Breaking News
Home / ಇತ್ತೀಚಿನ ಸುದ್ದಿಗಳು / ಮಾಗಡಿ ರಂಗನಾಥ ಸ್ವಾಮಿ ಕ್ಷೇತ್ರದ ಮಹತ್ವ ಮತ್ತು ತಿರುಪತಿಗೆ ಹೋಗಲಾಗದವರು ಈ ವೇಂಕಟೇಶ್ವರ ಸ್ವಾಮಿಯನ್ನು ಆರಾಧಿಸುತ್ತಾರೆ ಯಾಕೆ ಗೊತ್ತಾ..?

ಮಾಗಡಿ ರಂಗನಾಥ ಸ್ವಾಮಿ ಕ್ಷೇತ್ರದ ಮಹತ್ವ ಮತ್ತು ತಿರುಪತಿಗೆ ಹೋಗಲಾಗದವರು ಈ ವೇಂಕಟೇಶ್ವರ ಸ್ವಾಮಿಯನ್ನು ಆರಾಧಿಸುತ್ತಾರೆ ಯಾಕೆ ಗೊತ್ತಾ..?

ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖಿಸಿರುವಂತೆ ಇಂದಿನ ತಿರುಮಲೆ ಮಾಗಡಿ ಕ್ಷೇತ್ರ ಸ್ವರ್ಣಾಚಲ-ಸ್ವರ್ಣಾದ್ರಿ-ಮಾಂಡವ್ಯ ಕುಟಿ- ಮಾಕುಟಿ- ಮಾಗುಡಿ ಎಂಬುದಾಗಿ ಕರೆಯಲ್ಪಟ್ಟ ಪುಣ್ಯ ಕ್ಷೇತ್ರ.

ಈ ಕ್ಷೇತ್ರ ಅಷ್ಟ ತೀರ್ಥಗಳಿಂದಲೂ, ಅಷ್ಟ ಪರ್ವತಗಳಿಂದಲೂ, ಪವಿತ್ರ ಪುಣ್ಯನದಿ ಹಾಗೂ ಗಿರಿಕಾನನಗಳಿಂದ ಕೂಡಿದ ಕ್ಷೇತ್ರವಾಗಿದೆ. ಮಾಂಡವ್ಯ, ಕಣ್ವ, ವಶಿಷ್ಠ, ಪುರಂಜಯ, ಪ್ರಹ್ಲಾದ ಮುಂತಾದವರ ತಪೋ ಕ್ಷೇತ್ರವಾಗಿದ್ದು, ತಿರುಪತಿ ಶ್ರೀನಿವಾಸನ ಆಜ್ನೆಯಂತೆ ಮಾಂಡವ್ಯ ಋಷಿಗಳು ತಿರುಮಲೆಯ ಸ್ವರ್ಣಾದ್ರಿ ಕ್ಷೇತ್ರದಲ್ಲಿ ಕುಟೀರವನ್ನು ಕಟ್ಟಿಕೊಂಡು ತಪಸ್ಸು ಮಾಡಿದರು. ಆಗ ಒಂದು ದಿನ ಸ್ವಪ್ನದಲ್ಲಿ ಶ್ರೀನಿವಾಸ ದೇವರು ಕಾಣಿಸಿಕೊಂಡು ಉದ್ಭವ ಸಾಲಿಗ್ರಾಮ ರೂಪದಲ್ಲಿರುವ ನನ್ನನ್ನು ನಿತ್ಯವೂ ಆರಾಧಿಸಿದರೆ ಇಷ್ಟಾರ್ಥ ಸಿದ್ಧಿಯಾಗಿ ಮೋಕ್ಷ ಲಭಿಸುತ್ತದೆ ಎಂದು ಹೇಳಿದನಂತೆ ಅದಂರೆಯೇ ಮಾಂಡವ್ಯ ಋಷಿಗಳು ಉದ್ಭವ ಸಾಲಿಗ್ರಾಮವನ್ನು ನಂತರ ಅಲ್ಲಿ ವೇಂಕಟೇಶ್ವರ ಸ್ವಾಮಿಯ ವಿಗ್ರಹವನ್ನು
ಪ್ರತಿಷ್ಠಾಪನೆ ಮಾಡಿ ವಸಿಷ್ಠರ ಜೊತೆ ವೇಂಕಟೇಶ್ವರ ಸ್ವಾಮಿಯನ್ನು ಆರಾಧಿಸಿ ಮುಕ್ತಿಯನ್ನು ಪಡೆದರೆಂದು ಹೇಳಲಾಗಿದೆ.

