Breaking News
Home / ಆರೋಗ್ಯ / ನಿಮಗೆ ತಲೆಹೊಟ್ಟು ಸಮಸ್ಯೆ ಇದೆ ಅನ್ನೋ ಚಿಂತೆ ಬಿಡಿ ಅದಕ್ಕೆ ಮನೆಯಲ್ಲಿಯೇ ಇದೆ ಪರಿಹಾರ..!

ನಿಮಗೆ ತಲೆಹೊಟ್ಟು ಸಮಸ್ಯೆ ಇದೆ ಅನ್ನೋ ಚಿಂತೆ ಬಿಡಿ ಅದಕ್ಕೆ ಮನೆಯಲ್ಲಿಯೇ ಇದೆ ಪರಿಹಾರ..!

ಹೌದು ನಮಗೆ ತಲೆಹೊಟ್ಟು ಸಮಸ್ಯೆ ತುಂಬಾ ಮುಜುಗರ ಉಂಟುಮಾಡುತ್ತದೆ,ಅದಕ್ಕೆ ಮನೆಯಲ್ಲಿಯೇ ಇದೆ ಪರಿಹಾರ ಅದೇನಂದರೆ ಈರುಳ್ಳಿ. ಹೌದು ಈರುಳ್ಳಿಯಿಂದ ಹಲವಾರು ಉಪಯೋಗಗಳಿವೆ.

ಈರುಳ್ಳಿಯ ರಸ ತೆಗೆದು ತಲೆಗೆ ಹಚ್ಚಿ ಅರ್ಧ ಗಂಟೆಯ ನಂತರ ಸ್ನಾನ ಮಾಡಿದರೆ ತಲೆ ಹೊಟ್ಟು ನಿಧಾನವಾಗಿ ನಿವಾರಣೆಯಾಗುತ್ತದೆ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

ತಲೆಗೆ ಶ್ಯಾಂಪೂ ಬಳಸಿ ಸ್ನಾನ ಮಾಡಿದ ಬಳಿಕ ಕೊನೆಯಲ್ಲಿ ಬಿಸಿನೀರಿಗೆ ಈರುಳ್ಳಿ ರಸ ಹಾಕಿ ತೊಳೆಯುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾ ಬಂದರೆ ಕೂದಲ ಎಲ್ಲ ಸಮಸ್ಯೆಗಳು ಬಹುಬೇಗ ಕಡಿಮೆಯಾಗುತ್ತದೆ.

ಕೊಬ್ಬರಿ ಎಣ್ಣೆಯ ಜತೆಗೆ ಒಂದು ಚಮಚ ಈರುಳ್ಳಿ ರಸ, ಒಂದು ಚಮಚ ಬಾದಾಮಿ ಎಣ್ಣೆ ಮಿಶ್ರಣ ಮಾಡಿಕೊಂಡು ತಲೆಗೆ ಮಸಾಜ್‌ ಮಾಡುವುದರಿಂದ ಕೂದಲಿಗೆ ಕಾಂತಿ ಬರುವುದರ ಜತೆಗೆ ಹೊಟ್ಟು ಕೂಡ ನಿವಾರಣೆಯಾಗುತ್ತದೆ.

ಈರುಳ್ಳಿಗೆ ಜೇನುತುಪ್ಪ ಸೇರಿಸಿಕೊಂಡು ದಿನನಿತ್ಯ ಸೇವಿಸುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.

ಈರುಳ್ಳಿಯನ್ನು ಸಣ್ಣದಾಗಿ ಹಚ್ಚಿ ಅದಕ್ಕೆ ಒಂದು ಚಮಚ ಆಲಿವ್‌ ಎಣ್ಣೆ ಸೇರಿಸಿ ತಲೆಗೆ ಹಚ್ಚಿ ಎರಡು ಗಂಟೆಯ ನಂತರ ಸ್ನಾನ ಮಾಡಿದರೆ ಕೂದಲು ಆರೋಗ್ಯವಾಗಿರುತ್ತದೆ.

About admin

Check Also

ಹುಳುಕಡ್ಡಿ ಸಮಸ್ಯೆಗೆ ನೇರಳೆಯಲ್ಲಿ ಅಡಗಿದೆ ಓಷಧಿ ಗುಣಗಳು..!

ನಮಗೆ ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು …

Leave a Reply

Your email address will not be published. Required fields are marked *