Breaking News
Home / ಇತ್ತೀಚಿನ ಸುದ್ದಿಗಳು / ಈ ಅಧಿಕಾರಿ 42 ಸಾವಿರ ಯುವಕರಿಗೆ ಪ್ರೇರಣೆಗೆ ಸ್ಫೂರ್ತಿ ತುಂಬಿದ ಅಧಿಕಾರಿ ಯಾರು ಗೊತ್ತಾ ಮತ್ತು ಯಾಕೆ ಅನ್ನೋದು ಇಲ್ಲಿದೆ ನೋಡಿ..!

ಈ ಅಧಿಕಾರಿ 42 ಸಾವಿರ ಯುವಕರಿಗೆ ಪ್ರೇರಣೆಗೆ ಸ್ಫೂರ್ತಿ ತುಂಬಿದ ಅಧಿಕಾರಿ ಯಾರು ಗೊತ್ತಾ ಮತ್ತು ಯಾಕೆ ಅನ್ನೋದು ಇಲ್ಲಿದೆ ನೋಡಿ..!

ಒಬ್ಬ ಐಪಿಎಸ್, ಐಎಎಸ್ ಅಧಿಕಾರಿ ಮನಸು ಮಾಡಿದ್ರೆ ಏನು ಬೇಕಿದ್ರೂ ಮಾಡಬಹುದು ಅನ್ನೋದಕ್ಕೆ ಈ ಅಧಿಕಾರಿಯೇ ಸಾಕ್ಷಿಯಾಗಿದ್ದಾರೆ. ಇವರ ಐಡಿಯಾದಿಂದ 42 ಸಾವಿರ ಯುವಕರು ಅಪರಾಧ ಮತ್ತು ಭಯೋತ್ಪಾದನೆ ವಿರುದ್ಧ ಧ್ವನಿ ಎತ್ತಿದ್ದಾರೆ..

ರಾಷ್ಟ್ರೀಯ ಕ್ರೈಂ ರೆಕಾರ್ಡ್ ಬ್ಯೂರೋ (NCRB) ಅಂಕಿಅಂಶಗಳ ಪ್ರಕಾರ ಅಪರಾಧ ಮತ್ತು ಉಗ್ರಗಾಮಿ ಚಟುವಟಿಕೆಗಳಲ್ಲಿ ಮಹಾರಾಷ್ಟ್ರ 2ನೇ ಸ್ಥಾನದಲ್ಲಿದೆ. ಯುವ ಸಮೂಹ ಹೆಚ್ಚಿನ ಸಂಖ್ಯೆಯ ಅಪರಾಧಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದನ್ನ ನಿಯಂತ್ರಿಸಲು ಐಪಿಎಸ್ ಅಧಿಕಾರಿಯೊಬ್ಬರು ಸಂಕಲ್ಪ ಮಾಡಿದ್ದಾರೆ.

ಆ ಐಪಿಎಸ್ ಅಧಿಕಾರಿ ಯಾರು ಅಂತಿರಾ… ಅವರೇ ಮಹಾರಾಷ್ಟ್ರದ ಐಪಿಎಸ್ ಅಧಿಕಾರಿ ಹರ್ಷ ಪೊಡ್ಡಾರ್.. ಈ ಅಧಿಕಾರಿ ಪೊಲೀಸ್ ಮತ್ತು ವಿದ್ಯಾರ್ಥಿಗಳ ನಡುವೆ ಹೆಚ್ಚಿನ ಸಂವಾಹನ ಬೆಳೆಸಲು ಶಾಲೆ ಮತ್ತು ಕಾಲೇಜುಗಳಲ್ಲಿ ಒಂದು ಸಮುದಾಯ ಮಾದರಿಯನ್ನ ವಿನ್ಯಾಗೊಳಿಸಿದ್ದಾರೆ.

ವಿದ್ಯಾರ್ಥಿಗಳು ಪೊಲೀಸ್ ಅಧಿಕಾರಿಯ ಮಾತುಗಳನ್ನ ಕೇಳುತ್ತಾರೆ. ಸ್ವಲ್ಪ ಸಮಯದ ನಂತರ ಮರೆತುಬಿಡುತ್ತಾರೆ. ಐಪಿಎಸ್ ಅಧಿಕಾರಿ ಹರ್ಷ ಪೊಡ್ಡಾರ್ ಮಾತ್ರ ಧನಾತ್ಮಕ ಬದಲಾವಣೆ ಅನ್ನೋದು ನಿಧಾನಗತಿಯಲ್ಲಿ ಆಗುತ್ತದೆ ಎಂಬುದನ್ನ ಅರಿತು ನಿರಂತರ ಪ್ರಯತ್ನದಿಂದ 42000 ಯುವಕ-ಯುವತಿಯರ ಮನಸು ಬದಲಾಯಿಸಿದ್ದಾರೆ.

ಕೊಲ್ಕತ್ತದ ನ್ಯಾಷನಲ್ ಯೂನಿವರ್ಸಿಟಿ ಆಫ್ ಜೂರಿಡಿಕಲ್ ಸೈನ್ಸ್ (NUJS) ನಲ್ಲಿ ಕಾನೂನು ಪದವಿ ಪಡೆದಿದ್ದಾರೆ. ಲಂಡನ್ ನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮತ್ತು ಸಂವಿಧಾನಿಕ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

About Karnataka Express

Check Also

ಯಡಿಯೂರಪ್ಪಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ..!

ಹೌದು ಇದೇನಪ್ಪ ಯಡಿಯೂರಪ್ಪಗೆ ಕುಮಾರಸ್ವಾಮಿ ಕುರ್ಚಿ ಬಿಟ್ಟುಕೊಟ್ಟಿದ್ದಾರೆ ಅಂದ್ರೆ ಎಲ್ಲರು ಶಾಕ್ ಆಗುವ ವಿಚಾರವೇ ಈ ಎಲ್ಲ ನಾಯಕರು ಚುನಾವಣೆ …

Leave a Reply

Your email address will not be published. Required fields are marked *