Breaking News
Home / ಇತ್ತೀಚಿನ ಸುದ್ದಿಗಳು / ನೊಂದ ಮಹಿಳೆಯರ ಬಾಳಲ್ಲಿ ಬೆಳಕು ತಂದ ‘ಮನಸ್ವಿನಿ’ ಈ ಯೋಜನೆ ಇದರ ಲಾಭ ಪಡೆಯುವುದು ಹೇಗೆ ಅನ್ನೋದು ಇಲ್ಲಿದೆ ನೋಡಿ..!

ನೊಂದ ಮಹಿಳೆಯರ ಬಾಳಲ್ಲಿ ಬೆಳಕು ತಂದ ‘ಮನಸ್ವಿನಿ’ ಈ ಯೋಜನೆ ಇದರ ಲಾಭ ಪಡೆಯುವುದು ಹೇಗೆ ಅನ್ನೋದು ಇಲ್ಲಿದೆ ನೋಡಿ..!

ಜೀವನದಲ್ಲಿ ನೊಂದ ಮಹಿಳೆಯರಿಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅಂಥ ಜನಪರ ಯೋಜನೆಗಳ ಪೈಕಿ ‘ಮನಸ್ವಿನಿ’ ಕೂಡ ಒಂದು. ನಲವತ್ತು ವರ್ಷ ದಾಟಿದ ಅವಿವಾಹಿತ/ವಿಚ್ಛೇದಿತ/ಪರಿತ್ಯಕ್ತ ಮಹಿಳೆಯರ ಬಾಳಿನಲ್ಲಿ ಬೆಳಕಿನ ಕಿರಣ ಮೂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2013-14ರ ಬಜೆಟ್’ನಲ್ಲಿ ಘೋಷಿಸಿದ್ದಂತೆ ‘ಮನಸ್ವಿನಿ’ ಯೋಜನೆ ಜಾರಿಯಾಗಿದೆ.

ಕಟುಂಬದವರು ಮದುವೆ ಮಾಡದ ಕಾರಣಕ್ಕೋ ಇಲ್ಲವೆ ಸೂಕ್ತ ಸಮಯದಲ್ಲಿ ವರ ಸಿಗದೆ ಅಥವಾ ಇನ್ನಾವುದೋ ಕಾರಣಕ್ಕಾಗಿ ಮದುವೆಯಾಗದೇ ಉಳಿದ ಮಹಿಳೆಯರ ಬದುಕು ದುಸ್ತರ. ಇಂಥ ಮಹಿಳೆಯರಿಗೆ ಪ್ರತಿ ತಿಂಗಳು 500 ರೂ. ಮಾಸಾಶನ ನೀಡುವ ಯೋಜನಯೇ ‘ಮನಸ್ವಿನಿ’. ವಿಚ್ಛೇದಿತರು ಹಾಗೂ ಗಂಡ ತೊರೆದು ಹೋದ ಮಹಿಳೆಯರು (ಪರಿತ್ಯಕ್ತರು) ಸಹ ಈ ಯೋಜನೆಯ ಲಾಭ ಪಡೆದುಕೊಳ್ಳಲು ಅರ್ಹರಾಗಿದ್ದಾರೆ. ವಿಚ್ಛೇದಿತರು ನ್ಯಾಯಾಲಯದಿಂದ ಪಡೆದ ವಿಚ್ಛೇದನಾ ಪತ್ರ ಅಥವಾ ಸ್ವಯಂ ದೃಢೀಕರಣ ಪತ್ರ ನೀಡಿದರೂ ಸಾಕು, ಯೋಜನೆಯ ಲಾಭ ಪಡೆದುಕೊಳ್ಳಬಹುದು. ಇದರಡಿ ಒಟ್ಟು 12 ಸಾವಿರ ಅರ್ಹ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ.

ರಾಜ್ಯ ಸರ್ಕಾರದ ಕನಸಿನ ಯೋಜನೆಗಳಲ್ಲಿ ಒಂದಾಗಿರುವ ‘ಮನಸ್ವಿನಿ’ ಯೋಜನೆಗಳು 2013 ಆಗಸ್ಟ್ ತಿಂಗಳಿನಿಂದ ರಾಜ್ಯಾದ್ಯಂತ ಜಾರಿಗೊಂಡಿದೆ. ಹೋಬಳಿ ಮಟ್ಟದಲ್ಲಿ ಜನಸ್ನೇಹಿ ಕೇಂದ್ರಗಳಲ್ಲಿ ಅರ್ಜಿ ಸ್ವೀಕಾರ ಆರಂಭವಾಗಿ, ಅರ್ಜಿ ಸ್ವೀಕರಿಸಿದ 30 ದಿನಗಳೊಳಗೆ ವಾಸಸ್ಥಳ ದೃಢೀಕರಣ ಮಾಡಿಕೊಂಡು 500 ರೂ. ಮಾಸಾಶನವನ್ನು ನೀಡಲಾಗುತ್ತಿದೆ.


ಗ್ರಾಮೀಣ ಪ್ರದೇಶದಲ್ಲಿ ವಾರ್ಷಿಕ ರೂ12 ಸಾವಿರ ಹಾಗೂ ನಗರ ಪ್ರದೇಶದಲ್ಲಿ ರೂ17 ಸಾವಿರಕ್ಕಿಂತ ಕಡಿಮೆ ಆದಾಯ ಹೊಂದಿದ್ದು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಲು ಅರ್ಹರಾಗಿದ್ದಾರೆ.

“ಬಡತನ ರೇಖೆಗಿಂತ ಕೆಳಗಿರುವ 40ರಿಂದ 64 ವರ್ಷದೊಳಗಿನ ಅವಿವಾಹಿತ ಹಾಗೂ ವಿಚ್ಛೇದನ ಪಡೆದಿರುವ ಮಹಿಳೆಯರಿಗೆ ಆರ್ಥಿಕ ನೆರವು ನೀಡಿ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಮನಸ್ವಿನಿ ಯೋಜನೆ ಜಾರಿಗೊಳಿಸಲಾಗಿದೆ.”
ಮುಖ್ಯಮಂತ್ರಿ ಸಿದ್ದರಾಮಯ್ಯ

About admin

Check Also

ಮೋದಿಯ ಕನಸಿನ ಯೋಜನೆಯಾದ ಅಂಚೆ ಬ್ಯಾಂಕ್ ಖಾತೆ ತೆಗೆಯೋದು ಹೇಗೆ..!

ಹೌದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌’ಗೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಚಾಲನೆ ನೀಡಿದ್ದಾರೆ. …

Leave a Reply

Your email address will not be published. Required fields are marked *