Breaking News
Home / ಆರೋಗ್ಯ / ನೀವು ಈ ಉಂಡೆ ತಿನ್ನೋದು ಶುರುಮಾಡಿದರೆ ನಿಮ್ಮ ಪವರ್ ಮತ್ತು ತೂಕ ಸಹ ಹೆಚ್ಚಾಗುತ್ತದೆ..!

ನೀವು ಈ ಉಂಡೆ ತಿನ್ನೋದು ಶುರುಮಾಡಿದರೆ ನಿಮ್ಮ ಪವರ್ ಮತ್ತು ತೂಕ ಸಹ ಹೆಚ್ಚಾಗುತ್ತದೆ..!

ಅಂಟಿನ ಉಂಡೆ ಬಗ್ಗೆ ನೀವು ಕೇಳಿರಬಹುದು, ಆದರೆ ಇದರಿಂದ ಉಂಟಾಗುವ ಲಾಭಗಳ ಬಗ್ಗೆ ನಿಮಗೆ ಗೊತ್ತಿದೆಯೇ? ಈ ಅಂಟಿನ ಉಂಡೆ ದುರ್ಬಲತೆಯನ್ನು ದೂರ ಮಾಡಲು ಸಹಾಯ ಮಾಡುತ್ತದೆ. ಅದರಲ್ಲೂ ಮುಖ್ಯವಾಗಿ ಚಳಿಗಾಲದಲ್ಲಿ ಅಂಟಿನ ಉಂಡೆ ಸೇವಿಸಿದರೆ ಡೈಜೆಶನ್‌ ಚೆನ್ನಾಗಿ ಆಗುತ್ತದೆ. ಈ ದಿನಗಳಲ್ಲಿ ಹಸಿವು ಕೂಡ ಹೆಚ್ಚಾಗಿರುತ್ತದೆ. ಆ ಸಮಯದಲ್ಲಿ ಇದನ್ನು ಸೇವನೆ ಮಾಡಿದರೆ ಅಷ್ಟೊಂದು ಹಸಿವು ಕೂಡ ಉಂಟಾಗೋದಿಲ್ಲ. ಜೊತೆಗೆ ನೀವು ಸ್ಟ್ರಾಂಗ್‌ ಮಸಲ್ಸ್‌ ಹೊಂದಲು ಸಹ ಇದು ಸಹಾಯ ಮಾಡುತ್ತದೆ.

ಈ ಲಡ್ಡು ಮಾಡೋದು ಹೇಗೆ?
ಒಂದು ಪ್ಯಾನ್‌ನಲ್ಲಿ ತುಪ್ಪ ಹಾಕಿ ಅದಕ್ಕೆ ಅಂಟನ್ನು ಹಾಕಿ ಬಿಸಿ ಮಾಡಿ. ನಂತರ ಅದನ್ನು ಮಿಕ್ಸಿಗೆ ಹಾಕಿ ಹುಡಿ ಮಾಡಿ. ಈಗ ಅದಕ್ಕೆ ಸಕ್ಕರೆ ಪುಡಿ, ಅಂಟು, ಏಲಕ್ಕಿ ಪುಡಿ, ಬೇಕಾದರೆ ಡ್ರೈ ಫ್ರುಟ್ಸ್‌ ಹಾಕಿ ಲಡ್ಡು ತಯಾರಿಸಿ. ಇದನ್ನು ಏಯರ್‌ ಟೈಟ್‌ ಡಬ್ಬದಲ್ಲಿ ಹಾಕಿಡಿ.


ಸೂಚನೆ : ನಿಮ್ಮ ತೂಕ ಈಗಾಗಲೆ ಹೆಚ್ಚಾಗಿದ್ದರೆ ಪ್ರತಿದಿನ ಒಂದೇ ಲಡ್ಡು ಸೇವಿಸಿ. ಇದನ್ನು ಹೆಚ್ಚು ತಿಂದರೆ ತೂಕ ಹೆಚ್ಚುತ್ತದೆ. ಒಂದು ದಿನದಲ್ಲಿ ಎರಡಕ್ಕಿಂತ ಹೆಚ್ಚು ಅಂಟಿನ ಉಂಡೆ ತಿನ್ನಬೇಡಿ. ಇದರಿಂದ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ.

ಇದರಿಂದ ಉಂಟಾಗುವ ಲಾಭಗಳೇನು?
ಇದರಲ್ಲಿ ಐರನ್‌ ಇರುತ್ತದೆ. ಇದರಿಂದ ಬ್ಲಡ್‌ ಸರ್ಕ್ಯುಲೇಶನ್‌ ಇಂಪ್ರೂವ್‌ ಆಗುತ್ತದೆ. ಹೊಟ್ಟೆ ತುಂಬುತ್ತದೆ.
ಇದರಲ್ಲಿ ಪ್ರೊಟೀನ್‌ ಮತ್ತು ಕ್ಯಾಲ್ಶಿಯಂ ಇರುತ್ತದೆ. ಇದರಿಂದ ಮೂಳೆಗಳು ಮತ್ತು ಮಸಲ್ಸ್‌ ಸ್ಟ್ರಾಂಗ್‌ ಆಗುತ್ತದೆ.

ಇದರಲ್ಲಿ ಫೈಬರ್ಸ್‌ ಇರುತ್ತದೆ. ಇದು ಡೈಜೆಶನ್‌ ಇಂಪ್ರೂವ್‌ ಮಾಡುತ್ತದೆ. ಹೊಟ್ಟೆಯ ಸಮಸ್ಯೆಗಳನ್ನು ದೂರ ಮಾಡುತ್ತದೆ.
ಸಂಗ್ರಹ:ಈನಾಡು

About admin

Check Also

ಹುಳುಕಡ್ಡಿ ಸಮಸ್ಯೆಗೆ ನೇರಳೆಯಲ್ಲಿ ಅಡಗಿದೆ ಓಷಧಿ ಗುಣಗಳು..!

ನಮಗೆ ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು …

Leave a Reply

Your email address will not be published. Required fields are marked *