Breaking News
Home / ಇತ್ತೀಚಿನ ಸುದ್ದಿಗಳು / ಇಂದು ಖಂಡಗ್ರಾಸ ಚಂದ್ರಗ್ರಹಣ ಯಾರಿಗೆಲ್ಲ ಶುಭ ಯಾರಿಗೆಲ್ಲ ಅಶುಭ..!

ಇಂದು ಖಂಡಗ್ರಾಸ ಚಂದ್ರಗ್ರಹಣ ಯಾರಿಗೆಲ್ಲ ಶುಭ ಯಾರಿಗೆಲ್ಲ ಅಶುಭ..!

ಜನವರಿ 31 ನೇ ತಾರೀಖಿನಂದು ಖಂಡಗ್ರಾಸ ಚಂದ್ರಗ್ರಹಣ ಅರವತ್ತು ವರ್ಷಗಳ ನಂತರ ಮಹಾ ಅಪಾಯಕಾರಿ ಚಂದ್ರಗ್ರಹಣ ಇದೇ ತಿಂಗಳು ಅಂದರೆ ಜನವರಿ ಮೂವತ್ತೊಂದನೇ ತಾರೀಖಿನಂದು ಬುಧವಾರ ಸಂಭವಿಸಲಿದೆ. ಈ ಗ್ರಹಣವನ್ನು ಖಂಡಗ್ರಾಸ ಚಂದ್ರಗ್ರಹಣ ಎಂದು ಕರೆಯುತ್ತಾರೆ. ಆಶ್ಲೇಷಾ ನಕ್ಷತ್ರದಲ್ಲಿ ಚಂದ್ರನಿಗೆ ಪೂರ್ಣ ರಾಹು ಗ್ರಹಣವು ಗ್ರಸ್ತೋದಯವಾಗಿ ಗೋಚರವಾಗುತ್ತಿದೆ.

ಅಂದು ಸಂಜೆ 5:17 ಕ್ಕೆ ಸ್ಪರ್ಶ ಕಾಲ ಅಥವಾ ಆರಂಭವಾಗುತ್ತದೆ ರಾತ್ರಿ 7:19 ಕ್ಕೆ ಗ್ರಹಣ ಮಧ್ಯಕಾಲವಾಗುತ್ತದೆ ಮತ್ತು ರಾತ್ರಿ 8:41 ಕ್ಕೆ ಮೋಕ್ಷಕಾಲ ಹೊಂದಲಿದೆ ಅಥವಾ ಅಂತ್ಯವಾಗಲಿದೆ.

ಈ ಗ್ರಹಣದಿಂದ ಕೆಲವು ರಾಶಿಗೆ ಶುಭ ಫಲ ದೊರೆಯುವುದು ಇನ್ನು ಕೆಲವು ರಾಶಿಗೆ ಆಶುಭವಾಗುವುದು.

ರಾಹು ಎಂದರೆ ಭಯ, ನಡುಕ ಹುಟ್ಟಿಸುವಂತಹದ್ದು ಈ ಗ್ರಹಣ ಆಶ್ಲೇಷಾ ನಕ್ಷತ್ರದಲ್ಲಿ ಪೂರ್ಣ ಚಂದ್ರ ರಾಹು ಗ್ರಹಣ ಗ್ರಸ್ತೋದಯವಾಗುತ್ತದೆ. ಹಾಗಾಗಿ ತೊಂದರೆ ಹೆಚ್ಚು. ಶನಿವತ್ ರಾಹು ಎಂದು ಕೂಡ ಕರೆಯುತ್ತೇವೆ ರಾಹು ತಾಯಿಯ ತಂದೆ ತಾಯಿಗಳಿಗೆ(ಅಜ್ಜಿ-ತಾತ) ಕಾರಕ ಈ ಸಮಯದಲ್ಲಿ ಕಾನೂನು ವಿರುದ್ದವಾಗಿ ಕೆಲಸಗಳನ್ನು ಮಾಡುವುದು ಕೆಟ್ಟ ದಾರಿಯಲ್ಲಿ ಹಣ ಸಂಪಾದನೆ ಜೂಜು ರೇಸ್ ಮಟ್ಕ ಕೊಲೆ ದರೋಡೆ ಮತ್ತು ಸಂತಾನ ನಷ್ಟ ಮುಂತಾದವುಗಳು ಹೆಚ್ಚಾಗುವುದು

ದೇಶದ ಉತ್ತರ ಭಾಗದಲ್ಲಿ ಅವಗಡಗಳು ನೀರಿನಿಂದ ಅಪಘಾತಗಳು ಜೀವಹಾನಿಗಳು ಸಂಭವಿಸುವುದು.

ಗ್ರಹಣದಿಂದ ಶುಭ ಹೊಂದುವ ರಾಶಿಗಳು

ವೃಷಭ ರಾಶಿ, ತುಲಾ ರಾಶಿ,ಕುಂಭ ರಾಶಿ ಹಾಗೂ ಕನ್ಯಾ ರಾಶಿ.
ಈ ನಾಲ್ಕು ರಾಶಿಗಳಿಗೆ ತುಂಬ ಒಳ್ಳೆಯದಾಗುವುದು

ಮೀನ ರಾಶಿ, ಮಕರ ರಾಶಿ, ವೃಶ್ಚಿಕ ರಾಶಿ ಹಾಗೂ ಮಿಥುನ ರಾಶಿ. ಇವರಿಗೆ ಒಳ್ಳೆಯದು ಮತ್ತು ಕೆಟ್ಟದ್ದು ಮಿಶ್ರ ಫಲ ಲಭಿಸುವುದು.

ಗ್ರಹಣದಿಂದ ಅಶುಭ ಹೊಂದುವ ರಾಶಿಗಳು

ಕಟಕ ರಾಶಿ, ಮೇಷ ರಾಶಿ,
ಸಿಂಹ ರಾಶಿ, ಧನಸ್ಸು ರಾಶಿ.
ಇವರು ತುಂಬಾ ಎಚ್ಚರಿಕೆಯಿಂದ ಇರಬೇಕು. ಇದು ಇವರಿಗೆ ತುಂಬಾ ಕಷ್ಟ ಕಾಲವಾಗಿದೆ.

ಪುನರ್ವಸು ನಕ್ಷತ್ರ, ಪುಷ್ಯ ನಕ್ಷತ್ರ, ಆಶ್ಲೇಷಾ ನಕ್ಷತ್ರ, ಜೇಷ್ಠ ನಕ್ಷತ್ರ ಹಾಗೂ ರೋಹಿಣಿ ನಕ್ಷತ್ರದಲ್ಲಿ ಜನಿಸಿದವರಿಗೆ ಕೂಡ ಅಶುಭ ಫಲ ಪ್ರಾಪ್ತಿಯಾಗುವುದು .

ಪರಿಹಾರಗಳು

ಗ್ರಹಣದ ಸಮಯದಲ್ಲಿ ಸ್ವಲ್ಪ ಅಕ್ಕಿಯನ್ನು ಮತ್ತು ಉದ್ದು ವನ್ನು ಮರುದಿನ ದೇವಸ್ಥಾನಕ್ಕೆ ಅಥವಾ ಬಡವರಿಗೆ ದಾನ ನೀಡಬೇಕು.

ರಾಹುವಿಗೆ ಸಂಬಂಧಿಸಿದ ಮಂತ್ರ.
(ಓಂ ಭ್ರಾಂ,ಭ್ರೀಂ,ಭ್ರೌಂ ಸಃ ಓಂ ಕಯಾ ನಿಶ್ಚಿತ್ರ ಆಭುವದೂತೀ ಸದಾಬೃಧಃ ಸಖಾ| ಕಯಾಶಚಿಷ್ಠಯಾವೃತಾ| ಓಂ ಸ್ವಃ ಭುವಃ ಭೂಃ ಓಂ ಸಃ ಭ್ರೌಂ ಭ್ರೀಂ ಭ್ರಾಂ ಓಂ ರಾಹುವೇ ನಮಃ)

ಚಂದ್ರನಿಗೆ ಸಂಬಂಧಿಸಿದ ಮಂತ್ರ.
(ಓಂ,ಶ್ರಾಂ,ಶ್ರೀಂ,ಶ್ರೌಂ,ಸಃ ಚಂದ್ರಾಯ ನಮಃ)

108ಸರಿ ಪಠಿಸಿದರೆ ಒಳ್ಳೆಯದಾಗುತ್ತದೆ
ಗ್ರಹಣ ಸಮಯದಲ್ಲಿ ಹುಟ್ಟು ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು.

ಗ್ರಹಣ ಮಧ್ಯ ಕಾಲದಲ್ಲಿ ಸ್ನಾನ ಮಾಡಿದರೆ ಲಕ್ಷ ಫಲ ಸಿಗುವುದು. ಗ್ರಹಣ ಅಂತ್ಯ ಅಥವಾ ಮೋಕ್ಷ ಕಾಲದಲ್ಲಿ ಸ್ನಾನ ಮಾಡಿದರೆ ಅನಂತ ಅನಂತ ಫಲ ಸಿಗುವುದು. ಗ್ರಹಣ ಮಧ್ಯಮ ಕಾಲದಲ್ಲಿ ಹೋಮ ಮಾಡಿದರೆ ಕೋಟಿ ಪುಣ್ಯ ಫಲ ಸಿಗುವುದು.

ಶರತ್ ಶಾಸ್ತ್ರಿ
9845371416

About admin

Check Also

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಅವರಿಂದ ಈ ದಿನದ ರಾಶಿ ಭವಿಷ್ಯ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ …

Leave a Reply

Your email address will not be published. Required fields are marked *