Breaking News
Home / ಇತ್ತೀಚಿನ ಸುದ್ದಿಗಳು / ಮೋದಿ ಆಡಳಿತದಲ್ಲಿ ಭಾರತ ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಎಷ್ಟನೇ ಸ್ಥಾನ ಅಲಂಕರಿಸಿದೆ ಗೊತ್ತಾ..!

ಮೋದಿ ಆಡಳಿತದಲ್ಲಿ ಭಾರತ ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಎಷ್ಟನೇ ಸ್ಥಾನ ಅಲಂಕರಿಸಿದೆ ಗೊತ್ತಾ..!

ವಿಶ್ವದ ಶ್ರೀಮಂತ ದೇಶಗಳಲ್ಲಿ ಭಾರತ 6ನೇ ಸ್ಥಾನವನ್ನು ಹೊಂದಿದೆ ಎನ್ನುವುದನ್ನು ಸಮೀಕ್ಷೆಯೊಂದರ ವರದಿ ತಿಳಿಸಿದೆ.

ನ್ಯೂ ವರ್ಲ್ಡ್​ ವೆಲ್ತ್ ವರದಿಯನ್ವಯ ಮೊದಲ ಸ್ಥಾನವನ್ನು ಅಮೆರಿಕ ಅಲಂಕರಿಸಿದೆ. ಚೀನಾ, ಜಪಾನ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ಯುನೈಟೆಡ್ ಕಿಂಗ್ಡಮ್ ಹಾಗೂ ಜರ್ಮನಿ ಇದೆ.

ಆರನೇ ಸ್ಥಾನದಲ್ಲಿ ಭಾರತ 8230 ಬಿಲಿಯನ್ ಯುಎಸ್ ಡಾಲರ್​ ಸಂಪತ್ತು ಹೊಂದಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿದೆ. ಜಾಗತಿಕ ಮಾರುಕಟ್ಟೆಯ ಸರಾಸರಿ ಬೆಳವಣಿಗೆ ಶೇ.12ರಷ್ಟಿದ್ದರೆ, ಭಾರತ ಶೇ.25ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ವರದಿ ತಿಳಿಸಿದೆ.

ಅಮೆರಿಕ 64,584, ಚೀನಾ 24,803 ಬಿಲಿಯನ್ ಯುಎಸ್​ ಡಾಲರ್​ ಸಂಪತ್ತಿನೊಂದಿಗೆ ಮೊದಲ ಎರಡು ಸ್ಥಾನದಲ್ಲಿವೆ. ಚೀನಾ ಶೇ.22 ಬೆಳವಣಿಗೆ ದರ ಹೊಂದಿದೆ ಎನ್ನಲಾಗಿದೆ.

 

About admin

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *