Breaking News
Home / ಆರೋಗ್ಯ / ಕೊತ್ತಂಬರಿ ಸೊಪ್ಪು ಕೇವಲ ಅಡುಗೆಗೆ ಮಾತ್ರ ಅಲ್ಲ ಇದು ಹಲವು ರೋಗಗಳಿಗೆ ರಾಮಬಾಣ..!

ಕೊತ್ತಂಬರಿ ಸೊಪ್ಪು ಕೇವಲ ಅಡುಗೆಗೆ ಮಾತ್ರ ಅಲ್ಲ ಇದು ಹಲವು ರೋಗಗಳಿಗೆ ರಾಮಬಾಣ..!

ಹೌದು ನಾವು ದಿನನಿತ್ಯ ಅಡುಗೆಯಲ್ಲಿ ಬಳಸುವ ಕೊತ್ತಂಬರಿ ಸೊಪ್ಪು ಕೇವಲ ಅಡುಗೆಗೆ ಮಾತ್ರವಲ್ಲ ಅದು ಹಲವು ರೋಗಗಳನ್ನು ಹೋಗಲಾಡಿಸುವ ಶಕ್ತಿ ಹೊಂದಿದೆ.

ಔಷಧೀಯ ಗುಣಗಳು :
ಕೊತ್ತಂಬರಿ ಸೊಪ್ಪಿನ ರಸದಿಂದ ಬಾಯಿ ಮುಕ್ಕಳಿಸಿದರೆ ಬಾಯಿಹುಣ್ಣು ಕಡಿಮೆಯಾಗುತ್ತದೆ ಹಾಗು ಊಟದ ನಂತರ ಕೊತ್ತಂಬರಿ ಎಲೆಗಳನ್ನೂ ಅಗಿದು ತಿಂದರೆ ಒಳ್ಳೆಯದು.


ಕೊತ್ತಂಬರಿ ಸೊಪ್ಪಿನಲ್ಲಿ ಕಬ್ಬಿಣಾಂಶದ ಸಾರ ಹೇರಳವಾಗಿದ್ದು ರಕ್ತಹೀನತೆಯಿಂದ (ಎನಿಮಿಕ್) ಬಳಲುವವರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೂರು ಚಮಚೆ ಕೊತ್ತಂಬರಿ ಸೊಪ್ಪಿನ ರಸವನ್ನು ಜೇನಿನೊಂದಿಗೆ ಬೆರೆಸಿ ಸೇವಿಸಬೇಕು. ಇದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುವುದು.

ಕೊತ್ತಂಬರಿ ಸೊಪ್ಪಿನ ರಸವನ್ನು ಮೂಗಿನಲ್ಲಿ ಹಿಂಡಿದರೆ ಉಷ್ಣದಿಂದ ಮೂಗಿನಿಂದ ರಕ್ತಸ್ರಾವವಾಗುವುದು ನಿಲ್ಲುತ್ತದೆ.

ಕೊತ್ತಂಬರಿ ಸೊಪ್ಪಿನ ರಸದೊಂದಿಗೆ ಕಲ್ಲುಸಕ್ಕರೆ ಬೆರೆಸಿ ಸೇವಿಸಿದರೆ ತಲೆಸುತ್ತಿಗೆ ಮುಕ್ತಿ ಹಾಕಿದಂತೆ.

ಹೊಟ್ಟೆಯುಬ್ಬರ ಹಾಗು ಜೀರ್ಣಕ್ರಿಯೆ ಸಮಸ್ಯೆಗೆ ಒಂದು ಲೋಟ ಮಜ್ಜಿಗೆಯನ್ನು ಕೊತ್ತಂಬರಿ ಸೊಪ್ಪಿನೊಂದಿಗೆ ಅಥವಾ ರಸದೊಂದಿಗೆ ಪ್ರತಿದಿನ ಊಟದ ನಂತರ ಕುಡಿಯುವದನ್ನು ರೂಢಿಸಿಕೊಳ್ಳಬೇಕು.

ಹಲ್ಲು ಹುಳುಕಾಗುದನ್ನು ತಡೆಯಲು, ಒಸಡು ಗಟ್ಟಿಗೊಳಿಸಲು ಪ್ರತಿದಿನ ಊಟದ ನಂತರ ಕೊತ್ತಂಬರಿ ಸೊಪ್ಪನ್ನು ತಿನ್ನಬೇಕು.

ಅಡುಗೆಯಲ್ಲಿ ಹಲವಾರು ವಿಧಗಳಿಂದ ಕೊತ್ತಂಬರಿ ಸೊಪ್ಪನ್ನು ಬಳಸಬಹುದು. ಕೊತ್ತಂಬರಿಯಲ್ಲಿಯ ತೈಲಾಂಶ ಪಿತ್ತನಾಶಕವೂ ಆಗಿದೆ.

About admin

Check Also

ಹುಳುಕಡ್ಡಿ ಸಮಸ್ಯೆಗೆ ನೇರಳೆಯಲ್ಲಿ ಅಡಗಿದೆ ಓಷಧಿ ಗುಣಗಳು..!

ನಮಗೆ ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು …

Leave a Reply

Your email address will not be published. Required fields are marked *