Breaking News
Home / ಇತ್ತೀಚಿನ ಸುದ್ದಿಗಳು / ಬುದ್ಧಿಹೀನ ವ್ಯಕ್ತಿ ಹಾಗು ಮಾಜಿ ಜೈಲು ಹಕ್ಕಿ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದು ಯಾರಿಗೆ ಗೊತ್ತಾ..?

ಬುದ್ಧಿಹೀನ ವ್ಯಕ್ತಿ ಹಾಗು ಮಾಜಿ ಜೈಲು ಹಕ್ಕಿ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದು ಯಾರಿಗೆ ಗೊತ್ತಾ..?

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದು, ಶಾ ಒಬ್ಬ ಬುದ್ಧಿಹೀನ ವ್ಯಕ್ತಿ ಎಂದು ಕರೆದಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಅಮಿತ್ ಶಾ ಅವರಿಗೆ ಮೆದುಳು ಇಲ್ಲ ಅಂತ ಕಾಣುತ್ತೆ. ಅವರ ಒಬ್ಬ ಬುದ್ಧಿ ಇಲ್ಲದ ವ್ಯಕ್ತಿ ಎಂದು ಕಿಡಿಕಾರಿದರು.

ಇದಕ್ಕು ಮುನ್ನ ಟ್ವೀಟರ್ ನಲ್ಲಿ ಬಿಜೆಪಿ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದ್ದ ಸಿಎಂ, ಅಮಿತ್ ಶಾ ‘ಮಾಜಿ ಜೈಲು ಹಕ್ಕಿ’ ಎಂದು ಹಂಗಿಸುವ ಮೂಲಕ ‘ಸಿದ್ದರಾಮಯ್ಯ ಎಂದರೇ ಭ್ರಷ್ಟಾಚಾರ, ಭ್ರಷ್ಟಾಚಾರವೆಂದರೆ ಸಿದ್ದರಾಮಯ್ಯ’ ಎಂಬ ಶಾ ತಿರುಗೇಟು ನೀಡಿದ್ದರು.

ನಿನ್ನೆಯಷ್ಟೇ ಅಮಿತ್ ಶಾ ಅವರು ಸಿದ್ದರಾಮಯ್ಯ ಎಂದರೇ ಭ್ರಷ್ಟಾಚಾರ, ಭ್ರಷ್ಟಾಚಾರ ಎಂದರೇ ಸಿದ್ದರಾಮಯ್ಯ ಎಂದು ಮೈಸೂರಿನಲ್ಲಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಿಎಂ ‘ಮಾಜಿ ಜೈಲು ಹಕ್ಕಿಯೊಂದು ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮತ್ತೊಂದು ಜೈಲು ಹಕ್ಕಿಯನ್ನೇ ಆಯ್ಕೆ ಮಾಡಿದೆ’ ಎಂದು ಕುಟುಕಿದ್ದಾರೆ. ‘ನನ್ನ ಹಾಗೂ ನನ್ನ ಸರಕಾರದ ಬಗ್ಗೆ ಮಾಡಿರುವ ಭ್ರಷ್ಟಾಚಾರದ ಆರೋಪವನ್ನು ಅಮಿತ್ ಶಾ ಸಾಬೀತು ಪಡಿಸುವವರೇ?.. ಈ ರಾಜ್ಯದ ಜನತೆ ಸುಳ್ಳುಗಳನ್ನು ನಂಬುವವರಲ್ಲ’ ಎಂದು ಸಿಎಂ ಟ್ವೀಟ್‌ ಮಾಡಿದ್ದಾರೆ.

About admin

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *