Breaking News
Home / ಆರೋಗ್ಯ / ಹೃದಯದ ರಕ್ತ ಸಂಚಲನ ,ಮೂತ್ರ ವಿಸರ್ಜನೆ, ಕೂದಲು ಉದರುವಿಕೆ ಹೀಗೆ ಹಲವು ರೋಗಗಳಿಗೆ ರಾಮಬಾಣ ಈ ಸೀತಾಫಲ..!

ಹೃದಯದ ರಕ್ತ ಸಂಚಲನ ,ಮೂತ್ರ ವಿಸರ್ಜನೆ, ಕೂದಲು ಉದರುವಿಕೆ ಹೀಗೆ ಹಲವು ರೋಗಗಳಿಗೆ ರಾಮಬಾಣ ಈ ಸೀತಾಫಲ..!

ಹೌದು ಸೀತಾಫಲ ಹಣ್ಣು ತಿನ್ನಲು ಬಹಳ ರುಚಿಯಾಗಿದೆ, ಅಷ್ಟೇ ಅಲ್ಲದೆ ಹಲವಾರು ಆರೋಗ್ಯಕಾರಿ ಗುಣಗಳು ಈ ಹಣ್ಣಿನಲ್ಲಿ ಅಡಗಿವೆ.


ಸೀತಾಫಲದ ಹಣ್ಣಿನಲ್ಲಿರುವ ಆರೋಗ್ಯಕಾರಿ ಅಂಶಗಳಂದರೆ:-

೧. ಸೀತಾಫಲದ ಎಲೆ ಮತ್ತು ಬೀಜಗಳನ್ನು ಔಷಧಿಯಾಗಿಯೂ ಸಹ ಬಳಸಲಾಗುತ್ತದೆ.

೨. ಬಾಯಾರಿಕೆ ಹೆಚ್ಚಾದಾಗ ಸೀತಾಫಲದ ಹಣ್ಣಿನ ರಸಕ್ಕೆ ಸಕ್ಕರೆ ಸೇರಿಸಿ ಕುಡಿದರೆ ದಾಹ ನಿವಾರಣೆಯಾಗುತ್ತದೆ.

೩. ದೇಹದಲ್ಲಿ ಗಾಯಗಳಾಗಿದ್ದರೆ ಸೀತಾಫಲದ ಬೀಜವನ್ನು ತಣ್ಣೀರಿನಲ್ಲಿ ಅರೆದು ಬಟ್ಟೆಯಲ್ಲಿ ಹಾಕಿ ಕಟ್ಟಿದರೆ ಗಾಯ ಮಾಯುತ್ತದೆ.

೪. ನಿಯಮಿತವಾಗಿ ಸೀತಾಫಲ ಸೇವಿಸುತ್ತಿದ್ದರೆ ಹೃದಯದ ರಕ್ತ ಸಂಚಲನ ಚೆನ್ನಾಗಿ ಆಗಿ, ಹೃದಯದ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.

೫. ಸೀತಾಫಲ ಹಣ್ಣಿನ ಸೇವನೆಯಿಂದ ಪಿತ್ತ ಮತ್ತು ವಾಂತಿ ಕಡಿಮೆಯಾಗುತ್ತದೆ .

೬. ಸೀತಾಫಲದ ಸಿಪ್ಪೆಯನ್ನು ಅಕ್ಕಿತೊಳೆದ ನೀರಲ್ಲಿ ತೇದು ಸೇವಿಸಿದರೆ ಮೂತ್ರ ವಿಸರ್ಜನೆ ಸಮಸ್ಯೆ ಇದ್ದರೆ ಸಲೀಸಾಗಿ ಹೋಗುತ್ತದೆ.

೭. ಸೀತಾಫಲದ ಬೀಜದ ಪುಡಿಯನ್ನು ಮೇಕೆ ಹಾಲಲ್ಲಿ ಕಲಸಿ ತಲೆಗೆ ಹಚ್ಚುವುದರಿಂದ ಕೂದಲು ಉದರುವಿಕೆ ಕಡಿಮೆಯಾಗುತ್ತದೆ.

೮. ಸೀತಾಫಲದ ಹಣ್ಣನ್ನು ತಿನ್ನುವುದರಿಂದ ದೇಹದ ತೂಕವನ್ನು ಹೆಚ್ಚಿಸಬಹುದಾಗಿದೆ.

ಹೀಗೆ ಈ ಸೀತಾಫಲದ ಹಣ್ಣನ್ನು ತಿನ್ನುವುದರಿಂದ ಹಲವಾರು ಆರೋಗ್ಯಕಾರಿ ಲಾಭವನ್ನು ಪಡೆಯಬಹುದಾಗಿದೆ.

About Karnataka Express

Check Also

ಹುಳುಕಡ್ಡಿ ಸಮಸ್ಯೆಗೆ ನೇರಳೆಯಲ್ಲಿ ಅಡಗಿದೆ ಓಷಧಿ ಗುಣಗಳು..!

ನಮಗೆ ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು …

Leave a Reply

Your email address will not be published. Required fields are marked *