Breaking News
Home / ಇತ್ತೀಚಿನ ಸುದ್ದಿಗಳು / ದಾಖಲೆ ನಿರ್ಮಿಸಲು ಸಿದ್ದವಾದ ಸಿದ್ದರಾಮಯ್ಯ..!

ದಾಖಲೆ ನಿರ್ಮಿಸಲು ಸಿದ್ದವಾದ ಸಿದ್ದರಾಮಯ್ಯ..!

ಎಸ್, ಸಿಎಂ ಸಿದ್ದರಾಮಯ್ಯನವರು ಇತ್ತೀಚಿಗೆ ಯಾರು ಮಾಡದ ದಾಖಲೆಯೊಂದನ್ನು ೪೦ ವರ್ಷಗಳ ನಂತರ ಸಿಎಂ ಸಿದ್ದರಾಮಯ್ಯ ಮಾಡಲಿದ್ದಾರೆ. ಯಾವ ದಾಖೆಲೆ ಏನು ಸುದ್ದಿ ಅನ್ನೋದು ಇಲ್ಲಿದೆ ನೋಡಿ.

ಕರ್ನಾಟಕ ವಿಧಾನಸಭಾ ಚುನಾವಣೆ ಇನ್ನು ಕೇವಲ ನಾಲ್ಕೈದು ತಿಂಗಳು ಬಾಕಿ ಇದೆ. ಈ ನಡುವೆ ಸಿದ್ದು ಒಂದು ದಾಖಲೆ ಬರೆಯೋದು ನಿಶ್ಚಿತ ಅನ್ನೋದು ಪಕ್ಕ ಆಗಿದೆ. ಹೌದು ಈ ಹಿಂದೆ ದೇವರಾಜು ಅರಸು ಮುಖ್ಯಮಂತ್ರಿಯಾಗಿ ಒಂದು ಅವಧಿಯನ್ನು ಪೂರ್ಣ ಮಾಡಿದ್ದರು. ಅಂದರೆ ಐದು ವರ್ಷಗಳ ಕಾಲ ಅಧಿಕಾರ ನಡೆಸಿದ ಮುಖ್ಯಮಂತ್ರಿ ಎಂಬ ಪಟ್ಟ ಅಲಂಕರಿಸಿದ ಮುಖ್ಯಮಂತ್ರಿ ಎಂಬ ಬಿರುದು ಪಡೆದಿದ್ದರು.


ದೇವರಾಜು ಅರಸು ಅವರು ೧೯೭೮ ರಲ್ಲಿ ಮತ್ತೆ ಅಧಿಕಾರಕ್ಕೆ ಬಂದರು ಸಹ ಪೂರ್ಣ ಅವಧಿಯ ಅಧಿಕಾರವನ್ನು ನಡೆಸಲು ಸಾಧ್ಯವಾಗಲಿಲ್ಲ. ಕೇವಲ ಎರಡು ವರ್ಷಗಳಲ್ಲಿ ತಮ್ಮ ಅಧಿಕಾರವಾದಿಯನ್ನು ಕಳೆದುಕೊಂಡು. ನಂತರ ೧೯೯೯ ರಲ್ಲಿ ಎಸ್ ಎಂ ಕೃಷ್ಣ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾದರು. ಆದರೆ ಅವರು ಐದು ಪೂರ್ಣಗೊಳಿಸುವ ಮೊದಲೇ ನಾಲ್ಕು ತಿಂಗಳು ಇರುವಾಗಲೇ ಚುನಾವಣೆಗೆ ಹೋಗಿ ಅಧಿಕಾರವನ್ನು ಕಳೆದುಕೊಂಡರು.

ಕರ್ನಾಟಕದಲ್ಲಿ ಇದುವರೆಗೂ ೧೯ ಸರ್ಕಾರಗಳು ಬಂದಿವೆ ಆದ್ರೆ ಐದು ವರ್ಷ ಅವಧಿಯನ್ನು ಪೂರ್ಣಗೊಳಿಸಿದ ಮುಖ್ಯಮಂತ್ರಿ ಅಂದ್ರೆ ದೇವರಾಜು ಅರಸು ಅವರು ಅದಾದ ಮೇಲೆ ಯಾರು ಸಹ ಈ ದಾಖಲೆಯನ್ನು ಮಾಡಲಿಲ್ಲ. ಇದೀಗ ಇದು ಸಿಎಂ ಸಿದ್ದರಾಮಯ್ಯ ಪಾಲಾಗುತ್ತಿದೆ. ಕರ್ನಾಟಕದಲ್ಲಿ ೪೦ ವರ್ಷಗಳ ಬಳಿಕ ಐದು ವರ್ಷ ಅಧಿಕಾರಾವಧಿ ಪೂರ್ಣಗೊಳಿಸಿದ ಎರಡನೇ ಮುಖ್ಯಮಂತ್ರಿ ಎಂಬ ದಾಖಲೆ ಬರೆಯಲು ಸಿದ್ದರಾಮಯ್ಯ ಸಿದ್ಧವಾಗಿದ್ದಾರೆ.

About admin

Check Also

ಯಡಿಯೂರಪ್ಪಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ..!

ಹೌದು ಇದೇನಪ್ಪ ಯಡಿಯೂರಪ್ಪಗೆ ಕುಮಾರಸ್ವಾಮಿ ಕುರ್ಚಿ ಬಿಟ್ಟುಕೊಟ್ಟಿದ್ದಾರೆ ಅಂದ್ರೆ ಎಲ್ಲರು ಶಾಕ್ ಆಗುವ ವಿಚಾರವೇ ಈ ಎಲ್ಲ ನಾಯಕರು ಚುನಾವಣೆ …

Leave a Reply

Your email address will not be published. Required fields are marked *