Breaking News
Home / ಇತ್ತೀಚಿನ ಸುದ್ದಿಗಳು / ಭಾರತ್ ಕೇ ವೀರ್ ಗೀತೆಗೆ ಚಾಲನೆ ನಮ್ಮ ಸೇನೆಗೆ ಹರಿದು ಬಂದ ಹಣ ಎಷ್ಟು ಗೊತ್ತಾ..!

ಭಾರತ್ ಕೇ ವೀರ್ ಗೀತೆಗೆ ಚಾಲನೆ ನಮ್ಮ ಸೇನೆಗೆ ಹರಿದು ಬಂದ ಹಣ ಎಷ್ಟು ಗೊತ್ತಾ..!

ಹುತಾತ್ಮರ ಕುಟುಂಬದ ಕ್ಷೇಮಾಭಿವೃದ್ಧಿಗಾಗಿ ಆರಂಭವಾದ ‘ಭಾರತ್ ಕೇ ವೀರ್’ ಅಭಿಯಾನದ ಗೀತೆಗೆ ಚಾಲನೆ ನೀಡಿದ್ದು, ಈ ಕಾರ್ಯಕ್ರಮದಲ್ಲಿ 12.93 ಕೋಟಿ ರೂ. ಸಂಗ್ರಹಿಸಲಾಗಿದೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ ನೇತೃತ್ವದಲ್ಲಿ ಆರಂಭವಾದ ಈ ಅಭಿಯಾನದಲ್ಲಿ ಸಂಗ್ರಹವಾದ ಹಣವನ್ನು ಹುತಾತ್ಮರ ಕುಟುಂಬಕ್ಕೆ ಹಾಗೂ ಸೈನಿಕರ ಮಕ್ಕಳ ಶಿಕ್ಷಣಕ್ಕೆ ಮೀಸಲಿಡಲಾಗುವುದು.


ಕೈಲಾಶ್ ಖೇರ್ ಸಂಗೀತ ಸಂಯೋಜಿಸಿ, ಹಾಡಿರುವ ಈ ಗೀತೆಯನ್ನು ಡೌನ್‌ಲೋಡ್ ಮಾಡಿಕೊಂಡಾಗ ಬಂದ ಹಣವೂ ಸೈನಿಕರ ಕುುಟಂಬದ ಅಗತ್ಯಗಳನ್ನು ಪೂರೈಸಲು ಬಳಸಲಾಗುವುದು. ಮೃತ ಸೈನಿಕರ ಕುಟುಂಬಕ್ಕೆ ಕನಿಷ್ಠ 1 ಕೋಟಿ ರೂ. ಸಿಗುವಂತೆ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್, ಕೇಂದ್ರ ಸಚಿವರಾದ ಕಿರೆಣ್ ರಿಜಿಜು, ಹನ್ಸ್‌ರಾಜ್ ಅಹಿರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮುಂತಾದವರು ಉಪಸ್ಥಿತರಿದ್ದರು.

About admin

Check Also

ಪ್ರಧಾನಿ ಮೋದಿಯಿಂದ ಮತ್ತೊಂದು ಬಿಗ್ ಯೋಜನೆ ವಿಶ್ವ ವ್ಯಾಪಿ ಚಾಲನೆ..!

ಹೌದು ಪ್ರಧಾನಿ ಮೋದಿಯಿಂದ ಮತ್ತೊಂದು ಬಿಗ್ ಯೋಜನೆ ವಿಶ್ವ ವ್ಯಾಪಿ ಚಾಲನೆ ನೀಡಲಿದ್ದಾರೆ ಏನು ಯಾವ ರೀತಿ ಅನ್ನೋದು ಇಲ್ಲಿದೆ …

Leave a Reply

Your email address will not be published. Required fields are marked *