Breaking News
Home / ಇತ್ತೀಚಿನ ಸುದ್ದಿಗಳು / ಮತ್ತೊಂದು ಬಜೆಟ್ ಮಂಡನೆಗೆ ಸಿಎಂ ಸಿದ್ದರಾಮಯ್ಯ ಸಿದ್ಧತೆ, ಯಾವ ವರ್ಗಕ್ಕೆ ಹೆಚ್ಚು ಮಾನ್ಯತೆ ನೀಡಲಿದ್ದಾರೆ ಅನ್ನೋದು ಇಲ್ಲಿದೆ ನೋಡಿ..!

ಮತ್ತೊಂದು ಬಜೆಟ್ ಮಂಡನೆಗೆ ಸಿಎಂ ಸಿದ್ದರಾಮಯ್ಯ ಸಿದ್ಧತೆ, ಯಾವ ವರ್ಗಕ್ಕೆ ಹೆಚ್ಚು ಮಾನ್ಯತೆ ನೀಡಲಿದ್ದಾರೆ ಅನ್ನೋದು ಇಲ್ಲಿದೆ ನೋಡಿ..!

2018-19ನೇ ಸಾಲಿನ ಬಜೆಟ್ ಮಂಡನೆಗೆ ಸಿದ್ಧತೆಗಳನ್ನು ಆರಂಭಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜ.18ರಿಂದ ವಿವಿಧ ಇಲಾಖೆಗಳಿಗೆ ಸೇರಿದ ಹಿರಿಯ ಅಧಿಕಾರಿಗಳು ಹಾಗೂ ಹಲವು ಸಂಘಟನೆಗಳೊಂದಿಗೆ ಪೂರ್ವ ಬಜೆಟ್ ಸಮಾಲೋಚನೆ ನಡೆಸಲಿದ್ದಾರೆ.

ರೈತಪರ ಸಂಘಟನೆಗಳು, ದಲಿತರು, ಅಲ್ಪಸಂಖ್ಯಾತರು ಹಾಗೂ ಇನ್ನಿತರೆ ಸಮುದಾಯಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಮಾಲೋಚನೆ ನಡೆಸಲಿದ್ದು, ವ್ಯಾಪಾರ ಹಾಗೂ ಉದ್ಯಮ ಸಂಘಗಳ ಅಭಿಪ್ರಾಯ ಹಾಗೂ ಸಲಹೆಗಳನ್ನು ಪಡೆಯಲಿದ್ದಾರೆ.

ಜನವರಿ. 18 ರಿಂದ ರೈತ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಲೋಚನೆಯನ್ನು ಆರಂಭಿಸಲಿದ್ದು, ಫೆ.5 ರಂದು ಅಂತಿಮವಾಗಿ ಆದಾಯ ಇಲಾಖೆ, ಸಾರಿಗೆ, ವಾಣಿಜ್ಯ, ಗಣಿ ಮತ್ತು ಭೂ ವಿಜ್ಞಾನ, ಅಂಚೆ ಚೀಟಿ ಮತ್ತು ನೋಂದಣಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತುಕತೆ ನಡೆಸಲಿದ್ದಾರೆಂದು ಮುಖ್ಯಮಂತ್ರಿ ಕಚೇರಿ ಮಾಹಿತಿ ನೀಡಿದೆ.

About admin

Check Also

ಪ್ರಧಾನಿ ಮೋದಿಯಿಂದ ಮತ್ತೊಂದು ಬಿಗ್ ಯೋಜನೆ ವಿಶ್ವ ವ್ಯಾಪಿ ಚಾಲನೆ..!

ಹೌದು ಪ್ರಧಾನಿ ಮೋದಿಯಿಂದ ಮತ್ತೊಂದು ಬಿಗ್ ಯೋಜನೆ ವಿಶ್ವ ವ್ಯಾಪಿ ಚಾಲನೆ ನೀಡಲಿದ್ದಾರೆ ಏನು ಯಾವ ರೀತಿ ಅನ್ನೋದು ಇಲ್ಲಿದೆ …

Leave a Reply

Your email address will not be published. Required fields are marked *