Breaking News
Home / ಇತ್ತೀಚಿನ ಸುದ್ದಿಗಳು / ರಾಜ್ಯ ಸರ್ಕಾರದಿಂದ ರೈತರಿಗಾಗಿ ಸೂರ್ಯ ಯೋಜನೆ ಏನಿದು ಮತ್ತು ಇದರ ಉಪಯೋಗವೇನು, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!

ರಾಜ್ಯ ಸರ್ಕಾರದಿಂದ ರೈತರಿಗಾಗಿ ಸೂರ್ಯ ಯೋಜನೆ ಏನಿದು ಮತ್ತು ಇದರ ಉಪಯೋಗವೇನು, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!

ಭಾರತದಲ್ಲೇ ಮೊದಲ ಬಾರಿಗೆ, ಕರ್ನಾಟಕ ಸರ್ಕಾರವು ರೈತರ ಅಭ್ಯುದಯಕ್ಕಾಗಿ ಸೌರ ಶಕ್ತಿಯನ್ನು ಬಳಸಿಕೊಳ್ಳುವ ಯೋಜನೆಯನ್ನು ಜಾರಿಗೆ ತಂದಿದೆ. 10 KWH ಸೌರಶಕ್ತಿ ಸ್ಥಾವರವನ್ನು ಸ್ಥಾಪಿಸುವ ಮೂಲಕ, ರೈತರು ತಮ್ಮ ನೀರಾವರಿ ಪಂಪ್ ಸೆಟ್ ಗಳಿಗೆ ಗ್ರಿಡ್ ವಿದ್ಯುತ್ ಸರಬರಾಜಿನ ಮೇಲೆ ಅವಲಂಬನೆಯಾಗುವ ಪ್ರಮೇಯ ಬಾರದು. ಜತೆಗೆ ಉತ್ಪಾದನೆಯಾದ ಹೆಚ್ಚಿನ ವಿದ್ಯುತ್ ನ್ನು ಸರಕಾರಕ್ಕೆ ಮಾರಾಟ ಮಾಡುವುದರಿಂದ ಆರ್ಥಿಕ ಪ್ರಯೋಜನ ಪಡೆಯುವುದು ಕೂಡ ಈ ಯೋಜನೆಯ ವೈಶಿಷ್ಟ್ಯವಾಗಿದೆ.

ಕರ್ನಾಟಕ ಸರ್ಕಾರದ ಸೌರ ನೀತಿ 2014-2021 ಒಂದು ಕ್ರಾಂತಿಕಾರಿಯಾಗಿದ್ದು, ಇದು ಇಂಧನ ಸಚಿವರಾದ ಡಿ.ಕೆ.ಶಿವಕುಮಾರ್ ಅವರ ಕಲ್ಪನೆಯ ಕೂಸಾಗಿದೆ. ರೈತರಹಿತ ಗಮನದಲ್ಲಿರಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಯನ್ನು ರೂಪಿಸಿದ್ದಾರೆ. ವರ್ಷದ ಎಲ್ಲ ಋತುಗಳಲ್ಲೂ ರೈತರು ನೀರಾವರಿ ಪಂಪ್ ಸೆಟ್ ಅನ್ನು ಬಳಸುವುದಿಲ್ಲ. ಸೌರಶಕ್ತಿಯನ್ನು ವರ್ಷಪೂರ್ತಿ ಉತ್ಪಾದಿಸಬಹುದು. ಉತ್ಪಾದಿತ ಹೆಚ್ಚಿನ ವಿದ್ಯುತ್ ಅನ್ನು ರಾಜ್ಯ ಸರ್ಕಾರದ ‘ಪವರ್ ಗ್ರಿಡ್’ ಗೆ ಪೂರೈಸಿ ಹೆಚ್ಚುವರಿ ಹಣ ಗಳಿಸಲು ಸಹಕಾರಿಯಾಗಿದೆ.

ಈ ಯೋಜನೆಯಡಿ ರೈತರು ತಮ್ಮ ಜಮೀನಿನಲ್ಲಿ ಸೌರ ವಿದ್ಯುತ್ ಚಾಲಿತ ಪಂಪ್ ಸೆಟ್ ಅಳವಡಿಸಿಕೊಳ್ಳಬಹುದಾಗಿದ್ದು ಸರ್ಕಾರದಿಂದ ಶೇ. 90ರಷ್ಟು ಸಹಾಯಧನವೂ ದೊರೆಯಲಿದೆ. ತಮ್ಮ ಬಳಕೆಯಾನಂತರದ ಹೆಚ್ಚುವರಿ ವಿದ್ಯುತ್ ಅನ್ನು ಸರ್ಕಾರವು ಪ್ರತಿ ಯುನಿಟ್ ಗೆ ರೂ. 7.08 ದರದಲ್ಲಿ (ರೈತರು ಸಹಾಯಧನ ಪಡೆಯದಿದ್ದಲ್ಲಿ); ಪ್ರತಿ ಯುನಿಟ್ ಗೆ ರೂ. 6.03 (ಸಬ್ಸಿಡಿ ಪಡೆದ ರೈತರು)ಯಂತೆ ಸರ್ಕಾರಕ್ಕೆ ಮಾರಾಟ ಮಾಡಬಹುದು. ಈ ಯೋಜನೆಯನ್ನು ನೀರಾವರಿ ಪಂಪ್ ಸೆಟ್ ಗಳಿಗೆ (I.P.) ಹಾಗೂ ಮೀಸಲಾದ ಪೀಢರ್ ಗಳಿಗೆ ರೂಪಿಸಲಾಗಿದೆ.

ಈ ಯೋಜನೆಡಿ 10 KWH ಸೌರ ವಿದ್ಯುತ್ ಉತ್ಪಾದನೆ ಹೊಂದಿರುವ ರೈತರು ತಮ್ಮ ನೀರಾವರಿಯ ಬಳಕೆಯಾನಂತರ ವಾರ್ಷಿಕ ರೂ. 50,000/-ದವರೆಗೆ ಹಣ ಗಳಿಸಬಹುದಾಗಿದೆ. ಬರಗಾಲ ಅಥವಾ ಅಕಾಲಿಕ ಮಳೆ ಬೀಳುವ ವೇಳೆಯಲ್ಲಿ ರೈತರ ಆದಾಯವನ್ನು ಹೆಚ್ಚಿಸಲಿದೆ.

ರಾಜ್ಯ ಸರ್ಕಾರವು ವ್ಯವಸಾಯ ಕ್ಷೇತ್ರಕ್ಕೆ ಉಚಿತ ವಿದ್ಯುತ್ ಪೂರೈಸುತ್ತಿದೆ. ಇದರ ಪರಿಣಾಮವಾಗಿ ಕೃಷಿ ಕ್ಷೇತ್ರದ ಅಭಿವೃದ್ಧಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಸೂರ್ಯ ರೈತಾ ಮೂಲಕ, ಇಲಾಖೆಯು ಸಬ್ಸಿಡಿ ಹೊರೆಯನ್ನು ಕಡಿಮೆಗೊಳಿಸಲು ಹೆಚ್ಚಿನ ರೈತರಿಗೆ ತಮ್ಮದೇ ಆದ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲು ಪ್ರೋತ್ಸಾಹಿಸುತ್ತದೆ.

ಪರಿಷ್ಕೃತ ಸೌರ ನೀತಿ 2014-21ರಲ್ಲಿ ಕೈಗಾರಿಕಾ, ವಾಣಿಜ್ಯ ಮತ್ತು ವಸತಿ ವಿಭಾಗಗಳಲ್ಲಿ ಅಳವಡಿಸಿಕೊಳ್ಳಲು ಮೇಲ್ಚಾವಣಿಯ ಯೋಜನೆಯನ್ನು ಜಾರಿಗೆ ತಂದಿದೆ. ಅದೇ ರೀತಿ ಈ ಸೌಲಭ್ಯಗಳಿಂದ ಈವರೆವಿಗೂ ವಂಚಿತರಾಗಿದ್ದ ರೈತರಿಗೆ ಈಗ ಸೌಲಭ್ಯಗಳು ದೊರೆಯುತ್ತಿವೆ.

ರೈತರಿಗೆ ನಿರಂತರ ವಿದ್ಯುತ್ ಪೂರೈಸುವ ಸೌರ ವಿದ್ಯುತ್ ಘಟಕವು ಕನಕಪುರ ಸಮೀಪದ ಹಾರೊಬೆಲೆಯಲ್ಲಿ ಸ್ಥಾಪನೆಯಾಗಿದೆ. ದೇಶದಲ್ಲೇ ಮೊಟ್ಟ ಮೊದಲ ಪರಿಪೂರ್ಣ ಸೌರವಿದ್ಯುತ್ ಘಟಕ ಎಂಬ ಹೆಮ್ಮೆ ಇದಕ್ಕಿದೆ. ಈ ಗ್ರಾಮದಲ್ಲಿನ 300ಕ್ಕೂ ಹೆಚ್ಚು ರೈತರಿಗೆ ಈ ಸೌಲಭ್ಯ ದೊರೆತಿದೆ.

ನೀವು ಸಹ ಈ ಯೋಜನೆಯನ್ನು ಉಪಯೋಗಿಸಿಕೊಳ್ಳಿ.

About admin

Check Also

ಮೋದಿಯ ಕನಸಿನ ಯೋಜನೆಯಾದ ಅಂಚೆ ಬ್ಯಾಂಕ್ ಖಾತೆ ತೆಗೆಯೋದು ಹೇಗೆ..!

ಹೌದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌’ಗೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಚಾಲನೆ ನೀಡಿದ್ದಾರೆ. …

Leave a Reply

Your email address will not be published. Required fields are marked *