Breaking News
Home / ಇತ್ತೀಚಿನ ಸುದ್ದಿಗಳು / ಎಸ್’ಬಿಐನಿಂದ ವಸೂಲಾಗದ 20 ಸಾವಿರ ಕೋಟಿ ಸಾಲ ಮನ್ನಾ..!

ಎಸ್’ಬಿಐನಿಂದ ವಸೂಲಾಗದ 20 ಸಾವಿರ ಕೋಟಿ ಸಾಲ ಮನ್ನಾ..!

ಕಳೆದ ಹಣಕಾಸು ವರ್ಷದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಒಟ್ಟಾರೆ 81,683 ಕೋಟಿ ರೂ.ನಷ್ಟು ವಸೂಲಾಗದೇ ಇದ್ದ ಭಾರೀ ಪ್ರಮಾಣದ ಸಾಲವನ್ನು ಮನ್ನಾ ಮಾಡಿವೆ. ಈ ಪೈಕಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಅತಿ ಹೆಚ್ಚು ಅಂದರೆ 20,339 ಕೋಟಿ ರು. ಸಾಲವನ್ನು ಮನ್ನಾ ಮಾಡಿದೆ.

ಇದು ಎಸ್‌ಬಿಐನಲ್ಲಿ 5 ಸಹಯೋಗಿ ಬ್ಯಾಂಕ್‌ಗಳು ವಿಲೀನವಾಗುವುದಕ್ಕೂ ಮುನ್ನ ಮಾಡಲಾದ ಮನ್ನಾ ಆಗಿದೆ ಎಂದು ಕೇಂದ್ರ ಸರ್ಕಾರದ ಅಂಕಿ ಅಂಶಗಳು ಹೇಳಿವೆ.

2012 -13ರಲ್ಲಿ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳು 27,231 ಕೋಟಿ ರು. ವಸೂಲಾಗದ ಸಾಲವನ್ನು ಮನ್ನಾ ಮಾಡಿದ್ದವು. 2013 -14ರಲ್ಲಿ ಇದರ ಪ್ರಮಾಣ 34,409 ಕೋಟಿ, 2014-15 ರಲ್ಲಿ 49,018 ಕೋಟಿ, 2015 -16 ರಲ್ಲಿ 57,585 ಕೋಟಿಗೆ ಏರಿತು.

About admin

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *