Breaking News
Home / ಇತ್ತೀಚಿನ ಸುದ್ದಿಗಳು / ಒಂದು ಲಕ್ಷದ ಭಾಗ್ಯಲಕ್ಷ್ಮಿ ಯೋಜನೆಯನ್ನು ಹೇಗೆ ಪಡೆದುಕೊಳ್ಳೋದು ಅನ್ನೋದು ಇಲ್ಲಿದೆ ನೋಡಿ..!

ಒಂದು ಲಕ್ಷದ ಭಾಗ್ಯಲಕ್ಷ್ಮಿ ಯೋಜನೆಯನ್ನು ಹೇಗೆ ಪಡೆದುಕೊಳ್ಳೋದು ಅನ್ನೋದು ಇಲ್ಲಿದೆ ನೋಡಿ..!

ಶಾಶ್ವತ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡಿರತಕ್ಕಂತಹ ಬಡತನ ರೇಖೆಗಿಂತ ಕೆಳಗಿರುವ(BPL) ಮೂರು ಮಕ್ಕಳಿರುವ BPL ಕುಟುಂಬಗಳ ಮೊದಲ ಎರಡು ಹೆಣ್ಣು ಮಕ್ಕಳಿಗೆ ಈ ಸೌಲಭ್ಯ ದೊರೆಯುತ್ತಿದೆ. ರೂ.೧೯,೩೦೦/- ಮೊತ್ತ ನಿರಖು ಠೇವಣಿಯನ್ನು ಮೊದಲ ಮಗುವಿನ ಹೆಸರಿನಲ್ಲಿಡಲಾಗುವುದು ಮತ್ತು ಎರಡನೇಯ ಮಗುವಿನ ಹೆಸರಿನಲ್ಲಿ ರೂ.೧೮,೩೫೦/- ಇಡಲಾಗುವುದು. ಮತ್ತು ಮಗುವಿಗೆ ೧೮ ವರ್ಷ ಪೂರ್ಣಗೊಂಡ ನಂತರ ಮೊದಲ ಮಗುವಿಗೆ ರೂ.೧,೦೦,೦೯೭/- ಮತ್ತು ಎರಡನೇಯ ಮಗುವಿಗೆ ರೂ.೧,೦೦,೦೫೨/- ಮೊತ್ತ ನೀಡಲಾಗುತ್ತದೆ.

ಈ ಮಗುವಿಗೆ ೧೫ ವರ್ಷ ತುಂಬಿದ ನಂತರ ೧೦ನೇ ತರಗತಿಯಲ್ಲಿ ಉತ್ತಿರ್ಣಳಾಗಿ, ಮುಂದಿನ ವಿದ್ಯಾಬ್ಯಾಸಕ್ಕಾಗಿ ಈ ಭಾಗ್ಯಲಕ್ಷ್ಮಿ ಬಾಂಡನ್ನು ಅಂಗೀಕೃತ ಬ್ಯಾಂಕ್ಗಳಲ್ಲಿ ಅಡಮಾನವಿರಿಸಿ, ಗರಿಷ್ಠ ರೂ.೫೦,೦೦೦/- ಸಾಲ ಪಡೆಯಬಹುದಾಗಿದೆ.

ಈ ಯೋಜನೆಯನ್ನು ಅಂಗನವಾಡಿ ಕೇಂದ್ರಗಳ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ.

ಈ ಯೋಜನೆಯಡಿಯಲ್ಲಿ ಇತರ ಅರ್ಹತೆಯ ಅಂಶಗಳು:

೧) ಮಗುವಿನ ಜನನವನ್ನು ಖಡ್ಡಾಯವಾಗಿ ನೋಂದಾಯಿಸಿರಬೆಕು.
೨) ಆರೋಗ್ಯ ಇಲಾಖೆಯ ಕಾರ್ಯಕ್ರಮದಂತೆ ರೋಗ ನಿರೋಧಕ ಲಸಿಕೆ ಹಾಕಿಸಿರಬೆಕು.
೩) ಅಂಗನವಾಡಿ ಕೇಂದ್ರಕ್ಕೆ ನೊಂದಾವಣೆ ಆಗಿರಬೆಕು.


೪) ಶಿಕ್ಷಣ ಇಲಾಖೆಯು ನೋಂದಾಯಿಸಿದ ಶಾಲೆಗಳಲ್ಲಿ ಮಗುವನ್ನು ಶಾಲೆಗೆ ದಾಖಲಿರಿಸಬೆಕು.
೫) ಮಗು ಬಾಲಕಾರ್ಮಿಕಳಾಗಿರಬಾರದು.
೬) ೧೮ ವರ್ಷತನಕ ವಿವಾಹವಾಗಬಾರದು.

About Karnataka Express

Check Also

ಮೋದಿಯ ಕನಸಿನ ಯೋಜನೆಯಾದ ಅಂಚೆ ಬ್ಯಾಂಕ್ ಖಾತೆ ತೆಗೆಯೋದು ಹೇಗೆ..!

ಹೌದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌’ಗೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಚಾಲನೆ ನೀಡಿದ್ದಾರೆ. …

Leave a Reply

Your email address will not be published. Required fields are marked *