Breaking News
Home / ಇತ್ತೀಚಿನ ಸುದ್ದಿಗಳು / ತನ್ನ ಹೆಂಡತಿ ಸಾವಿನ ನೆನಪಿಗಾಗಿ ಬೆಟ್ಟವನ್ನೇ ಅಗೆದ ಈ ಧೀರನ ಕಥೆ..!

ತನ್ನ ಹೆಂಡತಿ ಸಾವಿನ ನೆನಪಿಗಾಗಿ ಬೆಟ್ಟವನ್ನೇ ಅಗೆದ ಈ ಧೀರನ ಕಥೆ..!

ಹೌದು ಈ ವ್ಯಕ್ತಿಯ ಹೆಸರು ದಶರಥ್ ಮಾಂಜಿ ಇವನನ್ನು ಮೌಂಟೇನ್ ಮ್ಯಾನ್ ಎಂದು ಕರೆಯುತ್ತಾರೆ,
ಇವನು ಮಾಡಿರೋ ಕೆಲಸ ಸಾಮಾನ್ಯ ಮನುಷ್ಯರು ಮಾಡಲಿಕ್ಕೆ ಸಾಧ್ಯವೇ ಇಲ್ಲ,

ಮಾಂಜಿ ಮಾಡಿರೋ ಕೆಲಸವೇನು ಗೊತ್ತಾ?

ಇವನು 22 (1960-1982) ವರ್ಷಗಳ ಕಾಲ ಸುಮಾರು 360 ಅಡಿ ಎತ್ತರ ಮತ್ತು 25 ಅಡಿ ಆಳ ಹಾಗು 30 ಅಡಿ ಅಗಲದ ಪರ್ವತವನ್ನು ಬರಿ ಕಾಯಲ್ಲೇ ಅಗೆದು ರಸ್ತೆಯನ್ನು ನಿರ್ಮಿಸಿದ್ದಾನೆ ಈ ರಸ್ತೆಯು ಬಿಹಾರದ ಗಯಾದಿಂದ 55 ಕಿಮೀ ಇದ್ದ ದೂರವನ್ನು ಬರಿ 15 ಕಿಮೀಗೆ ತರುವ ಮೂಲಕ ಆ ಊರಿನ ಜನರಿಗೆ ಅನುಕೂಲ ಮಾಡಿದ್ದಾನೆ.

ಮಾಂಜಿ ಈ ಕೆಲಸ ಮಾಡಿದ್ದಾದರೂ ಯಾಕೆ ಗೊತ್ತಾ..!

ಇವನ ಊರು ಕುಗ್ರಾಮವಾಗಿದ್ದು ಸರಿಯಾದ ರಸ್ತೆಯಿಲ್ಲದೆ ಬೆಟ್ಟದ ಮೇಲಿನಿಂದ ಕಾಲು ಜಾರಿ ಬಿದ್ದ ತನ್ನ ಪತ್ನಿಯನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದೊಯ್ಯಲಾಗದೆ ಆಕೆಯನ್ನು ಕಳೆದುಕೊಂಡನು, ಆದುದರಿಂದ ಆಕೆಯ ನೆನಪಲ್ಲೇ ಮರುಗುತ್ತಿದ್ದ ಮಾಂಜಿ ಮುಂದೊಂದು ದಿನ ಅವನ ಹೆಂಡತಿಯ ನೆನಪಲ್ಲೇ ಇಡೀ ಬೆಟ್ಟವನ್ನೇ ಅಗೆಯಲು ತೀರ್ಮಾನಿಸುತ್ತಾನೆ. ಹೀಗೆ 22 ವರ್ಷಗಳ ಕಾಲ ಬೆಟ್ಟವೊಂದನ್ನು ಅಗೆದು ಆ ಊರಿಗೆ ರಸ್ತೆಯೊಂದನ್ನು ನಿರ್ಮಾಣ ಮಾಡುತ್ತಾನೆ.

ಇವನ ಈ ಕಾರ್ಯಕ್ಕೆ ಇಡೀ ಗ್ರಾಮವೇ ಪ್ರಶಂಶೆ ವ್ಯಕ್ತಪಡಿಸಿದ್ದಲ್ಲದೆ ಈಗ ಮಾಂಜಿಯಾ ಹೆಸರಿನಲ್ಲಿ ಒಂದು ಆಸ್ಪತ್ರೆ ನಿರ್ಮಿಸಲು ಬಿಹಾರ ಸರಕಾರ ತೀರ್ಮಾನಿಸಿದೆ.

About Karnataka Express

Check Also

ಯಡಿಯೂರಪ್ಪಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ..!

ಹೌದು ಇದೇನಪ್ಪ ಯಡಿಯೂರಪ್ಪಗೆ ಕುಮಾರಸ್ವಾಮಿ ಕುರ್ಚಿ ಬಿಟ್ಟುಕೊಟ್ಟಿದ್ದಾರೆ ಅಂದ್ರೆ ಎಲ್ಲರು ಶಾಕ್ ಆಗುವ ವಿಚಾರವೇ ಈ ಎಲ್ಲ ನಾಯಕರು ಚುನಾವಣೆ …

Leave a Reply

Your email address will not be published. Required fields are marked *