Breaking News
Home / ಇತ್ತೀಚಿನ ಸುದ್ದಿಗಳು / ಅಲ್ಲಿನ ಜನ ಈ ಹುಡುಗನನ್ನು ನಿಜವಾದ ಬಾಹುಬಲಿ ಅಂತಾರೆ, ಅಮ್ಮನ ಪ್ರೀತಿಗಾಗಿ ಈ ಹುಡುಗ ಮಾಡಿದ್ದೇನು ಗೊತ್ತಾ..!

ಅಲ್ಲಿನ ಜನ ಈ ಹುಡುಗನನ್ನು ನಿಜವಾದ ಬಾಹುಬಲಿ ಅಂತಾರೆ, ಅಮ್ಮನ ಪ್ರೀತಿಗಾಗಿ ಈ ಹುಡುಗ ಮಾಡಿದ್ದೇನು ಗೊತ್ತಾ..!

ಹೌದು ಅಮ್ಮನ ಪ್ರೀತಿ ಅನ್ನೋದೇ ಹಾಗೆ ಈ ಜಗತ್ತಿನಲ್ಲಿ ಎಲ್ಲರ ಪ್ರೀತಿಗಿಂತ ದೊಡ್ಡ ಪ್ರೀತಿ ಅಂದ್ರೆ ಅದು ಅಮ್ಮನ ಪ್ರೀತಿ ಈ ಪ್ರೀತಿಗೆ ತನ್ನ ಮಗ ಮಾಡಿದ ಕೆಲಸ ಎಂತದ್ದು ಅನ್ನೋದು ಇಲ್ಲಿದೆ ನೋಡಿ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶೆಟ್ಟಿಸಾರ ಗ್ರಾಮದ 15 ವರ್ಷದ ಹುಡುಗ ಪವನ್ ಕುಮಾರ್ ತನ್ನ ತಾಯಿ ನೀರು ತರಲು ತುಂಬಾನೇ ಕಷ್ಟ ಪಡುತ್ತಿದ್ದರು ಆಗಾಗಿ ತನ್ನತಾಯಿ ಪ್ರತಿ ದಿನ ಪಡುವ ಕಷ್ಟ ನೋಡಲಾರದೆ ತಾನು ಬಾವಿಯನ್ನು ಅಗೆದು ನೀರು ತೆಗೆದಿದ್ದಾನೆ. ನಿಜಕ್ಕೂ ಈ ಸ್ಟೋರಿ ಇತರರಿಗೂ ಸ್ಪೂರ್ತಿ ಅಂತಾನೆ ಹೇಳಬಹುದು.

ಇದರ ಕುರಿತು 15 ವರ್ಷದ ಈ ಪೋರ ಹೇಳೋ ಮಾತುಗಳೇನು ಗೋತ್ತಾ .?
ನನ್ನ ಅಮ್ಮ ಪ್ರತಿ ದಿನ ನೀರು ತರಲು ದೂರದ ಸ್ಥಳಕ್ಕೆ ಹೋಗ ಬೇಕಾಗಿತ್ತು ಹಾಗು ಅವರು ತುಂಬಾನೇ ಕಷ್ಟ ಪಡುತ್ತಿದ್ದರು ಆಗಾಗಿ ನಾನು ಈ ಕೆಲಸ ಮಾಡಲು ಮುಂದಾದೆ ನಾನು ಬಾವಿ ತೋಡಲು ಆರಂಭಿಸಿದ ನನಗೆ 40 ಅಡಿ ಅಗೆತ ಆದ ನಂತರ ಕೈಮುರಿಯಿತು ಆದರೂ ಛಲ ಬಿಡದೆ ನನ್ನ ಕೆಲಸ ಮುಂದುವರಿಸಿದೆ.

40 ಅಡಿ ಅಗೆದ ನಂತರವೂ ನೀರು ಬರದಿದ್ದರಿಂದ ತುಂಬಾ ನಿರಾಶೆ ಆಗಿತ್ತು. ಆದರೆ, ಇಬ್ಬರು ವೃತ್ತಿಪರ ಬಾವಿ ತೋಡುವವರ ಸಹಕಾರದಿಂದ ಇನ್ನೂ ಹತ್ತು ಅಡಿ ತೋಡಿದಾಗ ನೀರು ಜಿನುಗಿತು ಎಂದು ಪವನ್ ಹೇಳುತ್ತಾನೆ. ಈ ಬಾವಿಯ ನೀರನ್ನು ಪವನ್ ಮನೆಯವರು ಮಾತ್ರವಲ್ಲ ಅಕ್ಕಪಕ್ಕದವರೂ ಉಪಯೋಗಿಸಿ ಕೊಳ್ಳುತ್ತಿದ್ದಾರೆ.

About Karnataka Express

Check Also

ಯಡಿಯೂರಪ್ಪಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ..!

ಹೌದು ಇದೇನಪ್ಪ ಯಡಿಯೂರಪ್ಪಗೆ ಕುಮಾರಸ್ವಾಮಿ ಕುರ್ಚಿ ಬಿಟ್ಟುಕೊಟ್ಟಿದ್ದಾರೆ ಅಂದ್ರೆ ಎಲ್ಲರು ಶಾಕ್ ಆಗುವ ವಿಚಾರವೇ ಈ ಎಲ್ಲ ನಾಯಕರು ಚುನಾವಣೆ …

Leave a Reply

Your email address will not be published. Required fields are marked *