Breaking News
Home / ಇತ್ತೀಚಿನ ಸುದ್ದಿಗಳು / ಆರು ವರ್ಷದ ಈ ಹುಡುಗ ಒಂದು ತಿಂಗಳಿಗೆ ಲಕ್ಷಗಟ್ಟಲೆ ಸಂಪಾದನೆ ಮಾಡುತ್ತಿದ್ದಾನೆ ಹೇಗೆ ಗೊತ್ತಾ..?

ಆರು ವರ್ಷದ ಈ ಹುಡುಗ ಒಂದು ತಿಂಗಳಿಗೆ ಲಕ್ಷಗಟ್ಟಲೆ ಸಂಪಾದನೆ ಮಾಡುತ್ತಿದ್ದಾನೆ ಹೇಗೆ ಗೊತ್ತಾ..?

ಎಸ್ ಈ ಬಾಲಕನ ತಿಂಗಳ ಸಂಪಾದನೆ ಲಕ್ಷ ಮೀರುತ್ತದೆ, ಇದೇನಪ್ಪ ಆರು ವರ್ಷದ ಬಾಲಕ ಇಷ್ಟೊಂದು ಹಣ ಹೇಗೆ ಸಂಪಾದನೆ ಮಾಡುತ್ತಾನೆ ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಹೌದು ಕೇರಳದ ಕೊಚ್ಚಿಗೆ ಸೇರಿದ ೬ ವರ್ಷದ ಈ ಹುಡುಗನ ಹೆಸರು ನಿಹಾಲ್ ರಾಜ್, ಮನೆಯಲ್ಲಿ ತನ್ನ ತಾಯಿ ಅಡುಗೆ ಮಾಡುವಾಗ, ಆಕೆ ಹೇಗೆ ಅಡುಗೆ ಮಾಡುತ್ತಾಳೆ ಎಂಬುದನ್ನ ಯಾವಾಗಲು ಗಮನಿಸುತ್ತಿದ್ದ, 4 ವರ್ಷ ವಯಸ್ಸುದ್ದಾಗ ಒಂದು ದಿನ ತಾನೇ ಅಡುಗೆ ಮಾಡಲು ಶುರು ಮಾಡಿದ.

ಹೀಗೆ ನಿಹಾಲ್ ಅಡುಗೆ ಮಾಡುತ್ತಿರುವ ವಿಡಿಯೋವನ್ನು ಮಾಡಿ ಅವನ ತಾಯಿ ಸುಮ್ಮನೆ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆಡಿದರು, ಬೆಳಗಾಗುವ ಹೊತ್ತಿಗೆ ಲಕ್ಷಗಟ್ಟಲೆ ವೀಕ್ಷಣೆ ಕಂಡಿತು, ವಿಪರೀತ ಲೈಕ್ಸ್ ಸಿಕ್ಕಿತು, ಅಷ್ಟೇ, ಪ್ರತಿದಿನ ಒಂದು ತಿಂಡಿಯನ್ನ ಮಾಡಲು ಶುರುಮಾಡಿಕೊಂಡ ಈ ಹುಡುಗ. ಇದಾದ ನಂತರ ದಿನದಿಂದ ದಿನಕ್ಕೆ ನಿಹಾಲ್ ಗೆ ವಿಪರೀತ ಫ್ಯಾನ್ ಫಾಲೋವಿಂಗ್ ಬೆಳೆಯಿತು. ಕೆಲವೇ ಕೆಲವು ದಿನಗಳಲ್ಲಿ ಈ ಹುಡುಗ ತುಂಬಾ ಪಾಪ್ಯೂಲರ್ ಆಗಿಬಿಟ್ಟ.

ಅಷ್ಟೇ ಅಲ್ಲದೆ ಫೇಸ್ಬುಕ್ ನಿಂದ ಹಣ ಬರಲು ಪ್ರಾರಂಭವಾಯಿತು, ಒಂದು ಅಡುಗೆಗೆ 2 ಸಾವಿರ ಡಾಲರ್ ಕೊಡುತ್ತಿದ್ದಾರೆ. ಅಮೇರಿಕ-ಇಂಗ್ಲೆಂಡ್ ನ ಟಿವಿ ಪ್ರೋಗ್ರಾಮ್ ಗಳಲ್ಲಿ ಭಾಗವಹಿಸಿದ ನಿಹಾಲ್ ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು, ಹತ್ತಾರು ಚಾನಲ್ ಗಳು ಇವನನ್ನ ಇಟ್ಟುಕೊಂಡು ಅನೇಕ ಕಾರ್ಯಕ್ರಮಗಳನ್ನ ಮಾಡುತ್ತಿವೆ. ಇದರಿಂದ ಹಣ ಬರಲು ಶುರುವಾಯಿತು. ಸದ್ಯಕ್ಕೆ ಫುಲ್ ಬ್ಯುಸಿ ಆಗಿರುವ ನಿಹಾಲ್ ದಿನಕ್ಕೆ ಲಕ್ಷಗಟ್ಟಲೆ ಸಂಪಾದನೆ ಮಾಡುತ್ತಿದ್ದಾನೆ. ಅದೇನೇ ಇರಲಿ ಈ ಚಿಕ್ಕ ವಯಸ್ಸಿನಲ್ಲಿ ಅಷ್ಟೊಂದು ಸಂಪಾದನೆ ಮಾಡುತ್ತಿರೋದು ನಿಜಕ್ಕೂ ಎಲ್ಲರ ಕಣ್ಣು ಹುಬ್ಬೇರುವಂತ ಮಾಡುತ್ತದೆ.

About Karnataka Express

Check Also

ಯಡಿಯೂರಪ್ಪಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ..!

ಹೌದು ಇದೇನಪ್ಪ ಯಡಿಯೂರಪ್ಪಗೆ ಕುಮಾರಸ್ವಾಮಿ ಕುರ್ಚಿ ಬಿಟ್ಟುಕೊಟ್ಟಿದ್ದಾರೆ ಅಂದ್ರೆ ಎಲ್ಲರು ಶಾಕ್ ಆಗುವ ವಿಚಾರವೇ ಈ ಎಲ್ಲ ನಾಯಕರು ಚುನಾವಣೆ …

Leave a Reply

Your email address will not be published. Required fields are marked *