Breaking News
Home / ಇತ್ತೀಚಿನ ಸುದ್ದಿಗಳು / ಎಲೆಕ್ಷನ್ ಹೊತ್ತಲ್ಲೇ ರಾಜ್ಯದ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾದ ಸಿಎಂ..!

ಎಲೆಕ್ಷನ್ ಹೊತ್ತಲ್ಲೇ ರಾಜ್ಯದ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾದ ಸಿಎಂ..!

ಚುನಾವಣಾ ಸಮಯದಲ್ಲೇ ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದೆ. ಈ ಗಿಫ್ಟ್ ಮೂಲಕ ರಾಜ್ಯದಲ್ಲಿರೋ ಸರ್ಕಾರಿ ನೌಕರರ ಜೊತೆ ಅವರ ಕುಟುಂಬದವರ ಮತವನ್ನು ಸೆಳೆಯಲು ಮಾಸ್ಟರ್ ಪ್ಲಾನ್ ಮಾಡಿದೆ.

ಇನ್ನೇನು ಕೆಲವೇ ದಿನಗಳಲ್ಲಿ ನಿವೃತ್ತರಾಗಲಿರೋ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದೆ. ಚುನಾವಣಾ ಸಮಯದಲ್ಲಿ ರಾಜ್ಯದಲ್ಲಿರೋ 5 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಓಟ್ ಬ್ಯಾಂಕ್ ಸೆಳೆಯೋ ಸಲುವಾಗಿ ನಿವೃತ್ತಿ ವಯಸ್ಸನ್ನು ರಾಜ್ಯ ಸರ್ಕಾರ 2 ವರ್ಷ ಹೆಚ್ಚಿಸಲು ಮುಂದಾಗಿದೆ. ಈಗಿರುವ 60 ರ ಬದಲಾಗಿ ಇನ್ನೆರಡು ವರ್ಷ ಹೆಚ್ಚಿಸಲು ತೀರ್ಮಾನ ಮಾಡಲಾಗಿದೆ. ಅಂದ್ರೆ ಇನ್ನು ಮುಂದೆ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 62 ಆಗಲಿದೆ.


ಈ ಬಗ್ಗೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿರೋ ಸಿಎಂ, ಮುಂಬರುವ ಬಜೆಟ್‍ನಲ್ಲಿ ಈ ಬಗ್ಗೆ ಘೋಷಣೆ ಮಾಡುತ್ತೇವೆ ಅಂತ ಅಧ್ಯಕ್ಷರಿಗೆ ಭರವಸೆ ನೀಡಿದ್ದಾರಂತೆ. ಅಷ್ಟೇ ಅಲ್ಲದೆ ರಾಜ್ಯ ಸರ್ಕಾರಿ ನೌಕರರ ಸಂಘದ ಇತರೆ ಬೇಡಿಕೆಗಳಿಗಳಿಗೂ ಅಸ್ತು ಅಂದಿರೋ ಸಿದ್ದರಾಮಯ್ಯ, ಜನವರಿ 18 ರಂದು ಕೈಗೊಂಡಿದ್ದ ಮುಷ್ಕರವನ್ನು ಕೈಬಿಡಬೇಕು ಅಂತ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಕೃಪೆ:ಪಬ್ಲಿಕ್

About admin

Check Also

ಪ್ರಧಾನಿ ಮೋದಿಯಿಂದ ಮತ್ತೊಂದು ಬಿಗ್ ಯೋಜನೆ ವಿಶ್ವ ವ್ಯಾಪಿ ಚಾಲನೆ..!

ಹೌದು ಪ್ರಧಾನಿ ಮೋದಿಯಿಂದ ಮತ್ತೊಂದು ಬಿಗ್ ಯೋಜನೆ ವಿಶ್ವ ವ್ಯಾಪಿ ಚಾಲನೆ ನೀಡಲಿದ್ದಾರೆ ಏನು ಯಾವ ರೀತಿ ಅನ್ನೋದು ಇಲ್ಲಿದೆ …

Leave a Reply

Your email address will not be published. Required fields are marked *