Breaking News
Home / ಇತ್ತೀಚಿನ ಸುದ್ದಿಗಳು / ಪಿಯುಸಿ ಮುಗಿದ ನಂತರ ಈ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡರೆ ಕೈ ತುಂಬಾ ಹಣ ಗಳಿಸಿಬಹುದು..!

ಪಿಯುಸಿ ಮುಗಿದ ನಂತರ ಈ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡರೆ ಕೈ ತುಂಬಾ ಹಣ ಗಳಿಸಿಬಹುದು..!

ಹೌದು ನಾವು ಪಿ ಯು ಸಿ ಮುಗಿದ ನಂತರ ಏನು ಮಾಡ್ಬೇಕು ಯಾವ ಕೋರ್ಸ್ ಮಾಡಬೇಕು ಅನ್ನೋದು ಗೊಂದಲವಿರುತ್ತೆ ಆಗ ನಮ್ಮ ಕರಿಯರ್‌ಗೆ ಸಂಬಂಧಿಸಿದಂತೆ ಇಂದು ಹಲವಾರು ಕ್ಷೇತ್ರದಲ್ಲಿ ಕಾಂಪಿಟೀಶನ್‌ ಕಂಡು ಬರುತ್ತದೆ. ಈ ಕಾರಣದಿಂದಾಗಿ ಯುವಕರು ಡಿಗ್ರಿ ಪಡೆದ ನಂತರವೂ ನೌಕರಿ ಗಳಿಸಲು ಕಷ್ಟಪಡುತ್ತಾರೆ. ಹೆಚ್ಚಾಗಿ ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಪಿಯುಸಿ ಮುಗಿಸಿದ ನಂತರ ಇಂಜಿನಿಯರಿಂಗ್‌, ವಾಣಿಜ್ಯ ಅಥವಾ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ ಮಾಡುತ್ತಾರೆ. ಇದರ ಬದಲಾಗಿ ನೀವು ಕೆಲವೊಂದು ಕೋರ್ಸ್‌ಗಳನ್ನು ಮಾಡಿದರೆ ಉತ್ತಮ ಸಂಬಳ ದೊರೆಯುವುದರ ಜೊತೆಗೆ ಬೆಸ್ಟ್‌ ಕರಿಯರ್‌ ನಿಮ್ಮದಾಗುತ್ತದೆ.

ಅನಾಲಿಸ್ಟ್‌ :
ಅನಾಲಿಸ್ಟ್‌ ಜಾಬ್‌ಗೆ ಅಧಿಕ ಡಿಮಾಂಡ್‌‌ ಇದೆ. ನೀವು ಡಾಟಾ ಅಥವಾ ಡೊಮೆನ್‌ ಅನಾಲಿಸ್ಟ್‌ ಕೋರ್ಸ್‌ ಮಾಡಿದರೆ ಅಥವಾ ಅದರ ಬಗ್ಗೆ ಮಾಹಿತಿ ಪಡೆದಿದ್ದರೆ ಅದೆ ಕ್ಷೇತ್ರದಲ್ಲಿ ನೀವು ಮುಂದುವರೆಯಬಹುದು. ಇದಕ್ಕಾಗಿ ಹೆಚ್ಚು ಸ್ಯಾಲರಿ ಕೂಡ ದೊರೆಯುತ್ತದೆ. ಅಲ್ಲದೆ ಬೆಸ್ಟ್‌ ನೌಕರಿ ಕೂಡ ದೊರೆಯುತ್ತದೆ.

ಇನ್‌ಫಾರ್ಮೇಶನ್‌ ಸೆಕ್ಯೂರಿಟಿ ಮತ್ತು ಎಥಿಕಲ್‌ ಹ್ಯಾಕರ್‌ :
ನೀವು ಭಾರತದಲ್ಲಿ ಬೆಸ್ಟ್‌ ಉದ್ಯೋಗ ಪಡೆಯಲು ಬಯಸಿದ್ದರೆ ಇನ್‌ಫಾರ್ಮೇಶನ್‌ ಸೆಕ್ಯೂರಿಟಿ ಕೂಡ ಬೆಸ್ಟ್‌ ಐಟಿ ಕೋರ್ಸ್‌ ಆಗಿದೆ. ಈ ಕೋರ್ಸ್ ಬಳಿಕ ನೀವು ಎಥಿಕಲ್‌ ಹ್ಯಾಕರ್‌ ಆಗಬಹುದು. ಅಲ್ಲದೆ ಯಾವುದೆ ಐಟಿ ಕಂಪನಿಗೆ ನೆಟ್‌ವರ್ಕ್‌ ಸೆಕ್ಯೂರಿಟಿ ಪ್ರೊವೈಡ್‌ ಮಾಡಬಹುದು.

ಟ್ರಾವಲಿಂಗ್‌ :
ನಿಮಗೆ ಟ್ರಾವೆಲಿಂಗ್‌ ಮಾಡುವುದು ಇಷ್ಟವಾದರೆ ಟ್ರಾವೆಲಿಂಗ್‌ ಫೀಲ್ಡ್‌ನಲ್ಲಿ ಕೆಲಸ ಮಾಡಬಹುದು. ಈ ಕ್ಷೇತ್ರದಲ್ಲಿ ನೀವು ಟೂರಿಸ್ಟ್‌ ಗೈಡ್‌, ಈವೆಂಟ್‌ ಕೋ ಆರ್ಡಿನೇಟರ್‌ ಮತ್ತು ಟ್ರಾವೆಲ್‌ ಬ್ಲಾಗರ್‌ ಅಥವಾ ಟೂರ್‌ ಲೀಡರ್‌ ಆಗಿ ಕೆಲಸ ಮಾಡಬಹುದು.

ಇಂಟೀರಿಯರ್‌ ಡಿಸೈನರ್‌ :
ನೀವು ಕ್ರಿಯೇಟಿವ್‌ ಆಗಿದ್ದರೆ ಮನೆಯನ್ನು ಅಲಂಕರಿಸಲು ನಿಮಗೆ ಇಷ್ಟವಿದ್ದರೆ ಈ ಕೋರ್ಸ್‌ ಆಯ್ಕೆ ಮಾಡಬಹುದು. ಪೈಂಟಿಂಗ್‌ ಮಾಡಲು ಆಸಕ್ತಿ ಇರುವವರು ಕೂಡ ಈ ಕೋರ್ಸ್‌ ಮಾಡಬಹುದು. ಡಿಪ್ಲೊಮಾ ಶಾರ್ಟ್‌ ಟರ್ಮ್‌ ಕೋರ್ಸ್‌ ಕೂಡ ಮಾಡಬಹುದು.

ಸ್ಪಾ ಮ್ಯಾನೇಜ್‌ಮೆಂಟ್‌ :
ಈ ಕ್ಷೇತ್ರದಲ್ಲೂ ನೀವು ನಿಮ್ಮ ಕರಿಯರ್‌ ಆಯ್ಕೆ ಮಾಡಬಹುದು. ಇದರಲ್ಲಿ ಮಸಾಜ್‌ ಅಥವಾ ಥೆರಪಿಸ್ಟ್‌ ಕೋರ್ಸ್‌ ಕೂಡ ಮಾಡಬಹುದು. ಇದರಲ್ಲಿ ಆರಂಭದಲ್ಲಿ ನಿಮಗೆ ಕಡಿಮೆ ಹಣ ಸಿಗುತ್ತದೆ. ಆದರೆ ಅನುಭವ ದೊರೆತ ನಂತರ ಹೆಚ್ಚಿನ ಸ್ಯಾಲರಿ ಕೂಡ ದೊರೆಯುತ್ತದೆ.

About admin

Check Also

ಮೋದಿಯ ಕನಸಿನ ಯೋಜನೆಯಾದ ಅಂಚೆ ಬ್ಯಾಂಕ್ ಖಾತೆ ತೆಗೆಯೋದು ಹೇಗೆ..!

ಹೌದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌’ಗೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಚಾಲನೆ ನೀಡಿದ್ದಾರೆ. …

Leave a Reply

Your email address will not be published. Required fields are marked *