Breaking News
Home / ಸುದ್ದಿ / ರಾಜ್ಯ / ಬೈಕ್ ಸವಾರರಿಗೆ ಬಿಗ್ ಶಾಕ್ ನೀಡಿದ ಸಾರಿಗೆ ಇಲಾಖೆ..!

ಬೈಕ್ ಸವಾರರಿಗೆ ಬಿಗ್ ಶಾಕ್ ನೀಡಿದ ಸಾರಿಗೆ ಇಲಾಖೆ..!

ಹೌದು, ದ್ವಿ ಚಕ್ರವಾಹನ ಸವಾರರೇ ಎಚ್ಚರ! ಇನ್ನು ಮುಂದೆ ನಗರ ಸಂಚಾರ ಪೊಲೀಸರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ತಪಾಸಣೆ ಮಾಡುವಾಗ ದೋಷಪೂರಿತ ಸೈಲೆನ್ಸರ್ ಅಳವಡಿಸಿ ಕೊಂಡಿರುವುದು ಕಂಡು ಬಂದಲ್ಲಿ ದಂಡದ ಜತೆಗೆ ದ್ವಿ ಚಕ್ರವಾಹನದ ನೋಂದಣಿ ಪತ್ರವನ್ನು (ಆರ್‌ಸಿ) ಅಮಾನತು ಮಾಡಲಿದ್ದಾರೆ.

ದೋಷಪೂರಿತ ಸೈಲೆನ್ಸರ್ ಅಳವಡಿಕೆಯಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಇನ್ನು ಮುಂದೆ ಅಂತಹ ದ್ವಿಚಕ್ರ ವಾಹನಗಳ ಆರ್.ಸಿ.ಯನ್ನು ಅಮಾನತುಗೊಳಿಸಲು ನಿರ್ಧರಿಸಲಾಗಿದೆ. ಈಗಾಗಲೇ ಬೆಂಗಳೂರು ನಗರದಲ್ಲಿ ಪ್ರತಿ ಬುಧವಾರ ಸಾರಿಗೆ ಇಲಾಖೆ ವಿಶೇಷ ತಂಡಗಳು ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡು ದಂಡ ವಿಧಿಸುತ್ತಿದ್ದಾರೆ ಇದೀಗ ದಂಡದ ಜತೆಗೆ ದ್ವಿಚಕ್ರ ವಾಹನದ ನೋಂದಣಿ ಪತ್ರ ಅಮಾನತುಗೊಳಿಸುವುದಾಗಿ ಸಾರಿಗೆ ಇಲಾಖೆ ಆಯುಕ್ತ ಬಿ.ದಯಾನಂದ ರವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬೈಕ್ಗೆಗಳಿಗೆ ದೋಷಪೂರಿತ ಸೈಲೆನ್ಸರ್ ಅಳವಡಿಸುವುದು ತಪ್ಪು. ಅದೇ ರೀತಿ ಗ್ಯಾರೇಜ್‌ಗಳಲ್ಲಿ ಸೈಲೆನ್ಸರ್‌ಗಳನ್ನು ಮಾರ್ಪಾಡು ಮಾಡುವುದೂ ಅಷ್ಟೇ ತಪ್ಪು. ಹಾಗಾಗಿ ಇಂತಹ ಕೆಲಸದಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಆದ್ದರಿಂದ ಇನ್ನು ಮುಂದೆ ನಿಮ್ಮ ವಾಹನದ ಸೈಲೆನ್ಸರ್ ಸರಿಯ್ಗಿದೆಯೇ ಅಥವಾ ದೋಷಪೂರಿತವಾಗಿದೆಯೇ ಎಂದು ಖಚಿತಪಡಿಸಿಕೊಂಡು ವಾಹನ ಚಲಾಯಿಸಿ ದಂಡ ಮತ್ತು ಶಿಕ್ಷೆಯಿಂದ ದೊರವಿರಿ.

About admin

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *