Breaking News
Home / ಆರೋಗ್ಯ / ಮುಖದಲ್ಲಿ ಕಪ್ಪು ಕಲೆಯ ಸಮಸ್ಯೆಯೇ ಇಲ್ಲಿದೆ ನೋಡಿ ಪರಿಹಾರ..!

ಮುಖದಲ್ಲಿ ಕಪ್ಪು ಕಲೆಯ ಸಮಸ್ಯೆಯೇ ಇಲ್ಲಿದೆ ನೋಡಿ ಪರಿಹಾರ..!

ಇತ್ತೀಚಿಗೆ ಪ್ರತಿಯೊಬ್ಬರಿಗೂ ಮುಖದಲ್ಲಿ ಮೊಡವೆ ಸಮಸ್ಯೆ ಅಥವಾ ಕಪ್ಪು ಕಲೆಯ ಸಮಸ್ಯೆ ಅದಕ್ಕೆ ಮೂಸಂಬಿಯಲ್ಲಿ ಅಡಗಿದೆ ಪರಿಹಾರ,

ಮುಖದ ಕಲೆ ಅಲ್ಲದೆ ಇನ್ನು ಹಲವಾರು ಸಮಸ್ಯೆಗಳಿಗೆ ಪರಿಹಾರ ಈ ಮೂಸಂಬಿಯಲ್ಲಿದೆ.

ಮುಖದಲ್ಲಿ ಕಪ್ಪು ಕಲೆಗಳು ಇದ್ದಾರೆ ಅದಕ್ಕೆ ಮೂಸಂಬಿ ರಸವನ್ನು ಲೇಪಿಸಿದರೆ ಕ್ರಮೇಣವಾಗಿ ಕಲೆಗಳು ಗುಣವಾಗುತ್ತವೆ.

ಮೂಸಂಬಿ ರಸವನ್ನು ಹರಳೆಣ್ಣೆಯ ಜೊತೆ ಬೆರೆಸಿ ನೋವಿರುವ ಜಾಗಕ್ಕೆ ಹಚ್ಚಿದರೆ, ನೋವು ಶಮನವಾಗುತ್ತದೆ.

ತುಟಿ ಒಡೆದಿದ್ದರೆ, ಮೂಸಂಬಿ ರಸವನ್ನು ದಿನದಲ್ಲಿ 3ರಿಂದ4 ಬಾರಿ ತುಟಿಗೆ ಲೇಪಿಸಿದರೆ, ಒಡೆತ ಕಡಿಮೆಯಾಗಿ ತುಟಿ ಮೃದುವಾಗುತ್ತದೆ.

ಮೂಸಂಬಿ ಸಿಪ್ಪೆಯನ್ನು ಮತ್ತು ಅರಿಶಿನವನ್ನು ಜಜ್ಜಿ ಮುಖಕ್ಕೆ ಲೇಪಿಸಿದರೆ, ಮೊಡವೆ ಕಡಿಮೆಯಾಗುತ್ತದೆ.

2 ಚಮಚ ಮೂಸಂಬಿ ರಸಕ್ಕೆ 4 ಚಮಚ ನೆಲ್ಲಿಕಾಯಿ ರಸ ಮತ್ತು 1 ಚಮಚ ಜೇನುತುಪ್ಪ ಬೆರೆಸಿ ಖಾಲಿ ಹೊಟ್ಟೆಗೆ ಸೇವಿಸಿವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದಾಗಿದೆ.

ಮೂಸಂಬಿ ರಸವನ್ನು ನೀರಿನಲ್ಲಿ ಕುದಿಸಿ ಸೇವಿಸಿದರೆ ಮೂತ್ರ ಮಾರ್ಗದ ಸೋಂಕು ಗುಣವಾಗುತ್ತದೆ.

ಮೂಸಂಬಿ ರಸದಲ್ಲಿರುವ ಸಿಟ್ರಿಕ್‌ ಆಮ್ಲ ಮತ್ತು ಇತರ ಆಮ್ಲಗಳು ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಹಾಯಮಾಡುತ್ತದೆ.

ಇವೆಲ್ಲದರ ಜೊತೆಗೆ ದಿನಕ್ಕೆರಡು ಲೋಟ ಮೂಸಂಬಿ ಜ್ಯೂಸ್‌ ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ದ್ರವ, ವಿಟಮಿನ್‌ ಸಿ ದೊರಕುವ ಮೂಲಕ ದೇಹಕ್ಕೆ ಪೋಷಣೆ ಲಭಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಕಾಮಾಲೆ ರೋಗವನ್ನು ನಿವಾರಿಸುತ್ತದೆ ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.

About admin

Check Also

ಹುಳುಕಡ್ಡಿ ಸಮಸ್ಯೆಗೆ ನೇರಳೆಯಲ್ಲಿ ಅಡಗಿದೆ ಓಷಧಿ ಗುಣಗಳು..!

ನಮಗೆ ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು …

Leave a Reply

Your email address will not be published. Required fields are marked *