Breaking News
Home / ಆರೋಗ್ಯ / ಪಿತ್ತ ಭೇದಿ ಇನ್ನು ಹಲವಾರು ಸಮಸ್ಯೆಗಳಿಗೆ ನೇರಳೆ ರಾಮಬಾಣವಾಗಿದೆ..!

ಪಿತ್ತ ಭೇದಿ ಇನ್ನು ಹಲವಾರು ಸಮಸ್ಯೆಗಳಿಗೆ ನೇರಳೆ ರಾಮಬಾಣವಾಗಿದೆ..!

ಹೌದು ನೇರಳೆ ಹಣ್ಣು ಎಂದರೆ ಎಂತವರಿಗೂ ಬಾಯಲ್ಲಿ ನೀರು ಬರುವುದು ಸಹಜ ಮತ್ತು ನೇರಳೆ ಹಣ್ಣು ಎಂದರೆ ಮಹಿಳೆಯರಿಗೆ ತುಂಬಾ ಇಷ್ಟ, ಅಷ್ಟೇ ಅಲ್ಲದೆ ನೇರಳೆ ಹಣ್ಣಿನಲ್ಲಿ ಹಲವಾರು ರೀತಿಯ ರೋಗ ನಿವಾರಕ ಗುಣಗಳು ಸಹ ಅಡಗಿವೆ.

ನೇರಳೆಯ ಆರೋಗ್ಯಕಾರಿ ಲಾಭಗಳೆಂದರೆ:

೧. ನೇರಳೆ ಹಣ್ಣಿನ ರಸದ ಜೊತೆಗೆ ನೇರಳೆ ಮರದ ತೊಗಟೆಯ ಕಷಾಯವನ್ನು ಮಾಡಿ ಕುಡಿದರೆ ಭೇದಿ ನಿವಾರಣೆಯಾಗುತ್ತದೆ.

೨. ನೇರಳೆ ಎಲೆಯನ್ನು ಅಗಿದು ಅದರ ರಸವನ್ನು ಸೇವಿಸಿದರೆ ಬಾಯಿ ಹುಣ್ಣು ಸಮಸ್ಯೆ ನಿವಾರಣೆಯಾಗುತ್ತದೆ.

೩. ಮುಖದಲ್ಲಿ ಮೊಡವೆ ಸಮಸ್ಯೆ ಇದ್ದರೆ ನೇರಳೆ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಅದನ್ನು ಹಾಲಿನಲ್ಲಿ ಕಲಸಿ ಮೊಡವೆಗಳಿಗೆ ಲಿಪಿಸಿದರೆ ನಿವಾರಣೆಯಾಗುತ್ತವೆ.

೪. ವಸಡಿನಲ್ಲಿ ರಕ್ತಸ್ರಾವದ ಸಮಸ್ಯೆಯಿದ್ದರೆ ನೇರಳೆ ಮರದ ತೊಗಟೆಯನ್ನು ಪುಡಿ ಮಾಡಿ ಕಷಾಯ ಮಾಡಿ ಅದನ್ನು ಬಾಯಿಯಲ್ಲಿ ಮುಕ್ಕಳಿಸಿದರೆ ನಿವಾರಣೆಯಾಗುತ್ತದೆ.

೫.ನೇರಳೆ ಎಲೆಗಳಿಂದ ಜ್ಯೂಸ್ ಮಾಡಿ ಸೇವಿಸಿದರೆ ರಕ್ತ ಸ್ರಾವ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ.

೬. ನೇರಳೆ ಬೀಜದ ಪುಡಿಗೆ ಅರಿಶಿನ ಬೆರೆಸಿ ಪೇಸ್ಟ್‌ ಮಾಡಿ. ಅದನ್ನು ಚರ್ಮದ ಮೇಲಿನ ಕಲೆಗಳಿಗೆ ಹಚ್ಚಿದರೆ ಕಲೆಗಳು ನಿವಾರಣೆಯಾಗುತ್ತದೆ.

೭. ನೇರಳೆ ಹಣ್ಣಿನ ರಸಕ್ಕೆ ಕಲ್ಲುಸಕ್ಕರೆ ಬೆರಸಿ ಸೇವಿಸಿದರೆ ಪಿತ್ತದ ಸಮಸ್ಯೆ ಶಮನವಾಗುತ್ತದೆ.

ಹೀಗೆ ಹಲವಾರು ಆರೋಗ್ಯಕಾರಿ ಲಾಭಗಳು ನೇರಳೆಯಲ್ಲಿ ಅಡಗಿವೆ.

About Karnataka Express

Check Also

ಹುಳುಕಡ್ಡಿ ಸಮಸ್ಯೆಗೆ ನೇರಳೆಯಲ್ಲಿ ಅಡಗಿದೆ ಓಷಧಿ ಗುಣಗಳು..!

ನಮಗೆ ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು …

Leave a Reply

Your email address will not be published. Required fields are marked *