Breaking News
Home / ಇತ್ತೀಚಿನ ಸುದ್ದಿಗಳು / ತುಲಾ ವೃಶ್ಚಿಕ ಧನಸ್ಸು ಮಕರ ಕುಂಭ ಮೀನ ರಾಶಿಯ ವರ್ಷ ಭವಿಷ್ಯ ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ ಶುಭನಾ ಅಶುಭನಾ..!

ತುಲಾ ವೃಶ್ಚಿಕ ಧನಸ್ಸು ಮಕರ ಕುಂಭ ಮೀನ ರಾಶಿಯ ವರ್ಷ ಭವಿಷ್ಯ ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ ಶುಭನಾ ಅಶುಭನಾ..!

ತುಲಾ ರಾಶಿಯ ವರ್ಷ ಭವಿಷ್ಯ

ಚಿತ್ತಾ3,4 ಸ್ವಾತಿ, ವಿಶಾಖ1,2,3
[ರ,ರಿ,ರು,ರೆ,ರೊ,ತ,ತಿ,ತು,ತೆ]

ತುಲಾ ರಾಶಿಯವರಿಗೆ ಗುರುಗ್ರಹವು 12.10.2018ವರೆಗೆ ನಿಮ್ಮರಾಶಿಯಲ್ಲೇ ಇರುವುದರಿಂದ ಯಶಸ್ಸು ಹಾನಿಯು ಬಂಧುಮಿತ್ರರೊಡನೆ ವಿರೋಧವು ಚಿತ್ತ ಚಂಚಲವು ಚೈತನ್ಯ ಕುಂದಿದಂತೆ ಭಾಸವಾಗುತ್ತದೆ ಭಾಗ್ಯ ಹಾನಿಯು ಭಯವು ಉಂಟಾಗುತ್ತದೆ ಮುಖದಲ್ಲಿ ತೇಜಸ್ಸು ಕಡಿಮೆಯಾಗುವುದು ಸ್ವ ಉದ್ಯೋಗಿಗಳಿಗೆ ಮಂದಗತಿಯಲ್ಲಿ ಪ್ರಗತಿ ಕಾಣುತ್ತದೆ ಮಧುಮೇಹ ರೋಗದ ತೊಂದರೆಯಿಂದ ಬಳಲುತ್ತೀರಿ ಧರ್ಮಗುರಗಳ ಕೋಪಕ್ಕೆ ತುತ್ತಾಗುವಿರಿ ಮಕ್ಕಳಲ್ಲಿ ಆರೋಗ್ಯ ತೊಂದರೆಗಳು ಕಾಣುತ್ತದೆ.

12.10.2018ರ ನಂತರ ವೃಶ್ಚಿಕಕ್ಕೆ ಗುರು ಪ್ರವೇಶವಾದನಂತರ ಬಹಳ ಶುಭಫಲವನ್ನು ಅನುಭವಿಸುವಿರಿ ವಿವಾಹಾದಿ ಶುಭಕಾರ್ಯ ನಡೆಯುವುದು ವಾಕ್ ಚಾತುರ್ಯದಿಂದ ಎಲ್ಲರನ್ನು ಆಕರ್ಶಿಸುವಿರಿ ಆರ್ಥಿಕ ಸಮಸ್ಸೆಗಳು ದೂರವಾಗುತ್ತದೆ ಷೇರಿನ ವ್ಯವಹಾರ ಸಾಧಾರಣವಾಗಿರುತ್ತದೆ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ ಕುಟುಂಬದಲ್ಲಿ ಶುಭಕಾರ್ಯಗಳು ದೇವತಾ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುತ್ತದೆ.

ಶನಿಗ್ರಹವು 24.1.2020ವರೆಗೆ ಧನಸ್ಸು ರಾಶಿಯಲ್ಲಿ ಇರುವುದರಿಂದ 3ನೇ ಮನೆಯ ಫಲ ಸ್ತ್ರೀ ಸುಖಭೋಗವು ಮನಸ್ಸಿಗೆ ಸುಖ ಸಂತೋಷವು ಸ್ನೇಹಿತರ ಬಂಧುಗಳ ಸಹಕಾರದಿಂದ ಅಭಿವೃದ್ಧಿ ಹೊಂದುವಿರಿ ಪ್ರಯತ್ನಿಸಿದ ಕಾರ್ಯಗಳಲ್ಲಿ ಸಿದ್ದಿ ಉತ್ತಮ ಬುದ್ಧಿಯು ಪುತ್ರ ಪುತ್ರಿಯರ ಜನನವು ಆರೋಗ್ಯವು ಸಹೋದರ ಸಹೋದರಿಯರ ಪ್ರೀತಿಗೆ ಪಾತ್ರರಾಗುವಿರಿ.
ಒಪ್ಪಂದದ ವ್ಯವಹಾರಗಳು ಅನೂಕೂಲವಾಗಿರುತ್ತದೆ ದೀರ್ಘ ಪ್ರಯಾಣವು ಉತ್ಸಾಹವಾಗಿರುತ್ತದೆ.

ರಾಹುಗ್ರಹವು 7.03.2019 ರವರೆಗ ಕಟಕದಲ್ಲಿ ಇರುವುದರಿಂದ 10ನೇ ಮನೆಯ ಫಲವನ್ನು ಕೊಡುತ್ತಾನೆ ಸಿಕ್ಕ ಸಿಕ್ಕ ಆಹಾರವನ್ನು ತಿನ್ನುವುದು ಯಾವಾಗಲೂ ಪ್ರವಾಸ ಮಾಡುವುದೇ ಉದ್ಯೋಗವಾಗುತ್ತದೆ ವೃತ್ತಿ ಬದುಕಿನಲ್ಲಿ ಸಾಕಷ್ಟು ಏಳು ಬೀಳುಗಳು ಉಂಟಾಗುತ್ತದೆ ಆರಂಭಿಸಿದ ಕಾರ್ಯಗಳು ಅರ್ಧಕ್ಕೆ ನಿಲ್ಲುತ್ತದೆ ಮೇಲಧಿಕಾರಿಗಳ ಕಿರುಕುಳಕ್ಕೆ ಒಳಗಾಗುತ್ತೀರಿ.
ಪರಿಹಾರ: ಇಷ್ಟ ದೇವರ ಮಂತ್ರವನ್ನು ನಿತ್ಯ ಪಠಿಸುವುದು ಮನೆದೇವರ ದರ್ಶನ ಮಾಡುವುದು

 

ವೃಶ್ಚಿಕ ರಾಶಿಯ ವರ್ಷ ಭವಿಷ್ಯ

ವಿಶಾಖ4, ಅನುರಾಧ, ಜೇಷ್ಠ
[ತೊ,ನ,ನಿ,ನು,ನೆ,ನೊ,ಯ,ಯಿ,ಯು]

ವೃಶ್ಚಿಕ ರಾಶಿಯವರಿಗೆ ಗುರುಗ್ರಹ 12.10.2018ರವರೆಗೆ ತುಲಾರಾಶಿ 12ನೇ ಮನೆಯಲ್ಲಿ ಇರುವುದರಿಂದ ಧನ ಹಾನಿಯು ವ್ಯರ್ಥ ತಿರುಗಾಟವು ಅಧಿಕ ಖರ್ಚು ಎದುರಾಗುತ್ತದೆ ಆತ್ಮೀಯರ ಆರೋಗ್ಯದ ಸಲುವಾಗಿ ಔಷದೋಪಚಾರಕ್ಕಾಗಿ ಸಾಕಷ್ಟು ಹಣವನ್ನು ವ್ಯಯ ಮಾಡುವಿರಿ ಕೆಲಸ ಕಾರ್ಯಗಳು ಮಂದವಾಗುತ್ತದೆ ಧಾನ ಧರ್ಮಗಳು ಅಧಿಕವಾಗುತ್ತದೆ ಸಾಲವು ಅಧಿಕವಾಗಬಹುದು ಹಿತ ಶತ್ರುಗಳು ಹೆಚ್ಚಾಗುವರು ಕೆಲವರು ಕುಟುಂಬದಿಂದ ದೂರ ಸರಿಯುವ ಸಂಭವ ಇರುತ್ತದೆ ಹೊಸ ವ್ಯವಹಾರಕ್ಕೆ ಹಣ ಹೂಡಿಕೆ ಮಾಡುವುದರಿಂದ ನಷ್ಟಗಳು ಅನುಭವಿಸುವಿರಿ.

12.10.2018ರಿಂದ ಗುರು ಗ್ರಹ ನಿಮ್ಮ ಮನೆಗೆ ಪ್ರವೇಶವಾದ ನಂತರ ಉತ್ತಮ ಫಲವನ್ನು ಅನುಭವಿಸುವಿರಿ.

ಶನಿಗ್ರಹವು 24.1.2020ರವರೆಗೆ ಧನಸ್ಸು ರಾಶಿಯಲ್ಲಿ ಇರುವುದರಿಂದ ನೀಮಗೆ 2ನೇ ಮನೆ ಫಲ ಮತ್ತು ಸಾಡೆಸಾತಿಯ ಶನಿಕಾಟ ಇರುತ್ತದೆ ಬುದ್ಧಿ ಭ್ರಮೆಯು ಮನಸ್ಸಿಗೆ ದುಃಖವು ಸರ್ವಕಾರ್ಯಗಳಲ್ಲಿ ವಿನಾಶವು ದೇಹದಲ್ಲಿ ಆಲಸ್ಯ ಮನಸ್ಸಿಗೆ ತಾಪವು ಕೃಷಿಕ ಕ್ಷೇತ್ರದಲ್ಲಿ ನಷ್ಟ ಉಂಟಾಗುವುದು ವೃತ್ತಿ ಬದುಕಿನಲ್ಲಿ ಸಾಕಷ್ಟು ಹಿನ್ನಡೆ ಉಂಟಾಗುವುದು ವೃತ್ತಿಯಲ್ಲಿ ಬಾರಿ ಬದಲಾವಣೆ ಉಂಟಾಗುತ್ತದೆ ಪತ್ರ ವ್ಯವಹಾರದಲ್ಲಿ ಹಲವು ಸಮಸ್ಯೆಯನ್ನು ತರಬಹುದು ಮನೆಯಲ್ಲಿ ಅಶಾಂತಿಯು ಕಾಡುತ್ತದೆ ಊಹಾ ಪೋಹಾ ವಿಷಯಗಳಿಂದ ಮನಸ್ಸಿಗೆ ನೋವಾಗುತ್ತದೆ.

ರಾಹುಗ್ರಹವು ವರ್ಷಪೂರ್ತಿ ಕಟಕದಲ್ಲಿ ಇರುವುದರಿಂದ 9ನೇ ಮನೆಯ ಫಲವನ್ನು ಕೊಡುತ್ತದೆ ಆಹಾರ ವಸ್ತ್ರಗಳ ಕೊರತೆಯು ಅನೇಕ ಧಾರ್ಮಿಕ ಮುಖಂಡರೊಂದಿಗೆ ಗುರು ಸಮಾನರೊಂದಿಗೆ ಮೈ ಮನಸ್ಸು ಬೆಳೆಯುತ್ತದೆ ದುಃಖವು ಮುಖ ಹಲ್ಲು ಕಣ್ಣುಗಳ ತೊಂದರೆಯು ತಂದೆ ಮಕ್ಕಳಲ್ಲಿ ವಿರೋಧವು ಉಂಟಾಗುವುದು ಪಿತೃ ಆಸ್ತಿಯ ವಿವಾದಗಳು ಉಲ್ಬಣವಾಗುತ್ತದೆ
ಉನ್ನತ ಶಿಕ್ಷಣದಲ್ಲಿ ಹಿನ್ನಡೆ ಕಾಣಬಹುದು.

ಪರಿಹಾರ: ದಕ್ಷಿಣಾಮೂರ್ತಿ ದೇವಾಲಯದಲ್ಲಿ ಅಭಿಷೇಕ ಮಾಡಿಸುವುದು.

 

ಧನಸ್ಸು ರಾಶಿಯ ವರ್ಷ ಭವಿಷ್ಯ

ಮೂಲ, ಪೂರ್ವಾಷಾಢ, ಉತ್ತರಾಷಾಢ1
[ಯೆ,ಯೊ,ಬ,ಬಿ,ಬು,ಧ,ಭ,ಡ]

ಧನಸ್ಸು ರಾಶಿಯವರಿಗೆ ಗುರುಗ್ರಹ 12.10.2018ವರೆಗೆ 11ನೇ ಮನೆಯ ಫಲವನ್ನು ಕೊಡುತ್ತಾನೆ ಯಶಸ್ಸು ವೃದ್ಧಿಯು, ತೇಜಸ್ಸು, ದೇಹದಲ್ಲಿ ಉತ್ಸಾಹವು ಸರ್ವತ್ರ ವಿಜಯವು ಸುಖವು ಕುಟುಂಬದಲ್ಲಿ ಶುಭಕಾರ್ಯಗಳು ನೆರವೇರುತ್ತದೆ ಆರ್ಥಿಕವಾಗಿ ಸದೃಢರಾಗುವಿರಿ ಶತ್ರುಗಳು ಮಿತ್ರರಾಗುವಿಕೆಯು ಒಳಬರುವ ಹಣವು ಉತ್ತಮವಾಗಿರುತ್ತದೆ ಕೈಗೊಂಡ ಕಾರ್ಯಗಳಲ್ಲಿ ಜಯ ಕಾಣುವಿರಿ ಆರೋಗ್ಯ ಉತ್ತಮವಾಗಿರುತ್ತದೆ ವಿಧ್ಯಾರ್ಥಿಗಳಿಗೆ ಸಾಧನೆಯ ವರ್ಷವಾಗುತ್ತದೆ ಆರ್ಥಿಕ ಕ್ಷೇತ್ರಗಳಲ್ಲಿ ಏಳಿಗೆ ಉಂಟಾಗುತ್ತದೆ ಬಹುದಿನದಿಂದ ನೆನೆಗುದಿಗೆ ಬಿದ್ದಿದ್ದ ಕಾರ್ಯಗಳು ಈಗ ಕಾರ್ಯಗತಗೊಳ್ಳುತ್ತದೆ.

12.10.2018ರ ನಂತರ ಗುರುಗ್ರಹ 12ನೇ ಮನೆಗೆ ಬಂದಾಗ ವಿನಾಕಾರಣ ಅನೇಕ ವೆಚ್ಚಗಳನ್ನು ನೀಡುತ್ತಾನೆ ಕೆಲವೊಮ್ಮೆ ಮೂಢ ನಂಬಿಕೆ ಕಂದಾಚಾರ ನಂಬಿಕೊಂಡು ಹಣವನ್ನು ವ್ಯಯಿಸುತ್ತೀರಿ ಹಿತಶತ್ರುಗಳು ಅಧಿಕವಾಗುತ್ತಾರೆ ಹಲವು ವಿಚಾರಗಳಲ್ಲಿ ಮೋಸ ಹೋಗುವ ಸಂಭವ ಇರುತ್ತದೆ ಗುಪ್ತ ವ್ಯವಹಾರಗಳು ನಷ್ಟತರಬಹುದು ಸಾಲಭಾದೆಯು ಅಧಿಕವಾಗಬಹುದು.

ಶನಿಗ್ರಹವು ನಿಮ್ಮರಾಶಿಯಲ್ಲೆ ಇರುವುದರಿಂದ ಸತತ ತಲೆ ನೋವು ಬರುತ್ತದೆ ಅಗ್ನಿವಾಯುವಿಗೆ ಸಂಭಂದಿಸಿದಂತೆ
ಆರೋಗ್ಯ ಸಮಸ್ಸೆ ಆಗುವುದು ಸಂಘ ಸಂಸ್ಥೆಯಲ್ಲಿ ಗೌರವಕ್ಕೆ ಧಕ್ಕೆಯಾಗುವುದು ತೇಜೋ ಹಾನಿಯು ಮಾನಸಿಕ ಪೀಡೆಯು ಎಲ್ಲಾಕೆಲಸಗಳಲ್ಲಿ ಅಪಜಯವು ಬಂಧುಜನರೊಡನೆ ವೈರತ್ವವು ಚಿಂತೆಯು ಅನಿಷ್ಟ ಫಲಗಳುಂಟಾಗುವುದು ವೈವಾಹಿಕ ಜೀವನದ ಮೇಲೆ ದುಷ್ಟರಿಣಾಮ ಉಂಟಾಗುತ್ತದೆ.

ನಿಮ್ಮ ರಾಶಿಗೆ ರಾಹುಗ್ರಹವು 8ನೇ ಮನೆಯಲ್ಲಿ ಸಂಚರಿಸುವಾಗ ಸಣ್ಣಪುಟ್ಟ ಅಪಘಾತಗಳು ಉಂಟಾಗುತ್ತದೆ ಶತ್ರು ಪೀಡೆ ಉಂಟಾಗುತ್ತದೆ ದುಷ್ಟರಿಂದ ಹಾನಿ ಉಂಟಾಗುತ್ತದೆ ಪ್ರಯಾಣದಲ್ಲಿ ರೋಗೋಪದ್ರವವು ಉಂಟಾಗುತ್ತದೆ.

ಪರಿಹಾರ: ಸುದರ್ಶನ ಹೋಮ ಮಾಡಿಸುವುದು ಹನುಮಾನ್ ಚಾಲಿಸ್ ಪಠಿಸುವುದು.

ಮಕರ ರಾಶಿಯ ವರ್ಷ ಭವಿಷ್ಯ

ಉತ್ತರಾಷಾಢ2,3,4 ಶ್ರವಣ, ಧನಿಷ್ಠ1,2
[ಬೊ,ಜ,ಜಿ,ಶಿ,ಶು,ಶೆ,ಶೊ,ಗ,ಗಿ]

ಮಕರ ರಾಶಿಯವರಿಗೆ ಗುರುಗ್ರಹವು 12.10.2018ರವರೆಗೆ ತುಲಾರಾಶಿಯಲ್ಲಿ ಇರುವುದರಿಂದ ದಶಮ ಸ್ಥಾನ ಫಲವನ್ನು ಕೊಡುತ್ತಾನೆ ಅಧಿಕ ತಿರುಗಾಟವು ಭಯವು ಉದ್ಯೋಗದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತದೆ ಸ್ವಜನರೊಡನೆ ತಿರಸ್ಕಾರವು ದುಃಖವು ಚಿತ್ತ ಚಂಚಲವು ರೋಗ ಪೀಡೆಯು
ಎಷ್ಟು ಪ್ರಾಮಾಣಿಕವಾಗಿ ಕಾರ್ಯಗಳನ್ನು ಮಾಡಿದರೂ ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಬರುವುದಿಲ್ಲ ಲಾಭಕ್ಕಿಂತ ವ್ಯಯ ಅಧಿಕವಾಗುವುದು.

12.10.2018ರ ನಂತರ ಗುರು ಗ್ರಹ 11ನೇ ಮನೆಗೆ ಸಂಚರಿಸುವಾಗ ಎಲ್ಲಾ ತರಹ ಮಂಗಳ ಉಂಟಾಗುತ್ತದೆ ಆರ್ಥಿಕ ಕ್ಷೇತ್ರದಲ್ಲಿ ಯಶಸ್ಸು ಉಂಟಾಗುತ್ತದೆ ವಿವಾಹಾದಿ ಶುಭಕಾರ್ಯ ನಡೆಯುತ್ತದೆ ಧನ ಲಾಭವು ದಾನ ಧರ್ಮವನ್ನು ಮಾಡುವ ಯೋಗ ಕಂಡು ಬರುತ್ತದೆ ಹಿರಿಯ ಸಹೋದರರ ಸಾಹಾಯ ಹೊಂದುವಿರಿ ಅದೃಷ್ಟದಲ್ಲಿ ಅದೃಷ್ಟ ಹೊಂದುವಿರಿ ಒಳ್ಳೆಯ ಗೌರವ ಸಿಗುತ್ತದೆ.

ಶನಿಯು ದ್ವಾದಶದಲ್ಲಿ ಸಂಚರಿಸುವಾಗ ಏಳರಾಟ ಶನಿ ಪ್ರಾರಂಭ ಪ್ರತಿ ಕೆಲಸಕ್ಕೆ ಹಲವು ಭಾರಿ ಪ್ರಯತ್ನಿಸಬೇಕಾಗುತ್ತದೆ ಹಲವು ತೊಡಕುಗಳು ಕಾಡುತ್ತದೆ ನಿತ್ಯ ವಾದ ವಿವಾದವು ಮಾನಹಾನಿಯು ಪರಸ್ಥಳ ತಿರುಗಾಡುವಿಕೆಯು ಅಲ್ಪಭೋಜನವು ಕೃಷಿಯಿಂದ ಅಲ್ಪಲಾಭವು ಮೈಗಳ್ಳತನ ಉಂಟಾಗುತ್ತದೆ ಕೀಲುಗಳಿಗೆ ಸಂಬಂಧಪಟ್ಟ ನೋವುಗಳು ವಾತ ಬೊಜ್ಜು ಈ ತರಹದ ಕಾಯಿಲೆಗಳಿಂದ ಬಳಲುತ್ತೀರಿ.

ಏಳನೇ ಮನೆಯಲ್ಲಿ ರಾಹುಗ್ರಹವು ಇರುವುದರಿಂದ ಬಂಧು ಬಾಂಧವರೊಡನೆ ಸರ್ವಜನಿಕರೊಡನೆ ವೈರತ್ವವು ಮಕ್ಕಳು ಸಹೋದರರೊಡನೆ ಕಲಹವು ದ್ವೇಷವು ಉಂಟಾಗುವುದು ಸಣ್ಣ ಪುಟ್ಟ ಘಟನೆಗಳು ನಿಮ್ಮ ದಾಂಪತ್ಯ ಜೀವನದ ಮೇಲೆ ಬಿರುವುದು ಪಾಲುದಾರಿಕಾ ವ್ಯವಹಾರದಿಂದ ನಷ್ಟ ಉಂಟಾಗುತ್ತದೆ ದುಷ್ಟರ ಸಹವಾಸ ಸ್ನೇಹಗಳು ಉಂಟಾಗುತ್ತದೆ.

ಪರಿಹಾರ: ಅವರೆಕಾಳನ್ನು 21ಶುಕ್ರವಾರ ದಾನ ಮಾಡುವುದು.

ಕುಂಭ ರಾಶಿಯ ವರ್ಷ ಭವಿಷ್ಯ

ಧನಿಷ್ಠ3,4, ಶತಭಿಷ, ಪೂರ್ವಾಭಾದ್ರ1,2,3
[ಗು,ಗೆ,ಗೊ,ಸ,ಸಿ,ಸು,ಸೆ,ಸೊ,ದ]

ಕುಂಭರಾಶಿಯವರಿಗೆ ಗುರುಗ್ರಹವು 12.10.2018ರವರೆಗೆ 9ನೇ ಮನೆ ಫಲವನ್ನು ಕೊಡುತ್ತಾನೆ ಧನಲಾಭವು ಮನೆಯಲ್ಲಿ ನಿತ್ಯ ಸ್ವಧರ್ಮಾಚರಣೆಯು ಶುಭ ಶೋಭನಾದಿ ಮಂಗಳ ಕಾರ್ಯಗಳು ನೆರವೇರುವುದು ಇಷ್ಟಾರ್ಥ ನೆರವೇರುತ್ತದೆ ಮಧುರ ಆಹಾರ ಭೋಜನವು ಸಿಗುವುದು ದೇವತಾಕಾರ್ಯ ಗುರುಗಳ ಸೇವೆ ಮಾಡುವಿರಿ ಮುಂದಾಲೋಚನೆ ಕೆಲಸದಲ್ಲಿ ಜಯ ಕಾಣುವಿರಿ ಧೀರ್ಘ ಪ್ರಯಾಣ ಸಂತಸ ನೀಡುವುದು ಕೆಲವರಿಗೆ ಹೊಸ ವ್ಯವಹಾರವನ್ನು ಪ್ರಾರಂಭಿಸುವ ಸಂಭವ ಇರುತ್ತದೆ ಆರ್ಥಿಕ ಸಮಸ್ಸೆಗಳು ದೂರ ಸರಿಯುತ್ತದೆ.

12.10.2018ರ ನಂತರ ಗುರು ಗ್ರಹ 10ನೇ ಮನೆಗೆ ಪ್ರವೇಶವಾದ ನಂತರ ಉದ್ಯೋಗದಲ್ಲಿ ಸಣ್ಣಪುಟ್ಟ ತೊಂದರೆಗಳು ಅಡೆತಡೆಗಳು ವಿಘ್ನಗಳು ಎದುರಾಗುತ್ತದೆ.

ನಿಮ್ಮ ರಾಶಿಗೆ ಶನಿಗ್ರಹವು 11ನೇ ಮನೆಯಲ್ಲಿ ಸಂಚರಿಸುವುದರಿಂದ ದೇಹದಲ್ಲಿ ಆರೋಗ್ಯ, ಧನಲಾಭವು ಹೆಂಡತಿ ಮಕ್ಕಳೊಡನೆ ಸುಖ ಸಂತೋಷವು ಹರ್ಷಚಿತ್ತವು ಆಸೆ ಆಕಾಂಕ್ಷೆಗಳು ಪೂರ್ಣಗೊಳ್ಳುತ್ತದೆ ನವ ಚೈತನ್ಯದಿಂದ ಕೂಡಿರುವಿರಿ ಆಶ್ರಮ ವೃದ್ಧಾಶ್ರಮ ನಡೆಸುವವರಿಗೆ ಸಕಲ ವಿದಧ ಅನುಕೂಲ ದೊರೆಯುತ್ತದೆ.

ರಾಹುಗ್ರಹವು 6ನೇ ಮನೆಯಲ್ಲಿ ಸಂಚರಿಸುವಾಗ ಶತ್ರುಗಳ ವಿರುದ್ಧ ಗೆಲುವನ್ನು ಸಾಧಿಸುತ್ತೀರಿ ಪರೀಕ್ಷೆಗಳಲ್ಲಿ ಪಾಸಾಗುತ್ತೀರಿ ವಸ್ತ್ರ ಸಂಗ್ರಹವು ಧಾನ್ಯಗಳ ಸ್ವಧರ್ಮ ಕಾರ್ಯಾಸಕ್ತಿಯು ಆರೋಗ್ಯವು ಇತ್ಯಾದಿ ಶುಭ ಫಲಗಳುಂಟಾಗುವುದು.

ಪರಿಹಾರ: ವಿಷ್ಣು ದೇವಾಲಯದಲ್ಲಿ ತುಳಸಿಯನ್ನು ಕೊಡುವುದು ತುಪ್ಪದ ದೀಪವನ್ನು ಹಚ್ಚಿರಿ.

ಮೀನ ರಾಶಿಯ ವರ್ಷ ಭವಿಷ್ಯ

ಪೂರ್ವಾಭಾದ್ರ3,4 ಉತ್ತರಾಭಾದ್ರ, ರೇವತಿ
[ದಿ,ದು,ಖ,ಥ,ದೆ,ದೊ,ಚ,ಚಿ]

ಮೀನ ರಾಶಿಗೆ ಗುರುಗ್ರಹ 12.10.2018ರವರೆಗೆ 8ನೇ ಮನೆಯಲ್ಲಿ ಇರುವುದರಿಂದ ಚೋರಭಯ ಅಗ್ನಿ ಭೀತಿಯು ಅಧಿಕಾರಿಗಳಿಂದ ತೊಂದರೆಗಳು ಚರ ಸ್ಥಿರ ಆಸ್ತಿಗೆ ಸಂಭಂದಿತ ಕಲಹಗಳು ಬೇಸರವು ನಿಷ್ಠುರತನವು ಅತಿ ಕೋಪವು ಸಾಹಸವು ಜೀವನದಲ್ಲಿ ನಿರಾಸೆ ಮೂಡಿಸುವುದು ನಿಮ್ಮ ದಕ್ಷತೆಯೇ ನಿಮ್ಮ ಸೋಲಿಗೆ ದಾರಿ ಎಂಬಂತೆ ಅನೇಕ ಸಂದರ್ಭಗಳು ಸೃಷ್ಟಿಯಾಗುತ್ತದೆ.

12.10.2018ರ ನಂತರ ವೃಶ್ಚಿಕ ರಾಶಿಗೆ ಗುರು ಸಂಚಾರಿಸುವಾಗ ಕಳೆದು ಹೋದ ಘನತೆ ಗೌರವಗಳು ಪ್ರಾಪ್ತವಾಗುತ್ತದೆ ಆರ್ಥಿಕವಾಗಿ ಏಳಿಗೆಯನ್ನು ಸಾಧಿಸುವಿರಿ ಆರೋಗ್ಯದಲ್ಲಿ ಚೇತರಿಕೆ ಉಂಟಾಗುತ್ತದೆ ಅನೇಕ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ.

ಶನಿಗ್ರಹವು ನಿಮ್ಮ ರಾಶಿಗೆ 10ನೇ ಮನೆಯಲ್ಲಿ ಸಂಚರಿಸುವಾಗ ಉದ್ಯೋಗದಲ್ಲಿ ವಿಘ್ನಗಳು ಭೂಮಿ ಸಂಬಂಧ ಕೆಲಸಗಳಲ್ಲಿ ನಾಶವು ಕೆಲಸಗಳಲ್ಲಿ ಮಂದಗತಿಯು ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಕೊರತೆ ಉಂಟಾಗುವುದು ವಿನಾಕರಣ ನಷ್ಟಗಳು ವೆಚ್ಚಗಳು ಉಂಟಾಗುತ್ತದೆ.

ಮೀನ ರಾಶಿಗೆ ರಾಹುಗ್ರಹವು ಪಂಚಮದಲ್ಲಿ ಸಂಚರಿಸುವಾಗ ನಿಮ್ಮ ಮಕ್ಕಳ ಅಭಿವೃದ್ಧಿ ತೀರ ಹಿನ್ನಡೆ ಉಂಟಾಗುವುದು ನಿಮ್ಮ ಘನತೆ ಗೌರವಕ್ಕೆ ಧಕ್ಕೆ ಉಂಟಾಗುವುದು ಧನಹಾನಿಯು ದಾರಿದ್ರ್ಯವು ಅಕಾಲ ಭೋಜನವು ಪಾಪ ಕಾರ್ಯ ಮಾಡುವಿಕೆಯು ಲೋಭವು ಉಂಟಾಗುವುದು.

ಪರಿಹಾರ: ಕುಲದೇವರಿಗೆ ಅಭಿಷೇಕ ಮಾಡಿಸುವುದು ಪುಣ್ಯಕ್ಷೇತ್ರಗಳ ದರ್ಶನ ಮಾಡುವುದು.

ಶರತ್ ಶಾಸ್ತ್ರಿ
ಜ್ಯೋತಿಷ್ಯ ಪ್ರವೀಣ
9845371416

About Karnataka Express

Check Also

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಅವರಿಂದ ಈ ದಿನದ ರಾಶಿ ಭವಿಷ್ಯ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ …

Leave a Reply

Your email address will not be published. Required fields are marked *