Breaking News
Home / ಇತ್ತೀಚಿನ ಸುದ್ದಿಗಳು / ಏನ್ ಕಾಲನಪ್ಪ ಯಾವ ರಾಶಿಗೆ ಯಾವ ಮೊಬೈಲ್ ಸೂಕ್ತ ಇಲ್ಲಿದೆ ನೋಡಿ..!

ಏನ್ ಕಾಲನಪ್ಪ ಯಾವ ರಾಶಿಗೆ ಯಾವ ಮೊಬೈಲ್ ಸೂಕ್ತ ಇಲ್ಲಿದೆ ನೋಡಿ..!

ಮೇಷ
ರಾಶಿಯವರಿಗೆ ಸಹನೆ ಕಡಿಮೆ. ಬಹಳ ಬೇಗ ತಾಳ್ಮೆ ಕಳೆದುಕೊಳ್ಳುತ್ತಾರೆ. ಕೈಗೊಂಡ ಕಾರ್ಯ ಬಹಳ ಬೇಗ ಆಗಬೇಕೆಂದು ಬಯಸುತ್ತಾರೆ. ಆದಕಾರಣ 6 ಅಥವಾ 8 ಜಿಬಿ ರ‍್ಯಾಮ್, 64 ಅಥವಾ 128 ಜಿಬಿ ಸ್ಟೋರೇಜ್ ಫೋನ್‌ಗಳನ್ನು ಬಳಸಿದರೆ ಒಳಿತು. ಇತ್ತೀಚೆಗೆ ಬಿಡುಗಡೆಯಾಗಿರುವ ಒನ್‌ಪ್ಲಸ್ 5 ಸ್ಮಾರ್ಟ್‌ಫೋನ್ ಅತ್ಯುತ್ತಮ ಆಯ್ಕೆ.

ವೃಷಭ
ರಾಶಿಗೆ ಸೇರಿದ ವ್ಯಕ್ತಿಗಳು ಪ್ರಕೃತಿಯನ್ನು, ಸೌಂದರ್ಯವನ್ನು ಹೆಚ್ಚಾಗಿ ಆರಾಧಿಸುತ್ತಾರೆ. ಇವರು ಕೈಗೊಂಡ ಕಾರ್ಯವನ್ನು ಯೋಜನೆ ಪ್ರಕಾರ ಮಾಡುತ್ತಾರೆ. ಅತ್ಯುನ್ನತ ಗುರಿಯನ್ನು ಸಾಧಿಸಬೇಕೆಂಬ ಆಶಯ ಇವರಲ್ಲಿ ಬಲವಾಗಿ ಇರುತ್ತದೆ. ಆದಕಾರಣ ಇವರು ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್8ನಂತಹ ಹೈ ಎಂಡ್ ಫೋನ್ ಬಳಸಿದರೆ ಉತ್ತಮ.

ಮಿಥುನ
ರಾಶಿ ಅವರು ತಮ್ಮ ಭಾವನೆಗಳನ್ನು ಸೃಜನಾತ್ಮಕವಾಗಿ ಹೇಳುತ್ತಾರೆ. ಜೊತೆಯಾಗಿ ಅಲ್ಲದೆ ಒಂಟಿಯಾಗಿ ಇರಲು ಇಷ್ಟಪಡುತ್ತಾರೆ. ಆದಕಾರಣ ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್ 8 ಪ್ಲಸ್ ಫೋನ್ ಅನುಕೂಲವಾಗಿರುತ್ತದೆ.

ಕರ್ನಾಟಕ
ರಾಶಿ ಅವರು ಎಲ್ಲಿಗೇ ಹೋದರೂ, ಯಾವುದೇ ಕೆಲಸ ಮಾಡಿದರೂ ಸೌಲಭ್ಯಗಳನ್ನು ಬಯಸುತ್ತಾರೆ. ಅಷ್ಟೇ ಹೊರತು ಅನಗತ್ಯವಾಗಿ ಆತಂಕಕ್ಕೆ ಒಳಗಾಗಲ್ಲ, ಗಡಿಬಿಡಿ ಆಗಲ್ಲ. ನಿರ್ದಿಷ್ಟವಾದ ಯೋಜನೆಯಿಂದ ಇರುತ್ತಾರೆ. ಆದಕಾರಣ ಗೂಗಲ್ ಪಿಕ್ಸೆಲ್ ಫೋನ್ ಬಳಸಿದರೆ ಚೆನ್ನಾಗಿರುತ್ತದೆ.

ಸಿಂಹ
ರಾಶಿಗೆ ಸೇರಿದ ವ್ಯಕ್ತಿಗಳು ಹೊಸ ವಿಷಯಗಳನ್ನು ಕಲಿಯಬೇಕೆಂಬ ಕುತೂಹಲ ಜಾಸ್ತಿ. ಎಲ್ಲಾ ವಿಷಯಗಳಲ್ಲಿ ಇತರರಿಗಿಂತ ಮುಂದೆ ಇರಬೇಕೆಂದು ಬಯಸುತ್ತಾರೆ. ಐಶಾರಾಮಿ ವಿಚಾರಗಳ ಮೇಲೆ ಆಸಕ್ತಿ ಹೆಚ್ಚು. ಎಚ್‌ಟಿಸಿ ಯೂ 11 ಫೋನ್ ಇವರಿಗೆ ಅನುಕೂಲವಾಗಿರುತ್ತದೆ.

ಕನ್ಯಾ
ರಾಶಿಯವರು ಸರಳವಾಗಿ ಇರಬೇಕೆಂದು ಬಯಸುತ್ತಾರೆ. ಅನಗತ್ಯ ಖರ್ಚುಗಳಿಗೆ ದೂರವಾಗಿ ಇರುತ್ತಾರೆ. ಸಾಮಾನ್ಯ ವ್ಯಕ್ತಿಯಂತೆ ಬದುಕಲು ಬಯಸುತ್ತಾರೆ. ಆದಕಾರಣ ಸಾಮಾನ್ಯ ಮಾಡೆಲ್ ಮೋಟೋ ಝಡ್ ಪ್ಲೇ ಫೋನ್ ಇವರಿಗೆ ಉತ್ತಮ.

ತುಲಾ
ರಾಶಿ ಅವರಿಗೆ ಸಂಗೀತ, ಪುಸ್ತಕಗಳೆಂದರೆ ಆಸಕ್ತಿ ಹೆಚ್ಚು. ಆ ಪ್ರಕಾರ ಅವರಿಗೆ ಎಚ್‌ಟಿಸಿ 10 ಸ್ಮಾರ್ಟ್‌ಫೋನ್ ಇವರಿಗೆ ಬೆಸ್ಟ್.

ವೃಶ್ಚಿಕ
ರಾಶಿಯವರು ನಾಲ್ಕು ಮಂದಿಯ ಜತೆ ವಿಶೇಷವಾಗಿ ಕಾಣಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಯಾವಾಗಲೂ ಪ್ರಯತ್ನಿಸುತ್ತಿರುತ್ತಾರೆ. ಎಲ್ಲರಂತೆ ಇರಬೇಕೆಂದು ಬಯಸುತ್ತಾರೆ. ಭಿನ್ನವಾದ ಇವರ ಆಲೋಚನೆಗಳಿಗೆ ಭಿನ್ನವಾದ ಫೋನ್ ಬ್ಲಾಕ್‍ಬೆರ್ರಿ ಪಾಸ್ ಪೋರ್ಟ್.

ಧನುಸ್ಸು
ರಾಶಿಯವರು ಯಾವಾಗಲೂ ಸೃಜನಶೀಲರಾಗಿರುತ್ತಾರೆ. ಇವರೂ ಅಷ್ಟೇ ನಾಲ್ಕು ಮಂದಿಯೊಂದಿಗೆ ವಿಶೇಷವಾಗಿ ಕಾಣಬೇಕೆಂದು ಬಯಸುತ್ತಾರೆ. ಇಂತಹವರಿಗೆ ಐಫೋನ್ ಉತ್ತಮ. ಐಫೋನ್ 7 ಅಥವಾ 7 ಪ್ಲಸ್ ಆದರೆ ಇವರಿಗೆ ಸೆಟ್ ಆಗುತ್ತದೆ.

ಮಕರ
ರಾಶಿಯವರು ಯಾವುದೇ ವಿಷಯದಲ್ಲೂ ನಿಖರತೆಯನ್ನು ಬಯಸುತ್ತಾರೆ. ಶೇ.100ರಷ್ಟು ಕೆಲಸ ಮಾಡಬೇಕೆಂದು ಇರುತ್ತದೆ. ಗುಣಮಟ್ಟಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಸೋನಿ ಕಂಪೆನಿಯ ಎಕ್ಸ್‌ಪೀರಿಯಾ ಎಕ್ಸ್‌ಝಡ್ ಪ್ರೀಮಿಯಂ ಫೋನ್ ಇವರಿಗೆ ಅನುಕೂಲವಾಗಿರುತ್ತದೆ.

ಕುಂಭ
ರಾಶಿಯವರು ವಿನೋದ ಪ್ರಿಯರು. ಹೆಚ್ಚಿನ ಉಲ್ಲಾಸವನ್ನು ಬಯಸುತ್ತಾರೆ. ಊಹಾಶಕ್ತಿ ಅಧಿಕವಾಗಿ ಇರುತ್ತದೆ. ಆದಕಾರಣ ಇವರಿಗೆ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್8 ಪ್ಲಸ್ ಉತ್ತಮ.

ಮೀನಾ
ರಾಶಿ ಅವರಿಗೆ ಹೊಸ ವಿಷಯಗಳ ಬಗ್ಗೆ ಹೆಚ್ಚಿನ ಕುತೂಹಲ. ಎಲ್ಲರಿಗಿಂತಲೂ ಮುಂದೆ ಇರಬೇಕೆಂದು ಭಾವಿಸುತ್ತಾರೆ. ನಾಲ್ಕು ಮಂದಿಯಲ್ಲಿ ತಾವೇ ಮೊದಲ ಸಾಲಿನಲ್ಲಿ ಇರಬೇಕೆಂದು ಬಯಸುತ್ತಾರೆ. ಆದಕಾರಣ ಆ್ಯಪಲ್ ಐಫೋನ್ 7 ಪ್ಲಸ್ ಇವರ ವ್ಯಕ್ತಿತ್ವಕ್ಕೆ ಒಪ್ಪುತ್ತದೆ.

About admin

Check Also

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಅವರಿಂದ ಈ ದಿನದ ರಾಶಿ ಭವಿಷ್ಯ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ …

Leave a Reply

Your email address will not be published. Required fields are marked *