Breaking News
Home / ಇತರೆ / ಏನಪ್ಪಾ ಇದು 2000 ನೇ ಇಸವಿಯಲ್ಲಿ ಹುಟ್ಟಿದವರು ಅದೃಷ್ಟವಂತರು ಹಾಗು ಭಾಗ್ಯಶಾಲಿಗಳಂತೆ ಇಲ್ಲಿ ನೋಡಿ..!

ಏನಪ್ಪಾ ಇದು 2000 ನೇ ಇಸವಿಯಲ್ಲಿ ಹುಟ್ಟಿದವರು ಅದೃಷ್ಟವಂತರು ಹಾಗು ಭಾಗ್ಯಶಾಲಿಗಳಂತೆ ಇಲ್ಲಿ ನೋಡಿ..!

ಏನಪ್ಪಾ ಹೀಗೆ ಹೇಳುತ್ತಿದ್ದೀರಾ ಅಂತ ಬೆರಗಾಗಬೇಡಿ 2000 ನೇ ಇಸವಿ ಒಳಗೆ ಹುಟ್ಟಿದವರು ಭಾಗ್ಯಶಾಲಿಗಳು ಹಾಗೂ ಪುಣ್ಯವಂತರು ಏಕೆಂದರೆ ಇವತ್ತಿನ ಕಾಲಮಾನಕ್ಕೆ ನಾವು ಹೋಲಿಸಿಕೊಂಡರೆ ಇದು ನಮಗೆ ಅರಿವಾಗುವ ಸಂಗತಿ ಅಂದು ನಾವು ಇದ್ದ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ತುಂಬ ವ್ಯತ್ಯಾಸ ಇದೆ.

ಇದಕ್ಕೆ ಉದಾಹರಣೆಯಂತೆ ಕೆಲ ವಿಚಾರಗಳು ಇಲ್ಲಿವೆ ನೋಡಿ.!

೧. ನಾವು, ಶಾಲೆಗೆ ಪ್ರಾಣಿಗಳಂತೆ ಹೆಣಭಾರದ ಪುಸ್ತಕಗಳನ್ನು ಹೊತ್ತು ಹೋಗಲಿಲ್ಲ.
೨. ಆಟ ಆಡುವಾಗ, ಸೈಕಲ್ ಸವಾರಿ ಮಾಡುವಾಗ ನಮಗೆ ಹೆಲ್ಮೆಟ್ ಧರಿಸಿಕೊಳ್ಳುವ ಧಾವಂತವಿರಲಿಲ್ಲ.
೩. ಶಾಲೆ ಮುಗಿದ ಮೇಲೆ ಮುಸ್ಸಂಜೆಯಾಗುವವರೆಗೂ ಆಟವಾಡುತ್ತಿದ್ದೆವು. ನಮಗೆ ಈ ಟಿವಿ, ಕಂಪ್ಯೂಟರ್ ಗಳ ಗೊಡವೆಯಿರಲಿಲ್ಲ.


೪. ನಮ್ಮ ನಿಜವಾದ ಗೆಳೆಯರೊಂದಿಗಷ್ಟೇ ಆಡಿದೆವು, ಹಾಡಿದೆವು, ಕುಣಿದಾಡಿದೆವು, ಜಗಳಾಡಿದೆವು, ಮಾತಾಡಿದೆವು! ಮುಖ ಮೋರೆ ನೋಡದ, ಎದುರು ಬದುರು ಭೇಟಿಯಾಗದ ಆನ್ ಲೈನ್ ಗೆಳೆಯರೊಂದಿಗಲ್ಲ.
೫. ಬಾಯಾರಿಕೆಯಾದಾಗ ಧಾರಾಳವಾಗಿ ನಲ್ಲಿ ನೀರನ್ನೋ, ಹಳ್ಳದ ನೀರನ್ನೋ, ಕೆರೆ ಬಾವಿಯ ನೀರನ್ನೋ ಕುಡಿದೆವು. ಬಾಟಲಿ ನೀರಿಗಾಗಿ ಹುಡುಕಾಡಲಿಲ್ಲ.


೬. ಒಂದೇ ಹಣ್ಣನ್ನು ನಾಲ್ಕು ಮಂದಿ ಕಚ್ಚಿ ತಿಂದೆವು, ಒಂದೇ ಗ್ಲಾಸಿನಲ್ಲಿ ನಾಲ್ಕು ಮಂದಿ ಕಚ್ಚಿ ಕುಡಿದೆವು. ನಮಗೆ ಯಾವ ರೋಗವೂ ಬರಲಿಲ್ಲ. ಬರುವ ಭೀತಿಯೂ ಇರಲಿಲ್ಲ.
೭. ತಟ್ಟೆ ತುಂಬ ಸಿಹಿ ತಿಂಡಿಗಳನ್ನು ತಿಂದರೂ, ಧಂಡಿಧಂಡಿ ಅನ್ನ ಉಂಡರೂ ನಮ್ಮ ತೂಕ ಹೆಚ್ಚಾಗಲಿಲ್ಲ.
೮. ಬರಿಗಾಲಲ್ಲೇ ಊರು ಸುತ್ತಿದರೂ, ನಮ್ಮ ಪಾದಗಳಿಗೇನೂ ಆಗಲಿಲ್ಲ, ಕ್ರಿಮಿ ಕೀಟಗಳು ಅಂಟಿಕೊಳ್ಳಲಿಲ್ಲ.


೯. ವಿಟಮಿನ್, ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ, ಸೋಡಿಯಂ, ಪೊಟ್ಯಾಶಿಯಂ, ಮಣ್ಣು ಮಸಿ ಮಣ್ಣಾಂಗಟ್ಟಿ ಅಂತ ಮಾತ್ರೆ ನುಂಗಲಿಲ್ಲ. ಸಿರಪ್ಪು ಕುಡಿಯಲಿಲ್ಲ. ಆದರೂ ಆರೋಗ್ಯವಾಗೇ ಇದ್ದೆವು.
೧೦. ನಮ್ಮ ಆಟಿಕೆಗಳನ್ನು ನಾವೇ ತಯಾರಿಸಿಕೊಂಡು ಆಡಿದವರು ನಾವು. ಅದಕ್ಕಾಗಿ ಅಪ್ಪ ಅವ್ವ, ಆಂಟಿ ಅಂಕಲ್ಲರು ಸಾವಿರಾರು ರೂಪಾಯಿ ಸುರಿಯಲಿಲ್ಲ.


೧೧. ನಮ್ಮ ಅಪ್ಪ ಅವ್ವ ಅಸಹ್ಯ ಹುಟ್ಟಿಸುವಷ್ಟು ಶ್ರೀಮಂತರಾಗಿರಲಿಲ್ಲ. ಹಣ ಮತ್ತು ಸಂಪತ್ತನ್ನು ಸಂಗ್ರಹಿಸಲೆಂದೇ ಬದುಕಿದವರಲ್ಲ. ಅವರು ಭೋಗದ ವಸ್ತುಗಳನ್ನು ಮೀರಿದ ಪ್ರೀತಿಯನ್ನು ಕೊಟ್ಟರು.
೧೨. ನಾವು ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಮೊಬೈಲ್ ಫೋನ್ ಗಳನ್ನು ಉಪಯೋಗಿಸಲಿಲ್ಲ. ಆ, ಈ ಸಂಕೇತಗಳನ್ನು ಬಳಸಲಿಲ್ಲ.


೧೩. ಯಾರೋ ಬರೆದದ್ದನ್ನು ಫಾರ್ವರ್ಡ್ ಮಾಡಲಿಲ್ಲ. ನಾವೇ ಬರೆದೆವು. ನಾವೇ ಓದಿದೆವು. ನೇರವಾಗಿ ಹೇಳಿದೆವು.
೧೪. ನಮ್ಮ ಬಳಿ ಸೆಲ್ ಫೋನ್, ಡಿವಿಡಿ, ಪೆನ್ ಡ್ರೈವ್, ಪ್ಲೇ ಸ್ಟೇಷನ್, ವಿಡಿಯೋ ಗೇಮ್, ಲ್ಯಾಪ್ ಟಾಪ್, ಇಂಟರ್ ನೆಟ್ ಗಳಿರಲಿಲ್ಲ. ಗೆಳೆಯರಿದ್ದರು..!


೧೫. ನಮ್ಮ ಸಂಬಂಧಿಕರ ಮನೆಗೆ, ಅಜ್ಜಿ ಮನೆಗೆ ನಮಗೆ ಬೇಕು ಬೇಕಾದಾಗಲೆಲ್ಲ ಹೋಗಿ ಬರುತ್ತಿದ್ದೆವು. ಕಾಲ್ ಮಾಡಿ ಪರ್ಮಿಷನ್ ಕೇಳಬೇಕಾದ ಪರಿಸ್ಥಿತಿಯಿರಲಿಲ್ಲ.
೧೬. ನಮ್ಮ ಜೊತೆಯಲ್ಲಿ ಬಂಧು ಮಿತ್ರರು, ಹಿತೈಷಿಗಳೂ ಇದ್ದರು. ಇನ್ಷೂರನ್ಸ್ ಇಲ್ಲದೆಯೂ ನಾವು ಬದುಕಬಹುದಿತ್ತು.
೧೭. ನಮ್ಮ ಅಪ್ಪ ಅವ್ವನಿಗಿಂತ ನಾವೇ ತಿಳಿದವರೆಂಬ ಭಾವನೆ ನಮಗೆಂದೂ ಬರಲಿಲ್ಲ.


ಆದರೆ, ನಮ್ಮ ಮಕ್ಕಳು ನಮಗಿಂತ ಬುದ್ಧಿವಂತರು ಎಂದು ಹೆಮ್ಮೆ ಪಡುತ್ತಿದ್ದೇವೆ. ಭಾವನೆಗಳ ಬೆಲೆ ತಿಳಿಯದೆ ಬೆಳೆಯುತ್ತಿದ್ದಾರೆ.
೧೮. ನಮ್ಮ ಫೋಟೋಗಳು ಹೆಚ್ಚಾಗಿ ಬ್ಲಾಕ್ ಆಂಡ್ ವೈಟ್ ಇರಬಹುದು;
ಆದರೆ, ನಮ್ಮ ನೆನಪುಗಳು ಎಷ್ಟೊಂದು ವರ್ಣರಂಜಿತವಾಗಿವೆ!!

ಸಗ್ರಹ ಮಾಹಿತಿ

About admin

Check Also

ಯಡಿಯೂರಪ್ಪಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ..!

ಹೌದು ಇದೇನಪ್ಪ ಯಡಿಯೂರಪ್ಪಗೆ ಕುಮಾರಸ್ವಾಮಿ ಕುರ್ಚಿ ಬಿಟ್ಟುಕೊಟ್ಟಿದ್ದಾರೆ ಅಂದ್ರೆ ಎಲ್ಲರು ಶಾಕ್ ಆಗುವ ವಿಚಾರವೇ ಈ ಎಲ್ಲ ನಾಯಕರು ಚುನಾವಣೆ …

Leave a Reply

Your email address will not be published. Required fields are marked *