Breaking News
Home / ಇತ್ತೀಚಿನ ಸುದ್ದಿಗಳು / ಟೀ ಮತ್ತು ಕಾಫಿ ಕಲೆ ಹೋಗಲಾಡಿಸುವ ಸುಲಭ ವಿಧಾನ..!

ಟೀ ಮತ್ತು ಕಾಫಿ ಕಲೆ ಹೋಗಲಾಡಿಸುವ ಸುಲಭ ವಿಧಾನ..!

ಲೋಟ, ಟೀ ಮಗ್‌, ಸಾಸರ್‌ಗಳಲ್ಲಿ ಚಹಾ, ಕಾಫಿಗಳ ಕಲೆಗಳಿದ್ದರೆ ನೋಡಲು ಚೆನ್ನಾಗಿ ಕಾಣಿಸುವುದಿಲ್ಲ. ಕಲೆಗಳಿರುವ ಕಪ್‌ಗಳಲ್ಲಿ ಅತಿಥಿಗಳಿಗೆ ಟೀ, ಕಾಫಿ ಕೊಟ್ಟರೆ ಅವರಿಗೂ ಅದನ್ನು ಕುಡಿಯಲು ಮುಜುಗರವಾಗುತ್ತದೆ. ಕಲೆ ನಿವಾರಣೆಗೆ ಕೆಲವು ಸುಲಭ ಉಪಾಯಗಳಿವೆ.

-ಒದ್ದೆ ಬಟ್ಟೆಯನ್ನು ಉಪ್ಪಿನಲ್ಲಿ ಅದ್ದಿ ಕಾಫಿ ಅಥವಾ ಚಹಾ ಕಲೆಯನ್ನು ಒರೆಸಿದರೆ ಕಲೆ ನಿವಾರಣೆಯಾಗುತ್ತದೆ.

-ಕಾರ್ನ್‌ ಸ್ಟಾರ್ಚ್‌ ಮತ್ತು ವಿನಿಗರ್‌ನ ಪೇಸ್ಟ್‌ ಅನ್ನು ಕಲೆಯಿರುವ ಜಾಗಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಡಿ. ಬಳಿಕ ಅದನ್ನು ಸ್ಕ್ರಬ್‌ ಮಾಡಿದರೆ ಕಲೆ ಹೋಗುತ್ತದೆ.

-ಬೇಕಿಂಗ್‌ ಸೋಡ ಮತ್ತು ನಿಂಬೆ ರಸವನ್ನು ಬೆರೆಸಿ ಕಲೆಯ ಮೇಲೆ ಹಚ್ಚಿ ಒರೆಸಿದರೂ ಕಾಫಿ ಮತ್ತು ಟೀ ಕಲೆಗಳು ಇನ್ನಿಲ್ಲವಾಗುತ್ತವೆ.

-ಬೇಕಿಂಗ್‌ ಸೋಡ ಅಥವಾ ವಿನಿಗರ್‌ ಬೆರೆಸಿದ ಬಿಸಿ ನೀರಿನಲ್ಲಿ ಕಲೆಗಳಿರುವ ಕಪ್‌ ಅಥವಾ ಪಾತ್ರೆಗಳನ್ನು ಹಾಕಿಟ್ಟರೂ ಕಲೆ ಹೋಗುತ್ತದೆ.

-ಬಿಸಿ ನೀರಿಗೆ ಅರ್ಧ ಕಪ್‌ ನಿಂಬೆ ರಸ ಬೆರೆಸಿ ಅದರಲ್ಲಿ ಕಲೆಗಳಿರುವ ಕಪ್‌ಗಳನ್ನು ಹಾಕಿಟ್ಟು ಒಂದು ರಾತ್ರಿ ಬಿಟ್ಟು ಮರುದಿನ ಚೆನ್ನಾಗಿ ತೊಳೆದರೆ ಕಲೆಗಳೆಲ್ಲಾ ಹೋಗುತ್ತವೆ.


ಸಂಗ್ರಹ:ವಿಕೆ

About admin

Check Also

ಮೋದಿಯ ಕನಸಿನ ಯೋಜನೆಯಾದ ಅಂಚೆ ಬ್ಯಾಂಕ್ ಖಾತೆ ತೆಗೆಯೋದು ಹೇಗೆ..!

ಹೌದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌’ಗೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಚಾಲನೆ ನೀಡಿದ್ದಾರೆ. …

Leave a Reply

Your email address will not be published. Required fields are marked *