Breaking News
Home / ಆರೋಗ್ಯ / ಅಬ್ಬಾ ಈ ಕಲ್ಲಂಗಡಿ ಬೀಜದಲ್ಲೂ ಅಡಗಿದೆ ನಿಮ್ಮ ಆರೋಗ್ಯಕ್ಕೆ ಬೇಕಾಗಿರುವ ಹಲವು ಲಾಭಗಳು ಇಲ್ಲಿವೆ ನೋಡಿ..!

ಅಬ್ಬಾ ಈ ಕಲ್ಲಂಗಡಿ ಬೀಜದಲ್ಲೂ ಅಡಗಿದೆ ನಿಮ್ಮ ಆರೋಗ್ಯಕ್ಕೆ ಬೇಕಾಗಿರುವ ಹಲವು ಲಾಭಗಳು ಇಲ್ಲಿವೆ ನೋಡಿ..!

ಚಳಿಗಾಲ ಹೋಗಿ ಬೇಸಿಗೆ ಕಾಲ ಆರಂಭವಾಯಿತು. ಈ ಸುಡು ಬಿಸಿಲಿನಲ್ಲಿ ಕಲ್ಲಂಗಡಿ ಹಣ್ಣು ತಿನ್ನೋದು ಅಂದರೆ ಮನಕ್ಕೆ ದೇಹಕ್ಕೆ ಆನಂದ ನೀಡುತ್ತದೆ. ನಮಗೆ ಕಲ್ಲಂಗಡಿ ಹಣ್ಣು ತಿನ್ನದು ಮಾತ್ರ ಗೊತ್ತು ಅದರ ಜೊತೆಗೆ ಅದರಿಂದಾಗುವ ಲಾಭವು ಗೊತ್ತು ಆದ್ರೆ ಕಲ್ಲಂಗಡಿ ಹಣ್ಣಿನ ಬೀಜವೂ ಆರೋಗ್ಯಕಾರಿ ಹೇಗೆ ಗೊತ್ತಾ?

.
1.ಕಲ್ಲಂಗಡಿ ಹಣ್ಣಿನ ಬೀಜದಲ್ಲಿ ಅತ್ಯಧಿಕ ಪ್ರಮಾಣದ ಮೆಗ್ನಿಶಿಯಂ ಅಂಶ ಇದ್ದು, ಇದು ಹೃದಯ ಆರೋಗ್ಯಕ್ಕೆ ಸಹಕಾರಿಯಾಗಿದೆ.

2. ಕಲ್ಲಂಗಡಿ ಹಣ್ಣಿನ ಬೀಜ ತಿನ್ನುವುದರಿಂದ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

3. ದೇಹದಲ್ಲಿ ಉರಿಯೂತ ಅಥವಾ ಬಾವು ಕಾಣಿಸಿಕೊಂಡಲ್ಲಿ, ಅದಕ್ಕೆ ಕಲ್ಲಂಗಡಿ ಬೀಜದ ಪುಡಿಯನ್ನು ಮುಕ್ಕಾಲು ಕಪ್‌ ಬಿಸಿನೀರಿಗೆ ಸೇರಿಸಿ ಮತ್ತು ಒಂದು ಚಮಚ ಜೇನುತುಪ್ಪದೊಂದಿಗೆ ಕುಡಿದರೆ, ಆಗ ಊತ ಮತ್ತು ಬಾವು ಕಡಿಮೆಯಾಗುತ್ತದೆ.

3. ಕಲ್ಲಂಗಡಿ ಹಣ್ಣಿನ ಬೀಜದಲ್ಲಿರೋ ಆ್ಯಂಟಿ ಆ್ಯಕ್ಸಿಡೆಂಟ್‌ಗಳು ದೇಹದ ವಿಷಕಾರಿ ಅಂಶಗಳನ್ನು ಹೊರ ಹಾಕಲು ಸಹಕರಿಸುವುದರ ಜೊತೆಗೆ ವೃದ್ಧಾಪ್ಯವನ್ನು ದೂರವಾಗಿಸುತ್ತದೆ.

4. ಕಲ್ಲಂಗಡಿ ಹಣ್ಣಿನ ಬೀಜದಿಂದ ಮಾಡಿದ ಎಣ್ಣೆಯಿಂದ ಮೊಡವೆಗಳನ್ನು ತೊಲಗಿಸಿ, ತ್ವಚೆಯ ಸೂಕ್ಷ್ಮ ರಂಧ್ರದಲ್ಲಿರುವ ಕೊಳೆ ಹಾಗೂ ಮೃತ ಜೀವಕೋಶಗಳನ್ನು ತೊಲಗಿಸುತ್ತದೆ.

5. ಕಲ್ಲಂಗಡಿ ಬೀಜದ ಎಣ್ಣೆಯಲ್ಲಿರುವ ಪ್ರೋಟೀನ್ ಹಾಗೂ ಅಮೈನೋ ಆಮ್ಲವು ಕೂದಲಿನ ಬುಡವನ್ನು ಸದೃಢಗೊಳಿಸುತ್ತವೆ.

6. ನಮಗೆ ಕಲ್ಲಂಗಡಿ ಹಣ್ಣನ್ನು ತಿನ್ನುವಾಗ ಬೀಜ ಸಿಗುವುದರಿಂದ ಮುಜುಗರ ಆಗುತ್ತದೆ, ಆದರೆ ಈ ಹಣ್ಣಿನಲ್ಲಿ ಮತ್ತು ಬೀಜದಲ್ಲಿ ವಿಟಮನ್ ಎ ಮತ್ತು ಸಿ ಪೊಟ್ಯಾಷಿಯಂ, ಮೆಗ್ನೇಷಿಯಂ, ಬಿ1, ಬಿ೬ ಮತ್ತು ರೋಗ ನಿರೋಧಕ ಶಕ್ತಿ ಇರುತ್ತದೆ.

7. ಕಲ್ಲಂಗಡಿ ಹಣ್ಣಿನ ಬೀಜವನ್ನು ಹುರಿದು ಪುಡಿ ಮಾಡಿ ತಲೆ ಕೂದಲಿಗೆ ಹಚ್ಚುವುದರಿಂದ ಕೂದಲಿನ ಕಾಂತಿಯತಿ ಹೆಚ್ಚುತ್ತದೆ.

About admin

Check Also

ಹುಳುಕಡ್ಡಿ ಸಮಸ್ಯೆಗೆ ನೇರಳೆಯಲ್ಲಿ ಅಡಗಿದೆ ಓಷಧಿ ಗುಣಗಳು..!

ನಮಗೆ ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು …

Leave a Reply

Your email address will not be published. Required fields are marked *