Breaking News
Home / ಇತ್ತೀಚಿನ ಸುದ್ದಿಗಳು / ಕೋಮು ಗಲಭೆಗಳ ಪ್ರಕರಣಕ್ಕೆ ಸಂಬಂಧಿಸದಂತೆ ನಮ್ಮ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ..?

ಕೋಮು ಗಲಭೆಗಳ ಪ್ರಕರಣಕ್ಕೆ ಸಂಬಂಧಿಸದಂತೆ ನಮ್ಮ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ..?

ಕಳೆದ ಮೂರು ವರ್ಷಗಳಲ್ಲಿ ದೇಶಾದ್ಯಂತ ಕೋಮು ಗಲಭೆಗಳು ಹೆಚ್ಚಾಗಿದ್ದು, 2017ರಲ್ಲಿ 822 ಕೋಮುಗಲಭೆಗಳು ನಡೆದಿವೆ. ಅವುಗಳಲ್ಲಿ 111 ಮಂದಿ ಸಾವನಪ್ಪಿದ್ದಾರೆ ಹಾಗೂ 2384 ಮಂದಿ ಗಾಯಗೊಂಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ಕೋಮುಗಲಭೆಗಳು ನಡೆದಿವೆ. ಅಲ್ಲಿ ನಡೆದ 195 ಕೋಮುಗಲಭೆಗಳಲ್ಲಿ 44 ಮಂದಿ ಮೃತಪಟ್ಟಿದ್ದಾರೆ ಹಾಗೂ 542 ಮಂದಿ ಗಾಯಗೊಂಡಿದ್ದಾರೆಂದು, ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಹಂಸರಾಜ್ ಆಹಿರ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ಕರ್ನಾಟಕದಲ್ಲಿ ನಡೆದಿರುವ 100 ಕೋಮು ಸಂಘರ್ಷಗಳಲ್ಲಿ 9 ಮಂದಿ ಮೃತಪಟ್ಟಿದ್ದು 229 ಮಂದಿ ಗಾಯಗೊಂಡಿದ್ದಾರೆ. ರಾಜಸ್ಥಾನದಲ್ಲಿ 91, ಬಿಹಾರದಲ್ಲಿ 85, ಮಧ್ಯ ಪ್ರದೇಶದಲ್ಲಿ 60, ಪಶ್ಚಿಮ ಬಂಗಾಳದಲ್ಲಿ 58 ಹಾಗೂ ಗುಜರಾತಿನಲ್ಲಿ 50 ಗಲಭೆಗಳು ನಡೆದಿವೆ ಎಂದು ಆಹಿರ್ ತಿಳಿಸಿದ್ದಾರೆ.

About admin

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *