Breaking News
Home / ಇತ್ತೀಚಿನ ಸುದ್ದಿಗಳು / ಬಿಪಿಎಲ್ ಕಾರ್ಡ್ ಜೊತೆಗೆ ಎಪಿಲ್ ಕಾರ್ಡ್ ಹಾಗು ಪ್ರತಿಯೊಬ್ಬರಿಗೂ ಸಿಗಲಿರುವ ಈ ಹೊಸ ಯೋಜನೆ ಮಾರ್ಚ್ 2 ರಂದು ಚಾಲನೆ ನೀಡಲಿರುವ ಸಿಎಂ ಸಿದ್ದರಾಮಯ್ಯ..!

ಬಿಪಿಎಲ್ ಕಾರ್ಡ್ ಜೊತೆಗೆ ಎಪಿಲ್ ಕಾರ್ಡ್ ಹಾಗು ಪ್ರತಿಯೊಬ್ಬರಿಗೂ ಸಿಗಲಿರುವ ಈ ಹೊಸ ಯೋಜನೆ ಮಾರ್ಚ್ 2 ರಂದು ಚಾಲನೆ ನೀಡಲಿರುವ ಸಿಎಂ ಸಿದ್ದರಾಮಯ್ಯ..!

ಹೌದು ರಾಜ್ಯಸರಕಾರದಿಂದ ರಾಜ್ಯದ ಜನತೆಗೆ ಸರಣಿ ಭಾಗ್ಯಗಳ ಕೊಡುಗೆ ನೀಡಿರುವ ರಾಜ್ಯ ಸರ್ಕಾರ 1.43 ಕೋಟಿಗೂ ಅಧಿಕ ಕುಟುಂಬಗಳಿಗೆ ಉಚಿತ ಚಿಕಿತ್ಸೆ ದೊರಕಿಸಿಕೊಡುವ ಬಹು ನಿರೀಕ್ಷಿತ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ಅಣಿಯಾಗಿದೆ. ಕೇಂದ್ರ ಸರ್ಕಾರ ಬಜೆಟ್​ನಲ್ಲಿ ಘೋಷಣೆ ಮಾಡಿರುವ ಯೋಜನೆಗೂ ಮುನ್ನವೇ ರಾಜ್ಯದ ಆರೋಗ್ಯ ಯೋಜನೆ ಜಾರಿಗೆ ಬರುತ್ತಿರುವುದು ವಿಶೇಷ. ಸರ್ಕಾರದಲ್ಲಿ ಹಾಲಿ ಜಾರಿಯಲ್ಲಿರುವ ಎಲ್ಲ ಆರೋಗ್ಯ ವಿಮೆ ಯೋಜನೆಗಳನ್ನು ಒಂದೇ ಸೂರಿನಲ್ಲಿ ವಿಲೀನ ಮಾಡಿ ಜಾರಿಗೆ ತರುತ್ತಿರುವ ಈ ಯೋಜನೆಯ ಮೊದಲ ಹಂತದಲ್ಲಿ 10 ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯಲಿದೆ.

ಮಾರ್ಚ್ 2 ರಂದು ಸಿಎಂ ಸಿದ್ದರಾಮಯ್ಯ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಆರೋಗ್ಯ ಸೇವೆ ತುಟ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಕುಟುಂಬಗಳಿಗೆ ಆರೋಗ್ಯ ವಿಮೆ ನೀಡುವ ಯೋಜನೆ ಅಂತಿಮ ಹಂತ ತಲುಪಿದೆ. ರಾಜ್ಯದ 1.43 ಕೋಟಿಗೂ ಅಧಿಕ ಕುಟುಂಬಗಳನ್ನು ಈ ಯೋಜನೆಯೊಳಗೆ ಸೇರಿಸಲು ಸರ್ಕಾರ ಮುಂದಾಗಿದ್ದು, ಅಂಗನವಾಡಿ ಕಾರ್ಯಕರ್ತರು, ಆರ್ಥಿಕ ಹಿಂದುಳಿದ ವರ್ಗ, ಆದಿವಾಸಿ ಜನಾಂಗ, ಅನುದಾನಿತ ಶಾಲಾ ಶಿಕ್ಷಕರು, ಅಸಂಘಟಿತ ಕಾರ್ವಿುಕ ವರ್ಗ ಸೇರಿ ಸಾಮಾನ್ಯ ಜನರಿಗೆ ವಾರ್ಷಿಕವಾಗಿ 1.5 ಲಕ್ಷ ರೂ. ವರೆಗಿನ ಆರೋಗ್ಯ ಸೇವೆ ಉಚಿತವಾಗಿ ಸಿಗಲಿದೆ.

ರಾಜ್ಯ ಸರಕಾರವು ಯೋಜನೆ ಫಲಾನುಭವಿಗಳನ್ನು ಎರಡ ವರ್ಗದಲ್ಲಿ ಗುರುತಿಸಲಾಗಿದ್ದು, 2 ಹಂತಗಳಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ. ಮೊದಲ ಹಂತದಲ್ಲಿ ರಾಜ್ಯದ ಪ್ರಮುಖ 10 ಆಸ್ಪತ್ರೆಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಹಂತ ಹಂತವಾಗಿ ರಾಜ್ಯಾದ್ಯಂತ ವಿಸ್ತರಿಸಲು ಇಲಾಖೆ ನಿರ್ಧರಿಸಿದೆ.

ವರ್ಗ-೧

ಎಲ್ಲ ಬಿಪಿಎಲ್ ಕಾರ್ಡದಾರರು ಈ ವರ್ಗಕ್ಕೆ ಸೇರಲಿದ್ದು, ಕುಟುಂಬದ 5 ಮಂದಿಗೆ 1.5 ಲಕ್ಷ ರೂ. ವರೆಗೆ ಚಿಕಿತ್ಸೆ ಲಭಿಸುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ನೋಂದಣಿ ಮಾಡಿಕೊಂಡರೆ ಉಚಿತವಾಗಿ ಹೆಲ್ತ್ ಕಾರ್ಡ್ ಸಿಗಲಿದೆ. ಬಿಪಿಎಲ್ ಕಾರ್ಡದಾರರು ಇದಕ್ಕೆ ಯಾವುದೇ ರೀತಿಯ ಶುಲ್ಕ, ಪ್ರೀಮಿಯಂಗಳನ್ನು ಪಾವತಿಸಬೇಕಿಲ್ಲ. ಕಾರ್ಡ್​ನ್ನು ನವೀಕರಿಸುವುದು ಇತ್ಯಾದಿ ಪ್ರಕ್ರಿಯೆಗಳೂ ಇರುವುದಿಲ್ಲ. ಅಂದಾಜು 1.05 ಕೋಟಿ ಕುಟುಂಬಗಳು ಈ ವರ್ಗದಲ್ಲಿ ಬರುತ್ತವೆ.

ವರ್ಗ-2

ಎಪಿಎಲ್ ಕಾರ್ಡದಾರರು ಹಾಗೂ ಹೆಚ್ಚು ಆದಾಯ ಹೊಂದಿರುವವರಿಗಾಗಿರುವ ವರ್ಗ-2ರಲ್ಲೂ 1.5 ಲಕ್ಷ ರೂ.ವರೆಗೆ ಚಿಕಿತ್ಸಾ ವೆಚ್ಚದ ಮಿತಿ ಇರಲಿದ್ದು, ಗ್ರಾಮೀಣ ಭಾಗದಲ್ಲಿ ಕುಟುಂಬವು ವಾರ್ಷಿಕ 300 ರೂ. ಹಾಗೂ ನಗರ ಪ್ರದೇಶದಲ್ಲಿ ವಾರ್ಷಿಕ 700 ರೂ.ಗಳನ್ನು ಪಾವತಿಸಿದರೆ, ಹೆಲ್ತ್ ಕಾರ್ಡ್ ಸಿಗಲಿದೆ. ವರ್ಗ-2ರ ಫಲಾನುಭವಿಗಳಿಗೆ ಆನ್​ಲೈನ್​ನಲ್ಲಿ ಅರ್ಜಿ ತುಂಬುವ ವ್ಯವಸ್ಥೆ ಮಾಡಲಾಗಿದ್ದು, ಆಧಾರ್ ಸಂಖ್ಯೆಯನ್ನು ಜೋಡಿಸಬೇಕಾಗುತ್ತದೆ. ಅಂದಾಜು 30 ಲಕ್ಷ ಕುಟುಂಬ ವರ್ಗ-2ರಲ್ಲಿ ಯೋಜನೆ ಲಾಭ ಪಡೆದುಕೊಳ್ಳಲಿದೆ.

ಯಾವ ಯಾವ ರೋಗಿಗಳಿಗೂ ಲಭ್ಯ

ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಬಳಲುತ್ತಿರುವವರೂ ಯೋಜನೆಯ ಫಲಾನುಭವಿಗಳಾಗಬಹುದಾಗಿದೆ. ಸಕ್ಕರೆ ಕಾಯಿಲೆ, ಹೃದ್ರೋಗ ಇನ್ನಿತರ ಕಾಯಿಲೆಗೆ ಈಗಾಗಲೇ ತುತ್ತಾದವರಿಗೆ ಪ್ರತ್ಯೇಕ ಹಾಗೂ ವಿಭಿನ್ನ ಮಾದರಿಯ ಹೆಲ್ತ್ ಕಾರ್ಡ್ ಸಿಗಲಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಮೊದಲ ಹಂತ

* ಬೆಂಗಳೂರು ವೈದ್ಯಕೀಯ ಕಾಲೇಜು ಆಸ್ಪತ್ರೆ, ಮಲ್ಲೇಶ್ವರದ ಕೆ.ಸಿ. ಜನರಲ್, ಜಯದೇವ ಹೃದ್ರೋಗ ಸಂಸ್ಥೆ, ಹುಬ್ಬಳ್ಳಿಯ ಕಿಮ್್ಸ, ಬಳ್ಳಾರಿ ವಿಮ್್ಸ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ, ಮಂಡ್ಯದ ಮಿಮ್್ಸ, ಕಲಬುರಗಿಯ ಜಿಮ್್ಸ ವೈದ್ಯಕೀಯ ಸಂಸ್ಥೆ, ಕೋಲಾರದ ಎಸ್.ಎನ್.ಆರ್ ಆಸ್ಪತ್ರೆ, ಮಂಗಳೂರಿನ ವೆನ್​ಲಾಕ್ ಆಸ್ಪತ್ರೆಗಳು ಮೊದಲ ಹಂತದಲ್ಲಿ ಯೋಜನೆಗೊಳಪಡಲಿವೆ.

ಫೆ.28ಕ್ಕೆ ಸರ್ಕಾರ ಆರೋಗ್ಯ ಕರ್ನಾಟಕ ಯೋಜನೆ ಅಧಿಸೂಚನೆ ಹೊರಡಿಸಲಿದೆ. ಮಾ.2ಕ್ಕೆ ಯೋಜನೆ ಲೋಕಾರ್ಪಣೆಗೊಳಿಸಲು ತೀರ್ವನಿಸಲಾಗಿದೆ. ರಾಜ್ಯದ ಎಲ್ಲ ಜನರಿಗೆ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಅಜಯ್ ಸೇಠ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ತಿಳಿಸಿದ್ದಾರೆ.

ಹಳಬರಿಗೆ ಚಿಂತೆ ಬೇಡ

ಯಶಸ್ವಿನಿ ಇತ್ಯಾದಿ ಸರ್ಕಾರಿ ಆರೋಗ್ಯ ವಿಮೆ ಯೋಜನೆಗಳಲ್ಲಿ ಈಗಾಗಲೇ ಕಾರ್ಡ ಪಡೆದವರು ತರಾತುರಿಯಲ್ಲಿ ಹೊಸ ಯೋಜನೆಗೆ ನೋಂದಣಿ ಮಾಡಬೇಕಾಗಿಲ್ಲ. ಮೊದಲ ಹಂತದಲ್ಲಿ ಇಲಾಖೆ ಸೂಚಿಸಿದ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊಸ ಯೋಜನೆಗೆ ನೋಂದಣಿ ಮಾಡಿಕೊಂಡರಾಯಿತು. ಆರೋಗ್ಯ ಕರ್ನಾಟಕ ಯೋಜನೆ ಸಂಪೂರ್ಣ ಸಂಪೂರ್ಣ ಜಾರಿಯಾಗುವವರೆಗೆ ಹಳೆ ಯೋಜನೆಗಳೆಲ್ಲವೂ ಕಾರ್ಯನಿರ್ವಹಿಸಲಿವೆ. ಹಳೆಯ ಯೋಜನೆಯ ಮರುನೋಂದಣಿ ಸಂದರ್ಭದಲ್ಲಿ ಹೊಸ ಯೋಜನೆಗೆ ಸೇರ್ಪಡೆ ಆಗುತ್ತದೆ.

ಯಾವೆಲ್ಲ ಯೋಜನೆ ಸೇರ್ಪಡೆ

ಪ್ರಸ್ತುತ ಚಾಲ್ತಿಯಲ್ಲಿರುವ ವಾಜಪೇಯಿ ಆರೋಗ್ಯ ಶ್ರೀ, ಜ್ಯೋತಿ ಸಂಜೀವಿನಿ, ಯಶಸ್ವಿನಿ, ಮುಖ್ಯಮಂತ್ರಿ ಸಾಂತ್ವನ ಯೋಜನೆ, ಜನನಿ ಶಿಶು ಸುರಕ್ಷ ಕಾರ್ಯಕ್ರಮ, ರಾಜೀವ್ ಆರೋಗ್ಯ ಭಾಗ್ಯ, ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಗಳನ್ನು ಆರೋಗ್ಯ ಕರ್ನಾಟಕ ಯೋಜನೆಗೆ ಸೇರಿಸಲಾಗುತ್ತದೆ. ಹೊಸ ಯೋಜನೆಯೊಂದೇ ರಾಜ್ಯದಲ್ಲಿ ಜಾರಿಯಲ್ಲಿರಲಿದೆ. ಉಳಿದ ಯೋಜನೆಗಳಲ್ಲಿರುವ ಚಿಕಿತ್ಸೆಗಳನ್ನು ಹೊಸ ಯೋಜನೆಯಲ್ಲಿ ಸೇರಿಸಿಕೊಳ್ಳಲಾಗಿದೆ.

ಯಶಸ್ವಿನಿಗೂ ಈ ಯೋಜನೆಗೂ ಏನು ವ್ಯತ್ಯಾಸ?

ಯಶಸ್ವಿನಿಯಲ್ಲಿ ಒಟ್ಟು 823 ವೈದ್ಯಕೀಯ ಶಸ್ತ್ರಚಿಕಿತ್ಸೆಗಳನ್ನು ಸೇರಿಸಲಾಗಿದೆ. ಹೊಸ ಯೋಜನೆಯಲ್ಲಿ 1500ಕ್ಕೂ ಅಧಿಕ ಚಿಕಿತ್ಸೆಗಳಿರಲಿದೆ.


ಯಶಸ್ವಿನಿ ಯೋಜನೆಯ ಚಿಕಿತ್ಸೆಗಳನ್ನು ಕಡಿಮೆ ದರದಲ್ಲಿ ನೀಡಲಾಗುತ್ತದೆ. ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವ ಬಗ್ಗೆ ಪ್ರಸ್ತಾಪಿಸಲಾಗಿದೆ.
ಯಶಸ್ವಿನಿಯು ಕುಟುಂಬದ ಒಬ್ಬ ವ್ಯಕ್ತಿಗೆ ಮಾತ್ರ ಅನ್ವಯವಾಗುತ್ತದೆ. ಆ ಬಳಿಕ ಹೆಚ್ಚುವರಿ ಹಣ ಪಾವತಿಸಿ ಕುಟುಂಬ ಸದಸ್ಯರನ್ನು ಸೇರಿಸಿಕೊಳ್ಳಬಹುದು. ಆದರೆ ಆರೋಗ್ಯ ಕರ್ನಾಟಕದ ಒಂದು ಹೆಲ್ತ್​ಕಾರ್ಡ್​ನಲ್ಲಿ 5 ಮಂದಿಯ ಕುಟುಂಬ ಫಲಾನುಭವಿಯಾಗಲಿದೆ.

ಸಂಗ್ರಹ: ವಿಜಯವಾಣಿ

About admin

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *