Breaking News
Home / ಇತ್ತೀಚಿನ ಸುದ್ದಿಗಳು / ಚುನಾವಣಾ ಅಭ್ಯರ್ಥಿಗಳಿಗೆ ಸುಪ್ರೀಂಕೋರ್ಟ್ ಬಿಗ್ ಶಾಕ್ , ಅಭ್ಯರ್ಥಿಗಳಿಗೆ ಶಾಕ್ ಜನಸಾಮಾನ್ಯರಿಗೆ ಫುಲ್ ಕುಶ್..!

ಚುನಾವಣಾ ಅಭ್ಯರ್ಥಿಗಳಿಗೆ ಸುಪ್ರೀಂಕೋರ್ಟ್ ಬಿಗ್ ಶಾಕ್ , ಅಭ್ಯರ್ಥಿಗಳಿಗೆ ಶಾಕ್ ಜನಸಾಮಾನ್ಯರಿಗೆ ಫುಲ್ ಕುಶ್..!

ಹೌದು ಇಂತಹ ಸುದ್ದಿಗಳು ಜನಸಾಮಾನ್ಯರಿಗೆ ಹೆಚ್ಚು ಖುಷಿ ನೀಡುತ್ತವೆ ಅಂತಹ ಸುದ್ದಿ ಏನಪ್ಪಾ ಅಂತೀರಾ ಇಲ್ಲಿದೆ ನೋಡಿ.

ಚುನಾವಣೆಗೆ ಸ್ಪರ್ಧಿಸುವ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ ಆದಾಯದ ಮೂಲವನ್ನು ಬಹಿರಂಗಪಡಿಸಬೇಕು. ಅಷ್ಟೇ ಅಲ್ಲದೇ ಅಭ್ಯರ್ಥಿಗಳ ಹೆಂಡತಿ ಹಾಗೂ ಮಕ್ಕಳ ಆದಾಯ ಮೂಲವನ್ನೂ ಬಹಿರಂಗಪಡಿಸುಬೇಕೆಂದು ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.

ನ್ಯಾ. ಜೆ ಚಲಮೇಶ್ವರ್ ನೇತೃತ್ವದ ಪೀಠ ಈ ಐತಿಹಾಸಿಕ ತೀರ್ಪು ನೀಡಿದ್ದು, ಅಭ್ಯರ್ಥಿಯು ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ತನ್ನ, ತನ್ನ ಹೆಂಡತಿಯ ಹಾಗೂ ಅವಲಂಬಿತರಾದ ಮಕ್ಕಳ ಆದಾಯ ಮೂಲವನ್ನ ಬಹಿರಂಗಪಡಿಸಬೇಕು ಎಂದಿದೆ.


ಅಭ್ಯರ್ಥಿಗಳ ಆದಾಯ ಮೂಲದ ಮಾಹಿತಿಗಾಗಿ ನಾಮಪತ್ರ ಅರ್ಜಿಯಲ್ಲಿ ಕಾಲಮ್ ಸೇರಿಸಬೇಕು ಎಂದು ಮನವಿ ಮಾಡಿ ಸರ್ಕಾರೇತರ ಸಂಸ್ಥೆ ಲೋಕ್ ಪ್ರಹಾರಿ ಅರ್ಜಿ ಸಲ್ಲಿಸಿತ್ತು. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ತನ್ನ ಹಾಗೂ ಹೆಂಡತಿ, ಮಕ್ಕಳ ಆಸ್ತಿಯನ್ನ ಬಹಿರಂಗಪಡಿಸಿರುತ್ತಾರೆ. ಆದ್ರೆ ಅವರು ಆದಾಯದ ಮೂಲವನ್ನ ಬಹಿರಂಗಪಡಿಸುತ್ತಿಲ್ಲ. ಆದಾಯ ಮೂಲ ಬಹಿರಂಗಪಡಿಸಿದ್ರೆ ಅದು ಕಾನೂನು ಬದ್ಧವಾದ ಗಳಿಕೆಯೂ ಇಲ್ಲವೋ ಎಂಬುದು ಜನರಿಗೆ ತಿಳಿಯುತ್ತದೆ ಎಂದು ಅರ್ಜಿದಾರರು ಹೇಳಿದ್ದರು.

About admin

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *