Breaking News
Home / ಇತ್ತೀಚಿನ ಸುದ್ದಿಗಳು / ಸುಂದರ ಕೂದಲಿಗಾಗಿ ಜಾಹೀರಾತುಗಳಿಗೆ ಮೊರೆಹೋಗದೆ ನೈಸರ್ಗಿಕ ವಿಧಾನದಲ್ಲಿ ಮನೆಯಲ್ಲೇ ಎಣ್ಣೆ, ಶಾಂಪೂ ತಯಾರಿಸುವ ವಿಧಾನ ಇಲ್ಲಿದೆ..!

ಸುಂದರ ಕೂದಲಿಗಾಗಿ ಜಾಹೀರಾತುಗಳಿಗೆ ಮೊರೆಹೋಗದೆ ನೈಸರ್ಗಿಕ ವಿಧಾನದಲ್ಲಿ ಮನೆಯಲ್ಲೇ ಎಣ್ಣೆ, ಶಾಂಪೂ ತಯಾರಿಸುವ ವಿಧಾನ ಇಲ್ಲಿದೆ..!

ಸುಂದರ ಕೂದಲು ಯಾರಿಗೆ ತಾನೆ ಬೇಡ? ತಲೆಗೂದಲು ಉದುರುವ ಕಿರಿಕಿರಿ ಮಹಿಳೆಯರು ಮಾತ್ರವಲ್ಲದೇ ಪುರುಷರೂ ಅನುಭವಿಸುವಂಥದ್ದೇ. ಕೂದಲು ಸಮೃದ್ಧವಾಗಿ ಬೆಳೆಯಲಿ ಎಂದು ಕಂಡ ಕಂಡ ಜಾಹೀರಾತುಗಳಿಗೆ ಮರುಳಾಗಿ ಮಾರುಕಟ್ಟೆಯಲ್ಲಿ ಸಿಗುವ ಯಾವ್ಯಾವುದೋ ಶಾಂಪೂ, ಎಣ್ಣೆ ಖರೀದಿಸುವುದು ಸಾಮಾನ್ಯ. ಇನ್ನು ಮುಂದೆ ಇದರ ಖರೀದಿ ಬಿಡಿ. ನೈಸರ್ಗಿಕ ವಿಧಾನದಲ್ಲಿಯೇ ಮನೆಯಲ್ಲೇ ಎಣ್ಣೆ, ಶಾಂಪೂ ತಯಾರಿಸಿ.

ತಲೆಸ್ನಾನ ಮಾಡುವ ಮುನ್ನಾ ದಿನ ಪುದೀನ, ಕರಿಬೇವು, ಮೆಂತ್ಯ ಹಾಗೂ ಹೊನಗಣೆ ಸೊಪ್ಪನ್ನು ಸೇರಿಸಿ ಚೆನ್ನಾಗಿ ರುಬ್ಬಿ. ಇದನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಕಲಸಿ ತುಸು ಬಿಸಿ ಮಾಡಿ ಇಟ್ಟುಕೊಳ್ಳಿ. ಇದನ್ನು ಸ್ನಾನ ಮಾಡುವ ಒಂದೆರಡು ಗಂಟೆ ಮುಂಚೆ ಹಚ್ಚಿಕೊಳ್ಳಿ. ಸೀಗೆಕಾಯಿ ಪುಡಿ ಅಥವಾ ಅಂಟವಾಳಕಾಯಿ ಪುಡಿಯನ್ನು ಹಾಕಿ ಸ್ನಾನ ಮಾಡಿ.

ಹೀಗೆ ಪ್ರತಿಸಾರಿ ಮಾಡಿದರೆ ಏನೆಲ್ಲಾ ಅನುಕೂಲ ಇವೆ ಗೊತ್ತೆ? ಕರಿಬೇವಿನಿಂದ ಕೂದಲು ಬೇಗನೇ ನೆರೆಯಾಗುವುದನ್ನು ತಪ್ಪಿಸಬಹುದು. ಮೆಂತ್ಯ ಸೊಪ್ಪು ತಲೆಹೊಟ್ಟನ್ನು ನಿವಾರಿಸುತ್ತದೆ. ಹೊನಗಣೆ ಸೊಪ್ಪು ತಲೆಯನ್ನು ತಂಪಾಗಿಸುವುದರ ಜೊತೆ ಉಷ್ಣದಿಂದ ಕೂದಲು ಉದುರುತ್ತಿದ್ದರೆ ತಡೆಯುತ್ತದೆ. ಇದೇ ಶಕ್ತಿ ಪುದೀನದಲ್ಲೂ ಇದೆ.

ಕೂದಲು ಒರಟು ಒರಟು ಎನ್ನಿಸಿದರೆ ಹೀಗೆ ಮಾಡಿ: ಮನೆಯಲ್ಲಿ ಅಡುಗೆ ಸೋಡ ಅಂತೂ ಇದ್ದೇ ಇರುತ್ತದೆ. ನಾಲ್ಕೈದು ಚಮಚದಷ್ಟು ಅಡುಗೆ ಸೋಡಾವನ್ನು ನೀರಿನೊಂದಿಗೆ ಮಿಕ್ಸ್‌ ಮಾಡಿ. ತಲೆಸ್ನಾನ ಮಾಡಿದ ಕೂಡಲೇ ಇದನ್ನು ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಪುನಃ ತಣ್ಣೀರಿನಿಂದ ತೊಳೆದುಕೊಳ್ಳಿ. ನೆನಪಿರಲಿ, ಸ್ನಾನ ಮಾಡುವಾಗ ಮಾರುಕಟ್ಟೆಯಲ್ಲಿ ಖರೀದಿಸಿದ ಶಾಂಪೂ ಬಳಸಬೇಡಿ!

ಒಂದು ಅಥವಾ ಎರಡು ನೆಲ್ಲಿಕಾಯಿಗಳ ಬೀಜ ತೆಗೆದು ನುಣ್ಣಗೆ ಅರೆಯಿರಿ. ಇದಕ್ಕೆ ಕೆಲವು ಹನಿ ರೋಸ್‌ ವಾಟರ್‌ ಸೇರಿಸಿ. ಇದನ್ನು ಸ್ನಾನ ಮಾಡುವಾಗ ಲೇಪಿಸುವುದರಿಂದಲೂ ಸಾಫ್ಟ್‌ ಕೂದಲನ್ನು ಪಡೆಯಬಹುದು. ಲೋಳೆಸರದ ಔಷಧೀಯ ಗುಣ ಗೊತ್ತಲ್ಲವೆ? ಕೂದಲಿಗೂ ಇದು ಪ್ರಯೋಜನಕಾರಿ. ಇದರ ರಸವನ್ನು ಕೂದಲ ಬುಡಕ್ಕೆ ಹಚ್ಚಿ. ಉಗುರುಬೆಚ್ಚನೆಯ ನೀರಿನಿಂದ ಕೂದಲು ಸ್ವಚ್ಛಗೊಳಿಸಿ.

ಮೊದಲೇ ಹೇಳಿದ ಹಾಗೆ ಇವೆಲ್ಲಾ ಮಾಡುವಾಗ ಅಂಟುವಾಳ ಕಾಯಿ ಅಥವಾ ಸೀಗೇಕಾಯಿಯನ್ನೇ ತಲೆ ಸ್ನಾನ ಮಾಡುವಾಗ ಉಪಯೋಗಿಸಿ. ಇವು ಪುಡಿಯಾಗಿದ್ದರೆ ನೀರಿನಲ್ಲಿ ನೆನೆಸಿ ಸ್ನಾನ ಮಾಡುವಾಗ ಬಳಸಿ. ಕಾಯಿಯಾಗಿದ್ದರೆ ಪುಡಿಮಾಡಿ ಸ್ವಲ್ಪ ಹೊತ್ತು ನೆನೆಸಿಟ್ಟು ಬಳಿಕ ಕೂದಲಿಗೆ ಹಚ್ಚಿ.

ಕೊತ್ತಂಬರಿ ಸೊಪ್ಪನ್ನು ಪೇಸ್ಟ್ ಮಾಡಿ ಅದನ್ನು ಮೊಸರಿನ ಜೊತೆ ಮಿಕ್ಸ್ ಮಾಡಿ ತಲೆಗೆ ಹಚ್ಚಿದರೆ ಕೂದಲಿಗೆ ಒಳ್ಳೆಯದು.
ಸಂಗ್ರಹ ಮಾಹಿತಿ

About Karnataka Express

Check Also

ನಿಮಗೆ ಕಾಲಿನ ಹಿಮ್ಮಡಿ ಬಿರುಕು ಸಮಸ್ಯೆಯೇ ಹಾಗಾದರೆ ಹೀಗೆ ಮಾಡಿ..!

ಹೌದು ಕೆಲವರಿಗೆ ಚಳಿಗಾಲ ಅಥವಾ ಹೆಚ್ಚು ಉಷ್ಣ ಆದರೆ ಕಾಲಿನ ಹಿಮ್ಮಡಿ ಹೊಡೆಯುವ ಸಮಸ್ಯೆ ಇರುತ್ತದೆ ಅದರಿಂದ ನೆಡೆದಾಡಲು ತುಂಬಾ …

Leave a Reply

Your email address will not be published. Required fields are marked *