Breaking News
Home / ಇತರೆ / ಇಲ್ಲಿ ಕಲ್ಲಿನ ಗೋಪುರ ಕಟ್ಟಿದ್ರೆ ನಿಮ್ಮ ಪ್ರೀತಿ ಸಕ್ಸಸ್ ಅಂತೇ ಎಲ್ಲಿ ಗೊತ್ತಾ ಇಲ್ಲಿದೆ ನೋಡಿ..!

ಇಲ್ಲಿ ಕಲ್ಲಿನ ಗೋಪುರ ಕಟ್ಟಿದ್ರೆ ನಿಮ್ಮ ಪ್ರೀತಿ ಸಕ್ಸಸ್ ಅಂತೇ ಎಲ್ಲಿ ಗೊತ್ತಾ ಇಲ್ಲಿದೆ ನೋಡಿ..!

ಫೆಬ್ರವರಿ 14 ಬಂದ್ರೆ ಸಾಕು ಪ್ರೇಮಿಗಳು ರೆಕ್ಕೆ ಬಿಚ್ಕೊಂಡು ನೀಲಾಕಾಶದಲ್ಲಿ ತೇಲಾಡ್ತಾ ಇರ್ತಾರೆ. ಪ್ರೇಮಿಗಳು ತಮ್ಮ ಪ್ರೀತಿ ಉಳಿಸಿಕೊಳ್ಳಲು ಇಲ್ಲಸಲ್ಲದ ಪರಿಪಾಟಲು ಪಡ್ತಾ ಇರ್ತಾರೆ. ಅಂತಹ ಪ್ರೇಮಿಗಳು ಇಲ್ಲಿಗೆ ಬಂದು ಕಲ್ಲಿನ ಗೋಪುರ ಕಟ್ಟಿ ಹೋಗ್ತಾರೆ. ಹಾಗೆ ಗೋಪುರ ಕಟ್ಟಿದ್ರೆ ಪ್ರೀತಿ ಶಾಶ್ವತವಾಗಿ ಇರತಂತೆ.

ಹೌದು, ಇಲ್ಲಿನ ಪ್ರೇಮ ಮಂದಿರದಲ್ಲಿ ಕಲ್ಲಿನ ಗೋಪುರ ಕಟ್ಟಿದ್ರೆ ನಿಮ್ಮ ಪ್ರೇಮ ಗಟ್ಟಿಯಾಗಿರತ್ತೆ. ಕೋಟೆನಾಡು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ರಾಮದರ್ಗದ ಹೊಸಗುಡ್ಡದಲ್ಲಿ ಪಾಳೆಗಾರರ ಅರಸ ಮಾರಪ್ಪನಾಯಕನ ಕಾಲದಲ್ಲಿ ಶ್ರೀ ರಾಮಲಿಂಗೇಶ್ವರ ಸ್ವಾಮಿ ಎಂಬ ಅದ್ಬುತ ಗುಹಾಂತರ ದೇವಾಲಯ ನಿರ್ಮಾಣವಾಗಿತ್ತು.

ಆ ದೇವಾಲಯ ಅಂದಿನಿಂದ ಇಂದಿನವರೆಗೂ ಪ್ರೇಮ ಮಂದಿರವಾಗಿ ಪ್ರಸಿದ್ಧಿ ಪಡೆದಿದೆ. ಪ್ರೇಮಿಗಳ ದಿನದಂದು ರಾಜ್ಯದ ವಿವಿಧ ಭಾಗಗಳಿಂದ ಪ್ರೇಮಿಗಳ ದಂಡೇ ಇಲ್ಲಿಗೆ ಹರಿದು ಬರತ್ತೆ.

ಮೊದಲ ಬಾರಿಗೆ ಇಲ್ಲಿಗೆ ಬರುವ ಯುವ ಪ್ರೇಮಿಗಳು ಈ ದೇವರಿಗೆ ಭಕ್ತಿಯಿಂದ ಬೇಡಿಕೊಂಡು ಕಲ್ಲಿನ ಗೋಪುರ ಕಟ್ಟಿದರೆ ಸಾಕು ಅವರ ಇಷ್ಟಾರ್ಥ ನೆರವೇರುತ್ತದೆ. ಪ್ರೀತಿಯಲ್ಲಿ ಯಾವುದೇ ತೊಂದರೆ ಇಲ್ಲದೆ ಅದು ಶಾಶ್ವತವಾಗಿ ಉಳಿದುಕೊಳ್ಳುತ್ತದೆ ಅನ್ನೋದು ನಂಬಿಕೆ.
ಸಂಗ್ರಹ:flashnews

About admin

Check Also

ಯಡಿಯೂರಪ್ಪಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ..!

ಹೌದು ಇದೇನಪ್ಪ ಯಡಿಯೂರಪ್ಪಗೆ ಕುಮಾರಸ್ವಾಮಿ ಕುರ್ಚಿ ಬಿಟ್ಟುಕೊಟ್ಟಿದ್ದಾರೆ ಅಂದ್ರೆ ಎಲ್ಲರು ಶಾಕ್ ಆಗುವ ವಿಚಾರವೇ ಈ ಎಲ್ಲ ನಾಯಕರು ಚುನಾವಣೆ …

Leave a Reply

Your email address will not be published. Required fields are marked *