದೇನೆ’ ಎನ್ನುತ್ತಾರೆ.


ಆಗ ಆ ವ್ಯಕ್ತಿಯು ಸಂತೋಷ ಎಂದು ಹೇಳಿ ಸುಮ್ಮನಾಗುತ್ತಾನೆ.
ಏರ್ ಫೋರ್ಡ್ ಗೆ ಬಂದಾಗ ಅಮಿತಾಬ್ ಆ ವ್ಯಕ್ತಿಯ ಕೈ ಕುಲುಕಿ “ನಿಮ್ಮೊಂದಿಗೆ ಪ್ರಯಾಣ ಮಾಡಿ ಖುಷಿಯಾಯಿತು ನನ್ನ ಹೆಸರು ಅಮಿತಾಬ್ ಬಚ್ಚನ್!” ಎನ್ನುತ್ತಾರೆ.

ಆಗ ಮನುಷ್ಯ ನಗುತ್ತ ತನ್ನ ಹೆಸರನ್ನ ಹೇಳುತ್ತಾನೆ ಈಗ ಚಕಿತರಾಗುವ ಸಮಯ ಅಮಿತಾಬ್ ದ್ದಾಗಿರುತ್ತದೆ.
ಆ ವ್ಯಕ್ತಿ “ನಿಮಗು ಧನ್ಯವಾದಗಳು … ನಾನು J. R. D. ಟಾಟಾ!” ಎಂದು.
ಯಾವಗಲು ಅಷ್ಟೆ ಮರಕ್ಕಿಂತ ಮರ ದೊಡ್ಡದಿರುತ್ತದೆ
* ವಿನಮ್ರತೆ ಮಾತ್ರ ನಮ್ಮನ್ನ ದೊಡ್ಡವರನ್ನಾಗಿ ಮಾಡುತ್ತದೆ.

About admin

Check Also

ಯಡಿಯೂರಪ್ಪಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ..!

ಹೌದು ಇದೇನಪ್ಪ ಯಡಿಯೂರಪ್ಪಗೆ ಕುಮಾರಸ್ವಾಮಿ ಕುರ್ಚಿ ಬಿಟ್ಟುಕೊಟ್ಟಿದ್ದಾರೆ ಅಂದ್ರೆ ಎಲ್ಲರು ಶಾಕ್ ಆಗುವ ವಿಚಾರವೇ ಈ ಎಲ್ಲ ನಾಯಕರು ಚುನಾವಣೆ …

Leave a Reply

Your email address will not be published. Required fields are marked *