Breaking News
Home / ಇತ್ತೀಚಿನ ಸುದ್ದಿಗಳು / ತಮಿಳು ದಿನಪತ್ರಿಕೆ ‘ದಿ ಹಿಂದೂ ತಮಿಳ್’ ನಲ್ಲಿ ಸಿಎಂ ಸಿದ್ದರಾಮಯ್ಯ ಮಿಂಚಿಗ್ ಯಾವ ಕಾರಣಕ್ಕೆ ಗೊತ್ತಾ..?

ತಮಿಳು ದಿನಪತ್ರಿಕೆ ‘ದಿ ಹಿಂದೂ ತಮಿಳ್’ ನಲ್ಲಿ ಸಿಎಂ ಸಿದ್ದರಾಮಯ್ಯ ಮಿಂಚಿಗ್ ಯಾವ ಕಾರಣಕ್ಕೆ ಗೊತ್ತಾ..?

ತಮಿಳು ದಿನಪತ್ರಿಕೆ ‘ದಿ ಹಿಂದೂ ತಮಿಳ್’ ದಲ್ಲಿ ಸಂಪಾದಕ ಸಮಸ್ ರವರ ಸಂಪಾದಕೀಯದಲ್ಲಿ ಸಿದ್ದರಾಮಯ್ಯನವರ ಗುಣಗಾನ.

ಸಿದ್ದರಾಮಯ್ಯ – ರಾಜ್ಯಗಳಿಂದ ಹೊಮ್ಮಿದ ರಾಷ್ಟ್ರನಾಯಕ

ಮುಖ್ಯಾಂಶಗಳು :
• ಸ್ವತಂತ್ರ ಭಾರತದ ಎಂದೂ ಮರೆಯಲಾಗದ ನಾಯಕ
• ಸಮಕಾಲೀನ ನಾಯಕರಲ್ಲಿ ದಲಿತರ ಪರವಾಗಿ ಕೆಲಸ ಮಾಡುತ್ತಿರುವ
ಶ್ರೇಷ್ಠ ನಾಯಕ
• ನಮ್ಮ ಕಾಲದ ಪ್ರಜಾಸತ್ತೆಯ ಮೌಲ್ಯಗಳನ್ನು ಎತ್ತಿಹಿಡಿಯಲು ತುಂಬ ವಿಶಿಷ್ಟ
ಮತ್ತು ಧೀಮಂತ ಹೆಜ್ಜೆಗಳನ್ನಿರಿಸಿದ ಧೈರ್ಯಶಾಲಿ ನಾಯಕ
• ರಾಷ್ಟ್ರೀಯ ಕಾಂಗ್ರೆಸ್ ಗೆ ಹೊಸ ಚೈತನ್ಯ ತುಂಬಬಲ್ಲ ಸಮರ್ಥ ನಾಯಕ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ತುಂಬ ಖುಷಿ ಎನಿಸುತ್ತಿದೆ, ಅವರ ಕಲ್ಪನೆಗೂ ನಿಲುಕದ ದೃಷ್ಟಿಕೋನದ ಬಗ್ಗೆ ಹೆಮ್ಮೆ ಹುಟ್ಟುತ್ತಿದೆ. ಮುಖ್ಯಮಂತ್ರಿಯವರ ಬಗೆಗಿನ ತಮಿಳು ದಿನಪತ್ರಿಕೆಯೊಂದರ ಈ ಸಂಪಾದಕೀಯ ತಮಿಳು ನಾಡು ಮತ್ತು ದಕ್ಷಿಣ ಭಾರತದ ಜನಸಾಮನ್ಯರಲ್ಲಿ ಸಾಮೂಹಿಕ ಆಶ್ಚರ್ಯ ಮತ್ತು ಮಹಾತ್ವಾಕಾಂಕ್ಷೆಯ ಅಲೆಯನ್ನೇ ಹುಟ್ಟುಹಾಕಲಿದೆ ಮತ್ತು ಸಿದ್ದರಾಮಯ್ಯನವರ ಕುರಿತ ಅಭಿಮಾನವನ್ನು ಎಲ್ಲೆಡೆ ಅನುರಣನಗೊಳ್ಳುವಂತೆ ಮಾಡಲಿದೆ.

ನಾವು ನಮ್ಮ ಸಭೆಯಲ್ಲಿ ಪ್ರಸ್ತುತಪಡಿಸಿದಂತೆ “ಇಡೀ ದಕ್ಷಿಣ ಭಾರತವನ್ನು ಬಿಜೆಪಿಯಿಂದ ರಕ್ಷಿಸಬಲ್ಲ ಒಬ್ಬನೇ ನಾಯಕ ಸಿದ್ದರಾಮಯ್ಯ” ಎಂದು ಇಡೀ ದಕ್ಷಿಣ ಭಾರತದ ಜನಸಾಮಾನ್ಯ ವಲಯ ನಂಬುತ್ತಿದೆ ಮತ್ತು ಅಭಿಮಾನಪಡುತ್ತಿದೆ. ದಕ್ಷಿಣ ಭಾರತದ ಬಹುಮುಖ್ಯ ನಾಯಕರಾದ ಕರುಣಾನಿಧಿ ಮತ್ತು ಜಯಲಲಿತಾರಂತಹ ಪ್ರಬಲ ನಾಯಕರ ಅನುಪಸ್ಥಿತಿಯಲ್ಲಿ ಸಿದ್ದರಾಮಯ್ಯನವರ ಸಾಮಾಜಿಕ ನ್ಯಾಯದ ಕುರಿತ ಬದ್ಧತೆ, ಪ್ರಜಾಸತ್ತೆಯ ಕುರಿತ ಗಟ್ಟಿ ಧ್ವನಿ ಮತ್ತು ಪ್ರಾದೇಶಿಕ ಮತ್ತು ಭಾಷಿಕ ಅನನ್ಯತೆಯ ಸಂರಕ್ಷಣೆ ಮುಂತಾದ ಗಟ್ಟಿ ನಿರ್ಧಾರಗಳು ಈ ಕಾಲಕ್ಕೆ ಸಿದ್ದರಾಮಯ್ಯನವರು ನೀಡಿದ ಬಹಳ ಮುಖ್ಯವಾದ ಕೊಡುಗೆಗಳಾಗಿವೆ.

‘ದಿ ಹಿಂದು ತಮಿಳ್’ ದಿನಪತ್ರಿಕೆಯ ಸಂಪಾದಕೀಯವು “ ಕೇವಲ ತಮಿಳು ನಾಡು ಮಾತ್ರವಲ್ಲ, ಇಡೀ ದೇಶವೇ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಮಾಜಿಕ ನ್ಯಾಯದ ಕುರಿತ ಬದ್ಧತೆ ಮತ್ತು ಪ್ರಜಾಸತ್ತಾತ್ಮಕ ಆಡಳಿತದ ಅನನ್ಯತೆಯನ್ನು ಕಲಿಯಬೇಕು” ಎಂದು ಅಭಿಪ್ರಾಯಪಟ್ಟಿದೆ.

ಮಿ.ಸಮಸ್ ರವರು ನಮ್ಮ ದಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಆಂದ್ರಪ್ರದೇಶ, ತೆಲಂಗಾಣ ಮತ್ತು ಕೇರಳದ ಮುಖ್ಯಮಂತ್ರಿಗಳಾದ ಸಿಬಿಎನ್, ಟಿಆರ್ ಎಸ್ ಮತ್ತು ಪಿವಿ ಯವರಿಗಿಂತ ಎತ್ತರದ ಸ್ಥಾನದಲ್ಲಿಟ್ಟು ಗೌರವಿಸಿದ್ದಕ್ಕೆ ಖುಷಿಯಾಗುತ್ತಿದೆ. ಅಲ್ಲದೇ ಇಡೀ ದೇಶದ ತುಂಬ ಕಾಂಗ್ರೆಸ್ಸಿಗೆ ಹೊಸ ಚೈತನ್ಯವನ್ನು ತುಂಬಬಲ್ಲ ಸಾಧ್ಯತೆ ಕರ್ನಾಟಕದಿಂದ ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟಿರುವುದು ಸಂಭ್ರಮವನ್ನು ಹುಟ್ಟಿಸಿದೆ.
ಸಂಗ್ರಹ ಸುದ್ದಿ.

About Karnataka Express

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *