Breaking News
Home / ಇತ್ತೀಚಿನ ಸುದ್ದಿಗಳು / ವಾಟ್ಸಾಆಪ್ ಬಳಕೆ ಮಾಡುವವರಿಗೆ ಸಿಹಿಸುದ್ದಿ ನಿಮ್ಮ ವಾಟ್ಸಾಆಪ್ ನಲ್ಲಿ ಬಿಸ್ನೆಸ್ ಮಾಡಿ ಹಣಗಳಿಸಿ, ಫೇಸ್ ಬುಕ್ ಕಡೆಯಿಂದ ಬಂಪರ್ ಕೊಡುಗೆ..!

ವಾಟ್ಸಾಆಪ್ ಬಳಕೆ ಮಾಡುವವರಿಗೆ ಸಿಹಿಸುದ್ದಿ ನಿಮ್ಮ ವಾಟ್ಸಾಆಪ್ ನಲ್ಲಿ ಬಿಸ್ನೆಸ್ ಮಾಡಿ ಹಣಗಳಿಸಿ, ಫೇಸ್ ಬುಕ್ ಕಡೆಯಿಂದ ಬಂಪರ್ ಕೊಡುಗೆ..!

ಫೇಸ್ ಬುಕ್ ಸಂಸ್ಥೆಯ ಅಡಿಯಲ್ಲಿ ಹೊಸ ವಾಟ್ಸಾಆಪ್ ಬಿಡುಗಡೆ ಮಾಡಲಾಗಿದೆ. ಇದು ಬಿಸ್ನೆಸ್ ಆಪ್ ಆಗಿದ್ದು ಹಲವು ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಈ ಆಪ್ ತುಂಬಾ ಉತ್ತಮವಾದ ಒಂದು ವ್ಯಾಪಾರ ಸ್ಥಳವಾಗಿದೆ.ಈಗಾಗಲೇ ಹಲವು ಮಂದಿ ವ್ಯಾಪಾರಗಾರರು ಸಾಮಾನ್ಯ ವಾಟ್ಸ್ ಆಪ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಇದಕ್ಕಿಂತ ಸುಲಭವಾಗಿದೆ ಮತ್ತು ಸರಳವಾಗಿ ಬಳಕೆ ಮಾಡಿಕೊಳ್ಳುವಂತೆ ವಾಟ್ಸ್ಆಪ್ ಬಿಸ್ನೆಸ್ ಆಪ್ ಅನ್ನ ಅಭಿವೃದ್ಧಿಪಡಿಸಲಾಗಿದೆ.

ಇದು ವ್ಯಾಪಾರಗಾರರು ಮತ್ತು ಖರೀದಿದಾರರ ನಡುವೆ ಸೇತುವೆಯನ್ನು ನಿರ್ಮಿಸಿಲಿದ್ದು, ವ್ಯಾಪಾರಗಾರರಿಗೆ ಹೆಚ್ಚಿನ ಮಂದಿಯನ್ನು ತಲುಪಲು ಸಹಾಯವನ್ನು ಮಾಡಲಿದೆ.

ಫೇಸ್‌ಬುಕ್ ಪ್ರೋಫೈಲ್ ಶೇರ್ ಮಾಡಬಹುದು:
ವಾಟ್ಸ್‌ಆಪ್ ಬಿಸ್ನೆಸ್ ಆಪ್ ನಲ್ಲಿ ಬಳಕೆದಾರರು ತಮ್ಮ ಫೇಸ್‌ಬುಕ್ ಪೇಜ್‌ ಲಿಂಕ್ ಅನ್ನು ಶೇರ್ ಮಾಡಬಹುದಾಗಿದೆ. ಈ ಮೂಲಕ ಹೆಚ್ಚಿನ ಜನರನ್ನು ತಲುಪುವ ಸಾಧ್ಯತೆ ಹೆಚ್ಚಾಗಿದೆ.

ವ್ಯಾಪಾರದ ಬಗ್ಗೆ ಮಾಹಿತಿ:
ನಿಮ್ಮ ವ್ಯಾಪಾರದ ಸಂಪೂರ್ಣ ಮಾಹಿತಿಯನ್ನು ನೀವು ಇಲ್ಲಿ ನೀಡಬಹುದು. ಯಾವ ಸಮಯದಲ್ಲಿ ನಿಮ್ಮ ಅಂಗಡಿ ಓಪನ್ ಇರುತ್ತದೆ ಮತ್ತು ಯಾವೇಲ್ಲ ವಸ್ತುಗಳು ನಿಮ್ಮಲಿ ಸಿಗಲಿವೆ ಎನ್ನುವ ಮಾಹಿತಿಯನ್ನು ನೀಡಬಹುದು.

ನಿಮ್ಮ ವಿಳಾಸವನ್ನು ನೀಡಬಹುದು:
ಈ ಆಪ್ ನಲ್ಲಿ ನೀವು ಕಾರ್ಯ ನಿರ್ವಹಿಸುವ ಸ್ಥಳದ ಮಾಹಿತಿಯನ್ನ ನೀಡಬಹುದು. ಒಟ್ಟಾರೆ ಈ ಆಪ್ ನಿಂದಾಗಿ ಸಣ್ಣಪುಟ್ಟ ವ್ಯಾಪಾರಿಗಳಿಗೆ ಹೆಚ್ಚು ಲಾಭವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಹೆಚ್ಚಿನ ಮಾಹಿತಿ ಮತ್ತು ಸುದ್ದಿಗಾಗಿ ನಮ್ಮ ಪೇಜ್ ಲೈಕ್ ಮಾಡಿ:

About admin

Check Also

ಮೋದಿಯ ಕನಸಿನ ಯೋಜನೆಯಾದ ಅಂಚೆ ಬ್ಯಾಂಕ್ ಖಾತೆ ತೆಗೆಯೋದು ಹೇಗೆ..!

ಹೌದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌’ಗೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಚಾಲನೆ ನೀಡಿದ್ದಾರೆ. …

Leave a Reply

Your email address will not be published. Required fields are marked *