Breaking News
Home / ಇತ್ತೀಚಿನ ಸುದ್ದಿಗಳು / ತಲೆ ಕೂದಲು ಉದರುವ ಸಮಸ್ಯೆ ಇದ್ದರೆ ಹಾಗಾದರೆ ಈ ರೀತಿಯಾಗಿ ಮಾಡಿನೋಡಿ..!

ತಲೆ ಕೂದಲು ಉದರುವ ಸಮಸ್ಯೆ ಇದ್ದರೆ ಹಾಗಾದರೆ ಈ ರೀತಿಯಾಗಿ ಮಾಡಿನೋಡಿ..!

ಹಿಂದಿನ ದಿನಗಳಲ್ಲಿ ವಯಸ್ಸಾಗುತ್ತಿದ್ದಂತೆ ಕೂದಲು ಉದುರುತ್ತಿತ್ತು. ಆದರೆ ಇಂದು ಹಾಗಲ್ಲ, ಹದಿಹರೆಯದವರ ಕೂದಲು ಉದುರುವ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆ.

ರಾಸಾಯನಿಕ ವಸ್ತುಗಳ ಬಳಕೆ, ಒತ್ತಡ ಮತ್ತು ಮಾಲಿನ್ಯವನ್ನು ಇದಕ್ಕೆ ಕಾರಣ. ಜೊತೆಗೆ ಆಹಾರ ಕ್ರಮ, ಕಲವು ಔಷಧಿಗಳ ಅಡ್ಡ ಪರಿಣಾಮ ಕೂಡ ಕೂದಲು ಉದುರಲು ಕಾರಣವಾಗಿವೆ. ಈ ಕೂದಲು ಉದುರುವ ಸಮಸ್ಯೆಗೆ ಮನೆಯಲ್ಲಿಯೇ ಸಿಗುವ ಕೆಲವು ವಸ್ತುಗಳನ್ನು ಬಳಸಿಕೊಂಡು ಪರಿಹಾರ ಕಂಡುಕೊಳ್ಳಬಹುದಾಗಿದೆ.

ಆಹಾರದಲ್ಲಿ ಮೀನು ಸೇವನೆ :
ನೀವು ಮಾಂಸಹಾರಿಗಳಾಗಿದ್ದಲ್ಲಿ ಸಾಲ್ಮನ್ ಅಥವಾ ಟೂನಾ ಮೀನಿನ ಖಾದ್ಯ ಸೇವಿಸಿದರೆ ಕೂದಲುದುರುವ ಸಮಸ್ಯೆಗೆ ಕೊಂಚ ಮಟ್ಟಿಗೆ ಪರಿಹಾರ ದೊರೆಯುತ್ತದೆ. ಈ ಮೀನಿನಲ್ಲಿ ಒಮೇಗಾ 3 ಫ್ಯಾಟಿ ಆಸಿಡ್ಸ್ ಯಥೇಚ್ಚವಾಗಿ ಇರುವ ಕಾರಣ ಕೂದಲಿನ ಬುಡವನ್ನು ಬಲಿಷ್ಟಗೊಳಿಸುತ್ತದೆ.

ನಿಂಬೆ ರಸ ಮತ್ತು ತೆಂಗಿನ ಎಣ್ಣೆ :
ಪ್ರತಿದಿನ ರಾತ್ರಿ ಮಲಗುವ ಮುನ್ನ ನಿಂಬೆ ರಸ ಮತ್ತು ತೆಂಗಿನ ಎಣ್ಣೆಯನ್ನು ತಲೆ ಹಚ್ಚಿ ಮಸಾಜ್‌ ಮಾಡಿ ಮಲಗುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.

ಈರುಳ್ಳಿ ರಸ :
ವಾರಕ್ಕೆ ಎರಡು ಬಾರಿ ಈರುಳ್ಳಿ ರಸವನ್ನು ತೆಗೆದು ತಲೆಗೆ ಹಚ್ಚುವುದರಿಂದಲೂ ಕೂದಲು ಉದುರುವುದು ಕಡಿಮೆಯಾಗುತ್ತದೆ.

ಸೊಪ್ಪು ತರಕಾರಿ ಸೇವನೆ :
ಇನ್ನು ದಿನನಿತ್ಯದ ಆಹಾರದಲ್ಲಿ ಸೊಪ್ಪು, ತರಕಾರಿಗಳನ್ನು ಸೇವಿಸುವುದು ಅತ್ಯವಶ್ಯಕ. ಇದು ಆರೋಗ್ಯ ಕಾಪಾಡಿಕೊಳ್ಳಲೂ ಸಹಕಾರಿಯಾಗುವುದಲ್ಲದೇ ವಿಟಮಿನ್ಸ್, ಮಿನರಲ್ಸ್ ಹಾಗೂ ಅಂಟಿ ಅಕ್ಸಿಡೆಂಟ್ ಹೇರಳವಾಗಿರುವ ಕಾರಣ ಕೂದಲು ಉದುರುವುದು ಕಡಿಮೆಯಾಗುತ್ತದೆ.

ಕ್ಯಾರೆಟ್‌ ಸೇವನೆ :
ಬೀಟಾ ಕೆರೋಟಿನ್ ಹಾಗೂ ವಿಟಮಿನ್ ಎ ಸಮೃದ್ದವಾಗಿರುವ ಕ್ಯಾರೆಟ್ ತಿನ್ನುವುದರಿಂದಲೂ ಕೂದಲು ಬೆಳೆಯಲು ಸಹಕಾರಿಯಾಗುತ್ತದೆ.

ಅಲೋವೆರಾ ಜೆಲ್‌ :
ತಲೆಗೆ ಸ್ನಾನ ಮಾಡುವ ಮುನ್ನ ಅಲೋವೆರಾ ಜೆಲ್‌ ತೆಗೆದು ಅದನ್ನು ತಲೆಗೆ ಹಚ್ಚುತ್ತಿದ್ದರೆ, ಕೂದರು ನಯವಾಗಿ ಬೆಳೆಯುತ್ತದೆ ಜೊತೆ ಜೊತೆಗೆ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.

ಮೆಂತ್ಯಕಾಳುಗಳನ್ನ ರಾತ್ರಿ ನೀರಿನಲ್ಲಿ ನೆನೆಸಿ, ಬೆಳಗ್ಗೆ ಅದನ್ನು ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ, ಅದಕ್ಕೆ ಸ್ವಲ್ಪ ಮೊಸರು ಸೇರಿಸಿ ಮಿಕ್ಸಿ ಮಾಡಿ ತಲೆಗೆ ಹಚ್ಚಿಕೊಳ್ಳಿ. ಸುಮಾರು 30 ನಿಮಿಷಗಳ ನಂತರ ಬಿಸಿನೀರಿನಲ್ಲಿ ತೊಳೆಯಿರಿ, ಸತತ ಒಂದು ವಾರದ ಕಾಲ ಹೀಗೆ ಮಾಡಿದರೇ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ.

About admin

Check Also

ನಿಮಗೆ ಕಾಲಿನ ಹಿಮ್ಮಡಿ ಬಿರುಕು ಸಮಸ್ಯೆಯೇ ಹಾಗಾದರೆ ಹೀಗೆ ಮಾಡಿ..!

ಹೌದು ಕೆಲವರಿಗೆ ಚಳಿಗಾಲ ಅಥವಾ ಹೆಚ್ಚು ಉಷ್ಣ ಆದರೆ ಕಾಲಿನ ಹಿಮ್ಮಡಿ ಹೊಡೆಯುವ ಸಮಸ್ಯೆ ಇರುತ್ತದೆ ಅದರಿಂದ ನೆಡೆದಾಡಲು ತುಂಬಾ …

Leave a Reply

Your email address will not be published. Required fields are marked *