Breaking News
Home / ಇತ್ತೀಚಿನ ಸುದ್ದಿಗಳು / ನಿಮ್ಮ ಹಳೆಯ ವಾಹನಗಳ ನೋಂದಣಿ ರದ್ದಾಗಲಿವೆ, ಯಾವ ವರ್ಷದ್ದು ಗೊತ್ತಾ..?

ನಿಮ್ಮ ಹಳೆಯ ವಾಹನಗಳ ನೋಂದಣಿ ರದ್ದಾಗಲಿವೆ, ಯಾವ ವರ್ಷದ್ದು ಗೊತ್ತಾ..?

ಹೌದು ಕೇಂದ್ರ ಸರ್ಕಾರ ಇಂತಹ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಈ ನಿರ್ಧಾರ ತೆಗೆದುಕೊಂಡಿದ್ದೆ. ಯಾವ ವರ್ಷದ ವಾಹನಗಳು ಅನ್ನೋದು ಇಲ್ಲಿದೆ ನೋಡಿ.

ಹಳೆಯ ವಾಹನಗಳು ಗಂಭೀರ ಪ್ರಮಾಣದಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿರುವುದು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಇಂಧನ ಬಳಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ವಾಣಿಜ್ಯ ಉದ್ದೇಶದ ವಾಹನಗಳಿಗೆ ಗರಿಷ್ಠ 20 ವರ್ಷಗಳ ವಯೋಮಿತಿ ನಿಗದಿ ಮಾಡಲು ನಿರ್ಧರಿಸಿದೆ.

ಈ ಮೂಲಕ ಇಂಥ ವಾಹನಗಳ ನೋಂದಣಿಯನ್ನು ರದ್ದುಪಡಿಸಲು ನಿರ್ಧರಿಸಿದೆ. 2020ಕ್ಕೆ ಇಂಥದ್ದೊಂದು ನಿಯಮವನ್ನು ಜಾರಿಗೆ ತರುವ ಉದ್ದೇಶ ಸರ್ಕಾರದ್ದು ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಪ್ರಧಾನಿ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಇಂಥದ್ದೊಂದು ನಿರ್ಣಯ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ನೀತಿ ಆಯೋಗ, ಸಾರಿಗೆ, ಭಾರೀ ಕೈಗಾರಿಕೆ, ಹಣಕಾಸು ಮತ್ತು ಪರಿಸರ ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.

About Karnataka Express

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *