Breaking News
Home / ಇತ್ತೀಚಿನ ಸುದ್ದಿಗಳು / ನಾನು ನನ್ನಿಂದಲೇ ಎಂಬ ಅಹಂನಿಂದ ಅಂಧಕಾರವೇ ಹೊರತು ಬೆಳಕಿನ ಸಾಧ್ಯವಿಲ್ಲ ಎಂಬುದಕ್ಕೆ ಒಂದು ಅದ್ಬುತ ಸ್ಟೋರಿ ಇಲ್ಲಿದೆ ನೋಡಿ..!

ನಾನು ನನ್ನಿಂದಲೇ ಎಂಬ ಅಹಂನಿಂದ ಅಂಧಕಾರವೇ ಹೊರತು ಬೆಳಕಿನ ಸಾಧ್ಯವಿಲ್ಲ ಎಂಬುದಕ್ಕೆ ಒಂದು ಅದ್ಬುತ ಸ್ಟೋರಿ ಇಲ್ಲಿದೆ ನೋಡಿ..!

ಒಂದು ದಿನ ಒಂದು ಮನೆಯಲ್ಲಿ ದೀಪಕ್ಕೂ ಮತ್ತು ಅದರಲ್ಲಿನ ಎಣ್ಣೆಗೂ ಒಂದು ಚಿಕ್ಕ ಭಿನ್ನಾಭಿಪ್ರಾಯ ಶುರುವಾಯಿತು.

ದೀಪ” ನನ್ನಿಂದ ಜ್ಯೋತಿ ಉರಿಯುತ್ತಿದೆ ಆದ್ದರಿಂದ ಬೆಳಕು ನನ್ನದು ” ಎಂದು ಹೇಳುತ್ತದೆ.

ಅದಕ್ಕೆ ಪ್ರತಿಯಾಗಿ ದೀಪದಲ್ಲಿದ್ದ ಎಣ್ಣೆ ” ನಾನು ಆ ಜ್ಯೋತಿಗೆ ಜೀವಾಳ.ನಾನೇ ಇರದಿದ್ದರೆ ಜ್ಯೋತಿಯು ಇಲ್ಲ, ಬೆಳಕೂ ಇಲ್ಲ ಅದಕ್ಕಾಗಿ ಆ ಬೆಳಕು ನನಗೆ ಸೇರಿದ್ದು” ಎಂದಿತು.

ಇದನ್ನು ಕೇಳಿದ ಬತ್ತಿ ” ಇಬ್ಬರು ಸುಮ್ಮನಿರಿ ನಾನು ಉರಿಯುತ್ತಿರುವದಿಂದಲೇ ಜ್ಯೋತಿ ಉರಿಯುತ್ತಿದೆ ಆದ್ದರಿಂದ ಬೆಳಕು ನನ್ನದು “ಎಂದಿತು.

ಈ ಕಚ್ಚಾಟವನ್ನು ನೋಡುತಿದ್ದ ಗಾಳಿಯು ತಾನು ಯಾರಿಗೂ ಕಡಿಮೆ ಇಲ್ಲವೆಂಬಂತೆ ” ನಾನು ಇಲ್ಲದೇ ಜ್ಯೋತಿ ಉರಿಯುವುದಿಲ್ಲ , ನಾನು ಹೆಚ್ಚಾದರೆ ಅದು ಆರಿಹೋಗುತ್ತದೆ ಆದ್ದರಿಂದ ಬೆಳಕು ನನ್ನದು” ಎಂದು ವಾದಿಸಿತು.

ಹೀಗೆ ಇದು ಅತಿರೇಕವಾಗಿ ನಾನು ನನ್ನಿಂದ ಎಂಬ ಕಚ್ಚಾಟದಲ್ಲಿ ಗಾಳಿಯಿಂದ ಬಿದ್ದು ದೀಪ ಒಡೆದು ಹೋಗುತ್ತದೆ. ಅದರಿಂದ ಎಣ್ಣೆ ಹರಿದು ಹೋಗುತ್ತದೆ. ಎಣ್ಣೆಯಿಲ್ಲದ ಬತ್ತಿಯು ಕುಗ್ಗಿ ಹೋಗುತ್ತದೆ .ಕೊನೆಗೆ ಉರಿಯುತ್ತಿದ್ದ ಜ್ಯೋತಿ ನಂದಿಹೋಗುತ್ತದೆ !

ಎಲ್ಲವೂ ಒಟ್ಟಾಗಿ ಇರುತ್ತಿದ್ದರೆ ಆ ಜ್ಯೋತಿಯ ಭರವಸೆಯ ಬೆಳಕು ಎಲ್ಲರ ಪಾಲಾಗುತ್ತಿತ್ತು.

” ನಾನು ನಂನಿದಲೆ ಎಂಬ ಅಹಂನಿಂದ ಅಂಧಕಾರವೇ ಹೊರತು ಬೆಳಕಿನ ಸಾಧ್ಯವಿಲ್ಲ”

About admin

Check Also

ಯಡಿಯೂರಪ್ಪಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ..!

ಹೌದು ಇದೇನಪ್ಪ ಯಡಿಯೂರಪ್ಪಗೆ ಕುಮಾರಸ್ವಾಮಿ ಕುರ್ಚಿ ಬಿಟ್ಟುಕೊಟ್ಟಿದ್ದಾರೆ ಅಂದ್ರೆ ಎಲ್ಲರು ಶಾಕ್ ಆಗುವ ವಿಚಾರವೇ ಈ ಎಲ್ಲ ನಾಯಕರು ಚುನಾವಣೆ …

Leave a Reply

Your email address will not be published. Required fields are marked *