ಮಾಂಡವ್ಯ ಋಷಿಗಳು ತಪಸ್ಸನ್ನಾಚರಿಸಿದ ಕ್ಷೇತ್ರವಾದ್ದರಿಂದ ಇಲ್ಲಿರುವ ದೇವರನ್ನು ಮಾಂಡವ್ಯನಾಥನೆಂಬುದಾಗಿ ಹಾಗೂ ರೂಢಿಯಲ್ಲಿ ಮಾಗಡಿ ರಂಗನಾಥಸ್ವಾಮಿ ಎಂಬುದಾಗಿ ಪ್ರಸಿದ್ಧಿ ಪಡೆಯಿತು.

ದೇವಾಲಯದಲ್ಲಿರುವ ಉದ್ಭವ ಸಾಲಿಗ್ರಾಮಕ್ಕೆ ಎಷ್ಟೇ ನೀರಿನಿಂದ ಅಭಿಷೇಕ ಮಾಡಿದರೂ ಅದು ಒಂದು ಹನಿಯೂ ಇರದಂತೆ ಇಂಗಿ ಹೋಗುವುದು ಈ ಕ್ಷೇತ್ರದ ಮತ್ತೊಂದು ಮಹಿಮೆಯಾಗಿದ್ದು, ಆ ನೀರು ಎಲ್ಲಿಗೆ ಹೋಗುತ್ತದೆ ಎಂಬುದು ಈ ವರೆಗೂ ತಿಳಿಯದ ರಹಸ್ಯವಾಗಿದೆ.

ತಿರುಪತಿಗೆ ಹೋಗಲಾಗದವರು ಈ ಕ್ಷೇತ್ರದಲ್ಲಿರುವ ವೇಂಕಟೇಶ್ವರ ಸ್ವಾಮಿಯನ್ನು ಆರಾಧಿಸಿದರೆ ಇಷ್ಟಾರ್ಥ ಫಲ ಸಿಗುವುದೆಂಬ ನಂಬಿಕೆ ಇದೆ. ಮಾಗಡಿಯ ಸ್ವರ್ಣಾದ್ರಿಗಿರಿ ತಿರುಮಲೆಯಲ್ಲಿ ಶ್ರೀರಂಗನಿಗೆ ಧನುರ್ಮಾಸದ ವಿಶೇಷ ಪೊಜಾಕೈಂಕರ್ಯಗಳು ಶ್ರೀಸನ್ನಿಧಾನದಲ್ಲಿ ಧನುರ್ಮಾಸದ ಪೊಜಾಸೇವೆಗಳು ಬೆಳಿಗ್ಗೆ 4.30ರಿಂದಲೇ ಪ್ರಾರಂಭವಾಗುತ್ತದೆ. ಕಾಮಧೇನು ಗೋಪೊಜೆಯ ನಂತರ ಶ್ರೀರಂಗನಿಗೆ ಆಂತರಿಕವಾಗಿ ದೈನಂದಿನ ತಿರುವರಾಧನೆ ಸಮರ್ಪಣೆಯಾಗಲಿದೆ. ಇದಾದ ಬಳಿಗೆ ಶ್ರೀಯವರಿಗೆ ಅರ್ಚನೆ,ನಿವೇಧನೆ, ತಿರುಪ್ಪಾವೈ ಪಾರಯಣ ನೆರವೇರಲಿದೆ.

ಪ್ರತಿ ನಿತ್ಯ ತಿರುಪ್ಪವೈ ನಲ್ಲಿನ ಒಂದೊಂದು ಪಾಶುರಗಳ ಪಾರಾಯಣ ಆಂಡಾಳ್ ತಾಯಿಯ ಸಮ್ಮುಖದಲ್ಲಿ ಶ್ರೀರಂಗನಾಥಸ್ವಾಮಿಯ ಪಾದಕಮಲಗಳಿಗೆ ಅರ್ಪಣೆಯಾಗಲಿದೆ 6ರ ವರೆಗೆ ಶ್ರೀದೇಗುಲ ತೆರೆದಿರುತ್ತದೆ ಪುನಃ 9ಕ್ಕೆ ಶ್ರೀದೇಗುಲ ತೆರೆಯಲಾಗುತ್ತದೆ.
ಕೃಪೆ:kp

About admin

Check Also

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಅವರಿಂದ ಈ ದಿನದ ರಾಶಿ ಭವಿಷ್ಯ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ …

Leave a Reply

Your email address will not be published. Required fields are marked *