Breaking News
Home / ಇತ್ತೀಚಿನ ಸುದ್ದಿಗಳು / ಕೇಂದ್ರದಿಂದ ಕರ್ನಾಟಕ ರೈತರಿಗೆ ಗುಡ್ ನ್ಯೂಸ್ ನೀಡಿದ ಮೋದಿ ಸರ್ಕಾರ..!

ಕೇಂದ್ರದಿಂದ ಕರ್ನಾಟಕ ರೈತರಿಗೆ ಗುಡ್ ನ್ಯೂಸ್ ನೀಡಿದ ಮೋದಿ ಸರ್ಕಾರ..!

ಕರ್ನಾಟಕ ರೈತರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ ನೀಡಿದೆ ಏನು ಅನ್ನೋದು ಇಲ್ಲಿದೆ ನೋಡಿ.
ನಮ್ಮ ರಾಜ್ಯದಲ್ಲಿ ತೊಗರಿ ಬೇಳೆಯ ವಿಚಾರವಾಗಿ ರೈತರು ಸಾಕಷ್ಟು ಕಷ್ಟ ಅನುಭವಿಸಿದ್ದರು ಈ ತೊಗರಿ ಬೇಳೆಯ ವಿಚಾರವಾಗಿ ಮೋದಿ ಸರ್ಕಾರ ಕರ್ನಾಟಕದ ರೈತರಿಗೆ ಖುಷಿ ವಿಚಾರವನ್ನು ನೀಡಿದೆ.

ಬೆಂಬಲ ಬೆಲೆ ನೀಡಿ ತೊಗರಿ ಬೇಳೆಯ ಖರೀದಿಗೆ ಹಾಕಲಾಗಿದ್ದ ಮಿತಿಯನ್ನು ಕೇಂದ್ರಸರ್ಕಾರ ವಿಸ್ತರಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಕೃಷಿ ಭವನದಲ್ಲಿ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಅವರು ಕೂಡ ಮನವಿ ಮಾಡಿಕೊಂಡಿದ್ದರು.

ಡಿ.12ರಂದು 90 ದಿನಗಳ ಕಾಲ 1,65,000 ಮೆಟ್ರಿಕ್ ಟನ್ ತೊಗರಿ ಖರೀದಿಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಬಳಿಕ ರಾಜ್ಯದ ಮನವಿಯ ಮೇರೆಗೆ ಮತ್ತೆ 2,65,200 ಮೆಟ್ರಿಕ್ ಟನ್ ತೊಗರಿ ಖರೀದಿಸಲು ಒಪ್ಪಿಗೆ ನೀಡಿತ್ತು. ಇದೀಗ ಮತ್ತೇ ಹೆಚ್ಚುವರಿಯಾಗಿ ಬೆಂಬಲ ಬೆಲೆ ನೀಡಿ ತೊಗರಿ ಖರೀದಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.

3,64,600ಮೆಟ್ರಿಕ್ ಟನ್ ತೊಗರಿ ಖರೀದಿಗೆ ಇದೀಗ ಕೇಂದ್ರ ಒಪ್ಪಿಕೊಂಡಂತಾಗಿದೆ. ರಾಜ್ಯದಲ್ಲಿ ವಿರಳಾತಿವಿರಳ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳುತ್ತಿ ದ್ದೇವೆ ಎಂದು ಸಚಿವ ರಾಧಾ ಮೋಹನ್ ಹೇಳಿದ್ದಾರೆ.

About admin

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *