Breaking News
Home / ಆರೋಗ್ಯ / ಅಬ್ಬಾ ಜೇನು ತುಪ್ಪದಿಂದ ಇಷ್ಟೆಲ್ಲ ಲಾಭಗಳಿವೆಯಾ..!

ಅಬ್ಬಾ ಜೇನು ತುಪ್ಪದಿಂದ ಇಷ್ಟೆಲ್ಲ ಲಾಭಗಳಿವೆಯಾ..!

ಹೌದು ಜೇನು ತುಪ್ಪದಲ್ಲಿ ಹಲವಾರು ವಿಶೇಷ ಗುಣಗಳಿವೆ, ನಮಗೆ ತಿಳಿದಿರುವಂತೆ ಜೇನು ಸವಿಯಲು ಮಾತ್ರ ಗೊತ್ತು ಆದರೆ ಅದರಿಂದ ನಮ್ಮ ದೇಹಕ್ಕೆ ಹಲವಾರು ಲಾಭಗಳಿವೆ ಅವುಗಳ ಬಗ್ಗೆ ತಿಳಿದರೆ ನೀವು ಕಂಡಿತ ತಪ್ಪದೆ ಉಪಯೋಗಿಸುತ್ತೀರಾ.

ಜೇನುತುಪ್ಪವು ಹೂವುಗಳಿಂದ ಕೀಟಗಳು ಸಂಗ್ರಹಿಸಿ ದೊರೆಯುವಂತಹ ವಿಶೇಷವಾದ ಔಷಧಿಯ ಗುಣವನ್ನು ಹೊಂದಿರುವ ದ್ರವ್ಯವಾಗಿದೆ. ಇದರ ಔಷಧೀಯ ಗುಣಗಳ ಬಗ್ಗೆ ಹೆಚ್ಚಾಗಿ ಜನರಿಗೆ ತಿಳಿದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಇದರ ಮೇಲೆ ಜನರ ಒಲವು ಹೆಚ್ಚಾಗುತ್ತಿದ್ದು ಮತ್ತು ಇದರ ಆರೋಗ್ಯಕಾರಿ ಗುಣಗಳ ಬಗ್ಗೆಯೂ ಸಹ ಅರಿವು ಮೂಡುತ್ತಿದೆ.

ಜೇನುತುಪ್ಪದ ಬಳಕೆಯ ಲಾಭಗಳೆಂದರೆ:-

೧. 20 ಮಿಲಿ ಜೇನುತುಪ್ಪವನ್ನು 2 ಲೀಟರ್ ನೀರಿಗೆ ಬೆರೆಸಿ ಆ ನೀರನ್ನು ದಿನನಿತ್ಯ ಸೇವಿಸಿದರೆ ಬೊಜ್ಜು ಕರಗಿ ನೀಳಕಾಯ ನಿಮ್ಮದಾಗುತ್ತದೆ.

೨. ಜೇನುತುಪ್ಪವನ್ನು ತುಳಸಿ ರಸದೊಂದಿಗೆ ಸೇವಿಸಿದರೆ ಕೆಮ್ಮು, ನೆಗಡಿ ಶಮನವಾಗುತ್ತದೆ.

೩. ಜೇನನ್ನು ಬಾಳೆಹಣ್ಣಿನೊಂದಿಗೆ ಸೇವಿಸಿದರೆ ಅದು ಬಲವನ್ನು ವೃದ್ಧಿಸುತ್ತದೆ

೪. ರಾತ್ರಿ ಮಲಗುವಾಗ ಮೊಡವೆಗಳಿಗೆ ಜೇನು ತುಪ್ಪವನ್ನು ಲೇಪಿಸಿ ಬೆಳಗ್ಗೆ ತೊಳೆದರೆ ಮೊಡವೆ ನಿವಾರಣೆಯಾಗುತ್ತದೆ.

೫. ಒಂದು ಚಮಚ ಜೇನುತುಪ್ಪವನ್ನು ಅರ್ಧ ಚಮಚ ಬೆಟ್ಟದ ನೆಲ್ಲಿಕಾಯಿಯ ಪುಡಿಯೊಂದಿಗೆ ರಾತ್ರಿ ಹೊತ್ತು ಸೇವಿಸಿದರೆ ಕಣ್ಣಿನ ದೃಷ್ಟಿ ವೃದ್ಧಿಸುತ್ತದೆ.

೬. ಜೇನುತುಪ್ಪವನ್ನು ಗಾಯಗಳಿಗೂ ಲೇಪಿಸುವುದರಿಂದ ಗಾಯಗಳ ನಿವಾರಣೆಗೂ ಸಹಕಾರಿಯಾಗಿದೆ.

ಇದಲ್ಲದೆ ಇನ್ನು ಹಲವು ಔಷಧಗಳೊಂದಿಗೆ ಇದನ್ನು ಅನುಪಾತವಾಗಿ ಉಪಯೋಗಿಸಲಾಗುತ್ತದೆ. ಆದರೆ ಇದನ್ನು ಬಿಸಿ ಪದಾರ್ಥಗಳೊಂದಿಗೆ ಉಪಯೋಗಿಸಬಾರದು. ಅಲ್ಲದೇ ಬಿಸಿ ಮಾಡಿಯೂ ಕೂಡ ಇದನ್ನು ಉಪಯೋಗಿಸುವುದರಿಂದ ಯಾವುದೇ ರೀತಿಯಾದ ಪ್ರಯೋಜನವಾಗುವುದಿಲ್ಲ.

About admin

Check Also

ಹುಳುಕಡ್ಡಿ ಸಮಸ್ಯೆಗೆ ನೇರಳೆಯಲ್ಲಿ ಅಡಗಿದೆ ಓಷಧಿ ಗುಣಗಳು..!

ನಮಗೆ ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು …

Leave a Reply

Your email address will not be published. Required fields are marked *