Breaking News
Home / ಇತ್ತೀಚಿನ ಸುದ್ದಿಗಳು / ಸೈಕಲ್’ನಲ್ಲಿ 6 ತಿಂಗಳು 10 ಸಾವಿರ ಕಿಮೀ ಸುತ್ತಿದ ಬೆಂಗಳೂರಿನ ಸಾಹಸಿ ಯಾಕೆ ಗೊತ್ತಾ..!

ಸೈಕಲ್’ನಲ್ಲಿ 6 ತಿಂಗಳು 10 ಸಾವಿರ ಕಿಮೀ ಸುತ್ತಿದ ಬೆಂಗಳೂರಿನ ಸಾಹಸಿ ಯಾಕೆ ಗೊತ್ತಾ..!

AC ರೋಮಿನಲ್ಲಿ ಕೆಲಸ ಮತ್ತು ಲಕ್ಷಾಂತರ ರುಪಾಯಿ ಸಂಬಳ ತೆಗೆದು ಕೊಳ್ಳುವ ಸಾಫ್ಟ್‌ವೇರ್ ಕಂಪನಿಯ ಸಾಫ್ಟ್ ಜೀವನಕ್ಕೆ ಗುಡ್ ಬೈ ಹೇಳಿ ಇವರು ಆಯ್ದುಕೊಂಡಿದ್ದು ಸೈಕ್ಲಿಂಗ್ ಮೂಲಕ ದೇಶ ಪರ್ಯಟನೆ.

ಸಮಾಜದಿಂದ ಎಲ್ಲವನ್ನೂ ಸ್ವೀಕರಿಸಿದ ನಾನು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಒಳ್ಳೆಯ ಉದ್ದೇಶದಿಂದ ಬೆಂಗಳೂರು ಮೂಲದ 32 ವರ್ಷದ ಸಾಫ್ಟ್‌ವೇರ್ ಉದ್ಯೋಗಿ ಅನಿಲ್ ಪ್ರಭಾಕರ್ ಸೈಕಲ್ ಏರಿ ದೇಶ ಪರ್ಯಟನೆಯೊಂದಿಗೆ ಸೈಕ್ಲಿಂಗ್ ಉಪಯೋಗಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಚಿಕ್ಕಂದಿನಿಂದಾಗಲೂ ಸೈಕಲ್ ಏರಿ ದೇಶ ಸುತ್ತುವ ಕನಸು ಹೊಂದಿದ ಅನಿಲ್ ಪ್ರಭಾಕರ್ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿ ಕಳೆದ ಕೆಲ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ತದನಂತರ ಕಳೆದ ಜೂನ್ ತಿಂಗಳಂದು ಬೆಂಗಳೂರಿನಿಂದ ಆರಂಭವಾದ ಇವರ ಸೈಕ್ಲಿಂಗ್ ಪ್ರವಾಸ, ಸೈಕಲ್ ರಿಪೇರಿಗೆ ಬೇಕಾದ ಕೆಲ ಸಲಕರಣೆ, ಕೈಯಲ್ಲೊಂದಷ್ಟು ಹಣ ಹಿಡಿದು ಉತ್ತರ ಭಾರತದತ್ತ ಸೈಕಲ್ ಪೆಟಲ್‌ಗಳನ್ನು ತುಳಿಯಲಾರಂಬಿಸಿ ಸೈಕಲ್ ತುಂಬೆಲ್ಲಾ ಅಲೆಮಾರಿಯಂತೆ ಚಿಕ್ಕ ಚಿಕ್ಕ ಗಂಟು ಮೂಟೆಗಳನ್ನು ನೇತು ಹಾಕಿಕೊಂಡು ಪ್ರವಾಸ ಹೊರಟು ಜನರಿಂದ ದಾರಿ ಮದ್ಯೆಯಲ್ಲಿ ಸಿಕ್ಕಂತಹ ಊಟೋಪಚಾರ ವ್ಯವಸ್ಥೆಯಿಂದ ಇವರ ಸಾಹಸ ಯಾತ್ರೆಯನ್ನು ನೆಡಸಿದ್ದಾರೆ.

2017 ರ ಜೂನ್ ತಿಂಗಳಿನಿಂದ ಆರಂಭಗೊಂಡ ದೇಶ ಪರ್ಯಟನೆಯ ಸೈಕ್ಲಿಂಗ್ ಪಯಣವು ಹೊಸ ವರ್ಷದ ಜನವರಿ ತಿಂಗಳಲ್ಲಿ ಬೆಂಗಳೂರಲ್ಲೆ ಮುಕ್ತಾಯಗೊಂಡಿದೆ. ಕಳೆದ ಆರು ತಿಂಗಳುಗಳಿಂದ ಸೈಕಲ್ ಪೆಡಲ್ ತುಳಿಯುತ್ತಿರುವ ಅನಿಲ್ ಬರೋಬ್ಬರಿ 10 ಸಾವಿರ ಕಿ.ಮೀ ಪ್ರಯಾಣಿಸಿ ಬಹುತೇಕ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಹೈದ್ರಾಬಾದ್, ಜಮ್ಮು ಮತ್ತು ಕಾಶ್ಮೀರ, ನಾಗಪುರ್, ಬೋಪಾಲ್, ದಿಲ್ಲಿ, ಚಂಢೀಗಡ್, ಮನಾಲಿ, ಲಡಾಕ್, ಕಾರ್ಗಿಲ್, ಅಮ್ರತ್ ಸರ್, ಜೈಪುರ್, ಅಹ್ಮದಾಬಾದ್, ಬರೋಡ, ಮುಂಬೈ, ಗೋವಾ, ಕಾರವಾರ, ಕೇರಳ, ಕನ್ಯಾ ಕುನಾರಿ, ಮಧುರೈ ನಂತರದಲ್ಲಿ ಬೆಂಗಳೂರಿಗೆ ಆಗಮಿಸಿ ಸೈಕ್ಲಿಂಗ್ ಪ್ರವಾಸ ಅಂತ್ಯಗೊಳಿಸಿದ್ದಾರೆ.

ಅನಿಲ್ ಪ್ರಭಾಕರ್ ಕೇವಲ ಪ್ರವಾಸಿ ತಾಣಗಳತ್ತ ಮುಖ ಮಾಡದೆ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಸೈಕ್ಲಿಂಗ್‌ನಿಂದ ಆಗುವ ಪ್ರಯೋಜನಗಳ ಕುರಿತಾಗಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಸಹ ಮಾಡಿದ್ದಾರೆ. ವಾಹನಗಳ ಹೆಚ್ಚಳದಿಂದ ಪರಿಸರದಲ್ಲುಂಟಾಗುವ ವಾತಾವರಣ ಬದಲಾವಣೆ ಜನರ ಆರೋಗ್ಯಕ್ಕೆ ಕುಂದು ತರುತ್ತಿದೆ. ಸಾಧ್ಯವಾದಷ್ಟು ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ನೌಕರರು ಸೈಕ್ಲಿಂಗ್ ಬಳಕೆ ಮಾಡಬೇಕು. ಇದರಿಂದ ಪರಿಸರಕ್ಕೂ ಹಾಗೂ ವಾತಾವರಣಕ್ಕೂ ಒಳಿತುಂಟಾಗುತ್ತದೆ ಎಂಬ ಸಂದೇಶವನ್ನು ಜನರಿಗೆ ನೀಡುತ್ತಾ ತನ್ನ ಪಯಣದ ಸಾರ್ಥಕತೆಯನ್ನ ಮೆರೆದಿದ್ದಾರೆ.

About admin

Check Also

ಯಡಿಯೂರಪ್ಪಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ..!

ಹೌದು ಇದೇನಪ್ಪ ಯಡಿಯೂರಪ್ಪಗೆ ಕುಮಾರಸ್ವಾಮಿ ಕುರ್ಚಿ ಬಿಟ್ಟುಕೊಟ್ಟಿದ್ದಾರೆ ಅಂದ್ರೆ ಎಲ್ಲರು ಶಾಕ್ ಆಗುವ ವಿಚಾರವೇ ಈ ಎಲ್ಲ ನಾಯಕರು ಚುನಾವಣೆ …

Leave a Reply

Your email address will not be published. Required fields are marked *