Breaking News
Home / ಇತ್ತೀಚಿನ ಸುದ್ದಿಗಳು / ಕಟಕ ರಾಶಿಯ ವರ್ಷ ಭವಿಷ್ಯ ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ ಶುಭನಾ ಅಶುಭನಾ..!

ಕಟಕ ರಾಶಿಯ ವರ್ಷ ಭವಿಷ್ಯ ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ ಶುಭನಾ ಅಶುಭನಾ..!

ಪುನರ್ವಸು4, ಪುಷ್ಯ, ಆಶ್ಲೇಷ
[ಹಿ,ಹು,ಹೆ,ಹೊ,ಹ,ಡಿ,ಡು,ಡೆ,ಡೊ]

ಕಟಕರಾಶಿಯವರಿಗೆ ಗುರುಗ್ರಹವು 4ನೇ ಮನೆಯಲ್ಲಿ 12.10.2018ರವರೆಗೆ ಇರುವುದರಿಂದ ಚಿಂತೆಯು ಬುದ್ದಿ ಚಂಚಲತೆಯು ತೇಜೋಹಾನಿಯೂ ಸೌಖ್ಯ ಹಾನಿಯು ಗೌಪ್ಯ ವ್ಯವಹಾರಗಳು ಬಹಿರಂಗವಾಗಬಹುದು ದೇಶ ಬಿಟ್ಟು ಹೋಗುವಿಕೆಯು ಕಲಹವು ಉಂಟಾಗುತ್ತದೆ ಮನೆಯ ಪರಿಸರವು ತೃಪ್ತಿಕರವಾಗಿರುವುದಿಲ್ಲ ಕೃಷಿಕರಿಗೆ ಆರ್ಥಿಕ ತೊಂದರೆಗಳು ಕಾಣಬಹುದು ನೈಸರ್ಗಿಕ ಕಾರಣದಿಂದ ಬೆಳೆ ನಷ್ಟ ಉಂಟಾಗುತ್ತದೆ ಅಧ್ಯಯನ ಮಾಡುವ ಮಕ್ಕಳು ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ ಚಿನ್ನರತ್ನಗಳಿಂದ ನಷ್ಟವಾಗುತ್ತದೆ.

12.10.2018ರ ನಂತರ ನಿಮ್ಮ ರಾಶಿಗೆ ಗುರು ಬಲ ಬರುವ ಕಾರಣ ನಿಮ್ಮ ಆಕಾಂಕ್ಷೆಗಳು ಪೂರ್ಣವಾಗಿ ಸುಖವನ್ನು ಅನುಭವಿಸುವಿರಿ ಧಾರ್ಮಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ ವಿದ್ಯೆಯಲ್ಲಿ ಪ್ರಗತಿ ಕಾಣುವಿರಿ ಆರ್ಥಿಕವಾಗಿ ದಿನೆದಿನೆ ಬೆಳೆಯುವಿರಿ ಸಂತಾನ ಭಾಗ್ಯ ಉಂಟಾಗುವುದು ನಿಮ್ಮ ಪ್ರತಿಭೆಗೆ ತಕ್ಕ ಪುರಸ್ಕಾರ ದೊರೆಕುತ್ತದೆ ಪ್ರೀತಿ ಪ್ರೇಮದಲ್ಲಿ ತೊಡಗಿಕೊಳ್ಳುವ ಸಂಭವ ಇರುತ್ತದೆ.

ಶನಿಯು 24.01.2020ವರೆಗೆ ಧನಸ್ಸುವಿನಲ್ಲಿ ಇರುವುದರಿಂದ ನಿಮಗೆ ಧನ ಧಾನ್ಯಾಭಿವೃದ್ಧಿಯು ಬಂಧು ಬಳಗದವರೊಂದಿಗೆ ಸಂತೋಷವು ಹೊಸ ಗೃಹ ನಿರ್ಮಾಣವು ಪರೀಕ್ಷೆಯಲ್ಲಿ ಉನ್ನತ ಮಟ್ಟದಲ್ಲಿ ಪಾಸಾಗುವುದು ಆಸ್ತಿ ಸಂಪಾದನೆಯು ಸಾಲಗಳಿಂದ ಮುಕ್ತರಾಗುತ್ತೀರಿ ವ್ಯಾಪಾರದಲ್ಲಿ ಸಾಕಷ್ಟು ಲಾಭಗಳಿಸುವಿರಿ ವರ್ಷಾರಂಭದಿಂದ ಕೊನೆಯವರೆಗೆ ಶನಿಯಿಂದ ಶುಭಫಲವನ್ನು ಅನುಭವಿಸುವಿರಿ.

ರಾಹುಗ್ರಹವು ವರ್ಷಾರಂಭದಿಂದ 07.03.2019 ವರೆಗೆ ತಮ್ಮ ರಾಶಿಯಲ್ಲೆ ಇರುವುದರಿಂದ ಮನೆಯಲ್ಲಿ ಹೆಂಡತಿ ಮಕ್ಕಳೊಡನೆ ಕಲಹವು ಮಿತ್ರರೊಡನೆ ವಿರೋಧವು ಪ್ರತಿಯೊಂದು ಕೆಲಸದಲ್ಲೂ ನಿರಾಸಕ್ತಿ ಉಂಟಾಗುತ್ತದೆ ಅಧಿಕಾರಿಗಳ ಕೋಪವು ಬಂಧನದ ಭಯ ಕಾರ್ಯನಾಶವು ದೇಹ ಪೀಡೆಯು ದುಶ್ಚಟಗಳಿಂದ ಮನಸ್ಸಿಗೆ ಮತ್ತು ದೇಹಕ್ಕೆ ತೊಂದರೆಗಳು ಉಂಟಾಗುತ್ತದೆ ಪ್ರತಿಕಾರ್ಯದಲ್ಲಿ ವಿಘ್ನಗಳು ಕಂಡುಬರುತ್ತದೆ.

ಪರಿಹಾರ: ಪುಣ್ಯಕ್ಷೇತ್ರಗಳಲ್ಲಿ ನದಿ ಸ್ನಾನ ಮಾಡಿ ಸುಬ್ರಮಣ್ಯಸ್ವಾಮಿ ದೇವಾಲಯದಲ್ಲಿ ಕ್ಷೀರಾಭಿಷೇಕ ಮಾಡಿಸಿ.

ಶರತ್ ಶಾಸ್ತ್ರಿ
ಜ್ಯೋತಿಷ್ಯ ಪ್ರವೀಣ
9845371416

About Karnataka Express

Check Also

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಅವರಿಂದ ಈ ದಿನದ ರಾಶಿ ಭವಿಷ್ಯ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ …

Leave a Reply

Your email address will not be published. Required fields are marked *