Breaking News
Home / ಆರೋಗ್ಯ / ನೀವು ಪ್ರತಿದಿನ ಸೋಡಾ ಕುಡಿಯುತ್ತಿದ್ದಿರಾ ಎಚ್ಚರ..!

ನೀವು ಪ್ರತಿದಿನ ಸೋಡಾ ಕುಡಿಯುತ್ತಿದ್ದಿರಾ ಎಚ್ಚರ..!

ಹೌದು ನೀವು ಪ್ರತಿನಿತ್ಯ ಸೋಡಾ ಕುಡಿಯುತ್ತಿದ್ದರೆ ಎಚ್ಚರ, ಯಾಕೆಂದರೆ ಕೆಲವೊಬ್ಬರಿಗೆ ಪ್ರತಿನಿತ್ಯ ಸೋಡಾ ಕುಡಿಯೋದು ಅಭ್ಯಾಸವಾಗಿದೆ, ಇನ್ನು ಕೆಲವರು ದಾಹಕ್ಕೆ ತಂಪಾದ ಪಾನೀಯ ಬಿಟ್ಟು ಸೋಡವನ್ನೇ ಕುಡಿಯುತ್ತಾರೆ ಆದ್ದರಿಂದ ಯಾಕೆ ಬೇಡ ಅನ್ನೋದಕ್ಕೆ ಇಲ್ಲಿದೆ ನೋಡಿ,

ಅತಿಯಾದ ಸೋಡಾ ಸೇವನೆ ಏಕೆ ಬೇಡ:

೧. ಸೋಡದಲ್ಲಿ ನಮ್ಮ ದೇಹಕ್ಕೆ ಬೇಕಾಗುವಂತ ಯಾವುದೇ ಪೌಷ್ಟಿಕಾಂಶಗಳು ಇರುವುದಿಲ್ಲ ಮತ್ತು ಪ್ರೋಟೀನ್, ವಿಟಮಿನ್ ಹಾಗೂ ಖನಿಜಗಳ ಪ್ರಮಾಣ ಶೂನ್ಯವಾಗಿರುತ್ತದೆ.

೨. ಸೋಡದಲ್ಲಿ ಅತಿಯಾದ ಕೆಫೀನ್, ಆಮ್ಲಗಳು, ಕೃತಕ ಬಣ್ಣಗಳು ಇರುವುದರಿಂದ ನಾವು ಅತಿಯಾದ ಸೇವನೆ ಮಾಡಿದರೆ ಅವು ನಮ್ಮ ದೇಹದ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಬೀಳುವ ಸಂಭವ ಹೆಚ್ಚು.

೩. ಅತಿಯಾದ ಸೋಡಾ ಸೇವನೆಯಿಂದ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

೪. ಸೋಡಾದ ಅತಿಯಾದ ಸೇವನೆಯು ಮಧುಮೇಹ ರೋಗಕ್ಕೂ ಕಾರಣವಾಗಬಹುದು.

೫. ಅನೇಕರು ದಾಹ ತಣಿಸಿಕೊಳ್ಳಲು ಇದನ್ನು ಕುಡಿಯುತ್ತಾರೆ. ಆದರೆ, ಇದರಲ್ಲಿರುವ ಹೆಚ್ಚುವರಿ ಸಕ್ಕರೆಯನ್ನು ಮೂತ್ರದ ರೂಪದಲ್ಲಿ ಮೂತ್ರಪಿಂಡ ಹೊರಹಾಕಲು ಯತ್ನಿಸುವುದರಿಂದ ಇದು ಮೂತ್ರವರ್ಧಕದಂತೆ ವರ್ತಿಸುತ್ತದೆ.

೬. ಅತಿಯಾದ ಸೋಡಾ ಸೇವನೆಯಿಂದ ಹಲ್ಲು ಮತ್ತು ಸವಾಡುಗಳಿಗೆ ತೊಂದರೆಯಾಗುತ್ತದೆ.

ಯಾವಾಗಲೋ ಒಮ್ಮೆ ಒಂದು ಗ್ಲಾಸ್ ಸೋಡಾ ಕುಡಿಯುವುದು ಸರಿ.,..ಆದರೆ ಹೆಚ್ಚು ಪ್ರಮಾಣದಲ್ಲಿ ಸೇವಿಸದಂತೆ ಎಚ್ಚರಿಕೆ ವಹಿಸಿ ಮತ್ತು ಅದರ ಬದಲು ಹಣ್ಣಿನ ಜ್ಯುಸ್ ಕುಡಿಯಿರಿ ರೋಗಕ್ಕೂ ಒಳ್ಳೆಯದು.

About Karnataka Express

Check Also

ಹುಳುಕಡ್ಡಿ ಸಮಸ್ಯೆಗೆ ನೇರಳೆಯಲ್ಲಿ ಅಡಗಿದೆ ಓಷಧಿ ಗುಣಗಳು..!

ನಮಗೆ ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು …

Leave a Reply

Your email address will not be published. Required fields are marked *