Breaking News
Home / ಇತ್ತೀಚಿನ ಸುದ್ದಿಗಳು / ಹಾಲಿವುಡ್ ಸ್ಟಾರ್ ಕರ್ನಾಟಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾಯಿತು, ಈಗ ಖ್ಯಾತ ಉದ್ಯಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..!

ಹಾಲಿವುಡ್ ಸ್ಟಾರ್ ಕರ್ನಾಟಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾಯಿತು, ಈಗ ಖ್ಯಾತ ಉದ್ಯಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..!

ಹೌದು ಕೆಲವು ದಿನಗಳ ಹಿಂದೆ ಟೈಟಾನಿಕ್ ಖ್ಯಾತಿಯ ನಾಯಕ ಲಾಸ್ ಏಂಜಲೀಸ್ ಟೈಮ್ಸ್ ನಲ್ಲಿ ಕರ್ನಾಟಕದ ಪಾವಗಡದ ಸೋಲಾರ್ ಪಾರ್ಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು, ಅದಲ್ಲದೆ ಆಸ್ಟ್ರೇಲಿಯಾ ಕೂಡ ಇದರ ಮಾದರಿಯಲ್ಲಿ ಸೋಲಾರ್ ಪಾರ್ಕ್ ನಿರ್ಮಿಸಲು ಮುಂದಾಗಿದೆ.

ಹೀಗೆ ಇನ್ನು ಹಲವಾರು ಮೆಚ್ಚುಗೆಗೆ ಪಾತ್ರವಾದ ಯೋಜನೆಗಳು ಸಿದ್ಧರಮಯ್ಯ ಸರಕಾರದಿಂದ ಆಗಿವೆ ಈಗ ಅದೇ ರೀತಿ ನಮ್ಮ ದೇಶದ ಖ್ಯಾತ ಕಾರು ತಯಾರಕ ಉದ್ಯಮಿಯಾದ ಆನಂದ್ ಮಹೀಂದ್ರಾ ರವರು ಬೆಂಗಳೂರಿನ ಟೆಂಡರ್ ಶ್ಯೂರ್ ರಸ್ತೆಗಳ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

ಇದರ ಬಗ್ಗೆ ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾರವರು ನಾನು ಬೆಂಗಳೂರಿನ ಸೈಂಟ್ ಮಾರ್ಕ್ಸ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್’ಗೆ ಭೇಟಿ ನೀಡಿದ್ದೆ. ಪಾದಾಚಾರಿಗಳಿಗೆ ರಸ್ತೆಗಳನ್ನು ಮರಳಿಪಡೆಯುವ ಚಳುವಳಿ ಆರಂಭವಾಗಿದೆಯೆಂದು ಅನಿಸುತ್ತದೆ. ಈ ನಡೆ ಪ್ರಶಾಂಸಾರ್ಹ. ನಾನು ಕಾರು ತಯಾರಕನಾಗಿರಬಹುದು, ಆದರೆ ನಗರಗಳು ಜನಸ್ನೇಹಿಯಾಗಿರಬೇಕು ಎಂಬುವುದರಲ್ಲಿ ವಿಶ್ವಾಸವಿಟ್ಟವನು ನಾನು, ಆ ನಿಟ್ಟಿನಲ್ಲಿ ‘ಪಾದಾಚಾರಿ ಮಾತ್ರ’ ಸೌಲಭ್ಯಗಳು ಮುಖ್ಯ. ಎಂದು ಟ್ವೀಟ್ ನಲ್ಲಿ ಹೇಳುವ ಮೂಲಕ ಬೆಂಗಳೂರಿನ ರಸ್ತೆಗಳ ಬಗ್ಗೆ ಪ್ರಶಂಶೆಯನ್ನು ವ್ಯಕ್ತಪಡಿಸಿದ್ದಾರೆ.

ಇದು ಒಟ್ಟಾರೆ ಕರ್ನಾಟಕ ಸರಕಾರದ ಕಾರ್ಯವೈಖರಿಗೆ ಸಲ್ಲಿದ ಮೆಚ್ಚುಗೆ ಎಂದು ಹೇಳಬಹುದಾಗಿದೆ.

About Karnataka Express

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *