Breaking News
Home / ಇತ್ತೀಚಿನ ಸುದ್ದಿಗಳು / ಮೂರ್ಖರನ್ನು ಮಾಡಲು ಹೋದವರು ಮೂರ್ಖರಾದರು..!

ಮೂರ್ಖರನ್ನು ಮಾಡಲು ಹೋದವರು ಮೂರ್ಖರಾದರು..!

ಅಕ್ಬರನ ಆಸ್ತಾನದಲ್ಲಿ ಬೀರಬಲ್ ಬಹಳ ಚತುರ ಎನಿಸಕೊಂಡಿದ್ದ. ಇದನ್ನು ಕಂಡಿದ್ದ ಇತರರು ಆತನಿಗೆ ಏನಾದರೂ ಮಾಡಿ ಮೂರ್ಖನ ಪಟ್ಟ ಕಟ್ಟಲು ನಿರ್ಧರಿಸಿದರು. ಒಮ್ಮೆ ಬೀರಬಲ್ ಸಭೆಗೆ ಬಂದಾಗ ಎಲ್ಲರ ಸಲಹೆಯಂತೆ ಅಕ್ಬರ್ ನು ‘ಬೀರಬಲ್ ನಿನಗೆ ನ್ಯಾಯ ಬೇಕೋ ಅಥವಾ ಚಿನ್ನದ ನಾಣ್ಯ ಬೇಕೋ’ ಎಂದು ಕೇಳಿದರು.. ಆಗ ಬೀರಬಲ್ ‘ನನಗೆ ನಾಣ್ಯಗಳು ಬೇಕು’ ಎಂದು ಹೇಳಿದ.. ಅಕ್ಬರನಿಗೆ ಈ ಮಾತು ಕೇಳಿ ಬೇಸರವಾಯ್ತು.. ‘ಬೀರಬಲ್ ನೀನು ಹಣದಾಸೆಗೆ ಮಾರುಹೋಗುವವನಲ್ಲ..

ನ್ಯಾಯಕ್ಕಾಗಿ ಶ್ರಮಿಸುವ ನ್ಯಾಯವಂತ ಎಂದುಕೊಂಡಿದ್ದೆ.. ಆದರೆ ನೀನು ನನಗೆ ನಿರಾಸೆ ಮಾಡಿದೆ.. “ನಮ್ಮ ರಾಜ್ಯದಲ್ಲಿ ನ್ಯಾಯ ನೆಲೆಸುವಂತೆ ಮಾಡುತ್ತೀಯ ಎಂದುಕೊಂಡಿದ್ದೆ.. ಆದರೆ ನೀನು ಆ ನಂಬಿಕೆಯನ್ನು ಉಳಿಸಿಕೊಳ್ಳಲಿಲ್ಲ ಎಂದರು ಅಕ್ಬರ್.

ಅದಕ್ಕೆ ಬೀರಬಲ್ ‘ಸ್ವಾಮಿ ಯಾರಲ್ಲಿ ಏನಿಲ್ಲವೋ ಅದನ್ನೇ ಬಯಸುತ್ತಾರೆ, ನನಗೆ ನಿಮ್ಮ ರಾಜ್ಯದಲ್ಲಿ ನ್ಯಾಯ ಸಿಕ್ಕಿದ್ದೆ, ನ್ಯಾಯ ತುಂಬಿ ತುಳುಕುತ್ತಿರುವಾಗ ಮತ್ತೆ ನ್ಯಾಯ ಬೇಕು ಎಂದು ಕೇಳುವುದು ಮೂರ್ಖತನವಲ್ಲವೇ..??

ಅದಕ್ಕೆ ನಾನು ನಾಣ್ಯ ಕೇಳಿದೆ’ ಎಂದು ಉತ್ತರಿಸಿದ. ಅಕ್ಬರನಿಗೆ ಬೀರಬಲ್ಲನ ಮಾತು ಕೇಳಿ ಸಮಾಧಾನವಾಯ್ತು.. ಆಸ್ಥಾನಿಕರಿಗೆ ಬೀರಬಲ್ಲನನ್ನು ಪರೀಕ್ಷಿಸಿದ್ದಕ್ಕಾಗಿ ನಾಚಿಕೆಯಾಯಿತು

About admin

Check Also

ಯಡಿಯೂರಪ್ಪಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ..!

ಹೌದು ಇದೇನಪ್ಪ ಯಡಿಯೂರಪ್ಪಗೆ ಕುಮಾರಸ್ವಾಮಿ ಕುರ್ಚಿ ಬಿಟ್ಟುಕೊಟ್ಟಿದ್ದಾರೆ ಅಂದ್ರೆ ಎಲ್ಲರು ಶಾಕ್ ಆಗುವ ವಿಚಾರವೇ ಈ ಎಲ್ಲ ನಾಯಕರು ಚುನಾವಣೆ …

Leave a Reply

Your email address will not be published. Required fields are marked *