Breaking News
Home / ಇತ್ತೀಚಿನ ಸುದ್ದಿಗಳು / ನ್ಯೂ ಬ್ಯಾಂಕ್ ಆರಂಭಿಸುವವರಿಗೆ ಶಾಕ್ ನೀಡಿದ ರವಿ ಚನ್ನಣ್ಣವರ್, ಈ ನಿಯಮ ಅನುಸರಿಸಲೇಬೇಕು..!

ನ್ಯೂ ಬ್ಯಾಂಕ್ ಆರಂಭಿಸುವವರಿಗೆ ಶಾಕ್ ನೀಡಿದ ರವಿ ಚನ್ನಣ್ಣವರ್, ಈ ನಿಯಮ ಅನುಸರಿಸಲೇಬೇಕು..!

ಮೈಸೂರು ಜಿಲ್ಲೆಯಲ್ಲಿ ಹೊಸದಾಗಿ ಬ್ಯಾಂಕ್ ಆರಂಭಿಸುವವರು ಈ ನಿಯಮ ಪಾಲಿಸಲೇಬೇಕು ಅಂತ ಎಸ್ಪಿ ರವಿ ಚನ್ನಣ್ಣವರ್ ಖಡಕ್ ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಹೊಸದಾಗಿ ಬ್ಯಾಂಕ್ ಆರಂಭಿಸುವವರು ಸೆಕ್ಯೂರಿಟಿ ಆಡಿಟ್ ರಿಪೋರ್ಟ್‍ನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕೆಂದು ಜಿಲ್ಲಾ ಪೊಲೀಸ್‍ವರಿಷ್ಠಾಧಿಕಾರಿ ರವಿ ಚನ್ನಣ್ಣನವರ್ ತಿಳಿಸಿದ್ದಾರೆ. ಎಸ್‍ಪಿ ಕಚೇರಿಯಲ್ಲಿಂದು ನಡೆದ ಪೊಲೀಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣನವರ್ ಹಾಗೂ ಜಿಲ್ಲಾ ವ್ಯಾಪ್ತಿಯ ಎಲ್ಲಾ ಬ್ಯಾಂಕ್ ಮ್ಯಾನೇಜರ್‍ಗಳ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಾ ಬ್ಯಾಂಕ್‍ಗಳಿಗೂ ಪೊಲೀಸರನ್ನು ನೇಮಕ ಮಾಡಲು ಸಾಧ್ಯವಿಲ್ಲ.

ಹಾಗಾಗಿ ಬ್ಯಾಂಕ್‍ನವರೇ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು ಹಾಗೂ ಬ್ಯಾಂಕ್ ಕಟ್ಟಡ ಭದ್ರತೆಯಿಂದ ಕೂಡಿರುವ ಬಗ್ಗೆ ವರದಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಪ್ರತಿಯೊಂದು ಬ್ಯಾಂಕ್‍ಗಳಲ್ಲಿ ಸಿಸಿಟಿವಿ ಅಳವಡಿಸಿರಬೇಕು. ಬ್ಯಾಂಕ್‍ನ ಭದ್ರತೆಗಾಗಿ ಸೆಕ್ಯೂರಿಟಿ ಗಾರ್ಡ್‍ನ್ನು ನೇಮಿಸಿಕೊಳ್ಳಬೇಕು. ಎಟಿಎಂಗಳಿಗೂ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕೆಂದು ಬ್ಯಾಂಕ್ ಅಧಿಕಾರಿಗಳಿಗೆ ಎಸ್‍ಪಿ ಸೂಚಿಸಿದರು.

About admin

Check Also

ಪ್ರಧಾನಿ ಮೋದಿಯಿಂದ ಮತ್ತೊಂದು ಬಿಗ್ ಯೋಜನೆ ವಿಶ್ವ ವ್ಯಾಪಿ ಚಾಲನೆ..!

ಹೌದು ಪ್ರಧಾನಿ ಮೋದಿಯಿಂದ ಮತ್ತೊಂದು ಬಿಗ್ ಯೋಜನೆ ವಿಶ್ವ ವ್ಯಾಪಿ ಚಾಲನೆ ನೀಡಲಿದ್ದಾರೆ ಏನು ಯಾವ ರೀತಿ ಅನ್ನೋದು ಇಲ್ಲಿದೆ …

Leave a Reply

Your email address will not be published. Required fields are marked *