Breaking News
Home / ಇತ್ತೀಚಿನ ಸುದ್ದಿಗಳು / ಸಕಲ ಜೀವ ಕೋಟಿಯ ಕಲ್ಯಾಣಕ್ಕಾಗಿ ಇರುವ ಈ ದುಗ್ಗಮ್ಮನ ಮಹಿಮೆ ಗೊತ್ತಾದ್ರೆ ನೀವು ಒಮ್ಮೆ ಹೋಗ್ತೀರಾ ಅನ್ಸುತ್ತೆ..!

ಸಕಲ ಜೀವ ಕೋಟಿಯ ಕಲ್ಯಾಣಕ್ಕಾಗಿ ಇರುವ ಈ ದುಗ್ಗಮ್ಮನ ಮಹಿಮೆ ಗೊತ್ತಾದ್ರೆ ನೀವು ಒಮ್ಮೆ ಹೋಗ್ತೀರಾ ಅನ್ಸುತ್ತೆ..!

ದೇವನಗರಿ ದಾವಣಗೆರೆಗೆ ದುರ್ಗಾಂಬಿಕಾ ದೇವಿಯ ಅಭಯವಿದೆ. ಈ ತಾಯಿ ನಗರ ದೇವತೆಯಾಗಿ, ಊರ ದೇವತೆಯಾಗಿ ಭಕ್ತರ ಸಂಕಷ್ಟ ಹರಿಸುವ ತಾಯಿಯಾಗಿ, ಬೇಡಿದವರಿಗೆ ಮಗುವಾಗಿ ಒಲಿಯುತ್ತಾಳೆ. ದಾವಣಗೆರೆ ಹಳೇ ಪಟೇಯಲ್ಲಿ ನೆಲೆ ನಿಂತಿರುವ ದುರ್ಗಾಂಬಿಕಾ ದೇವಿ ದುಗ್ಗಮ್ಮಳಾಗಿ ಸಕಲ ಜೀವ ಕೋಟಿಯ ಕಲ್ಯಾಣಕ್ಕೆ ಸಂಕಲ್ಪ ಮಾಡಿದ್ದಾಳೆ.

ದಾವಣಗೆರೆ ನಗರದ ಹಳೇ ಭಾಗದಲ್ಲಿ ದುರ್ಗಾಂಬಿಕಾ ದೇವಸ್ಥಾನವಿದ್ದು, ದೇವಿಗೆ ಪ್ರತಿನಿತ್ಯ ಧಾರ್ಮಿಕ ವಿಧಿವಿಧಾನಗಳು, ಪೂಜಾ ಕೈಂಕಾರ್ಯಗಳು ನೆರವೇರುತ್ತವೆ. ಸಂತಾನ, ಆರೋಗ್ಯ, ಉದ್ಯೋಗ, ಕೃಷಿ, ವ್ಯಾಪಾರ, ವಿವಾಹ ಭಾಗ್ಯ ಸೇರಿದಂತೆ ಯಾವುದೇ ಕಲ್ಯಾಣ ಕಾರ್ಯಕ್ಕೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಕಂಕಣ ಕಟ್ಟಿಸಿಕೊಂಡ್ರೆ ಹೊತ್ತ ಹರಕೆ ಶೀಘ್ರವೇ ಈಡೇರತ್ತೆ ಅನ್ನೋದು ಭಕ್ತರ ನಂಬಿಕೆ.

ದುರ್ಗಾಂಬಿಕಾ ದೇವಿ ಉದ್ಭವ ಮೂರ್ತಿಯಲ್ಲಿ. ಮಹಾತಾಯಿ ದುಗ್ಗಾವತಿಯಿಂದ ದಾವಣಗರೆ ಬಂದು ನೆಲೆಸಿದ್ದರ ಬಗ್ಗೆ ಜಾನಪದ ಸಾಹಿತ್ಯ ರೂಪಗಳೇ ಜನ್ಮತಾಳಿವೆ. ನಮ್ಮ ಪೂರ್ವಜರ ಕಾಲದಲ್ಲಿ ದಾವಣಗೆರೆ ನಗರದ ಹಳೇ ಪೇಟೆಯಲ್ಲಿ ಬಳೆ ವ್ಯಾಪಾರಿಯೊಬ್ಬ ವಾಸವಿದ್ದನಂತೆ. ವ್ಯಾಪಾರಕ್ಕಾಗಿ ಊರು ಊರು ಸುತ್ತುತ್ತಿದ್ದ ಆತ ಒಮ್ಮೆ ಈಗಿನ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಎಂಬ ಪುಟ್ಟ ಗ್ರಾಮಕ್ಕೆ ಹೋಗಿದ್ದನಂತೆ.

ಅಲ್ಲಿ ಒಂದೂ ಬಳೆ ವ್ಯಾಪಾರ ಆಗುವುದಿಲ್ಲ. ಆಗ ದುಗ್ಗಮ್ಮ ಕನಸಿನಲ್ಲಿ ಬಂದು ವ್ಯಾಪಾರಕ್ಕೆ ಹೋಗುವ ಮುನ್ನ ಐದು ಬಳೆಗಳನ್ನ ಇಟ್ಟು ನಮಸ್ಕಾರ ಮಾಡಿಹೋಗುವಂತೆ ಹೇಳಿತ್ತಂತೆ. ಅಮ್ಮನ ಅಪ್ಪಣೆ ಪಾಲಿಸಿ ಹೋದಾಗ ಭರ್ಜರಿ ವ್ಯಾಪಾರವಾಯ್ತಂತೆ. ಸಾಕಷ್ಟು ದವಸ ದಾನ್ಯಗಳು ಸಂಗ್ರವಾಗಿತ್ತಂತೆ. ಅವೆಲ್ಲವನ್ನ ಚಕ್ಕಡಿ ಬಂಡಿಗೆ ತುಂಬಿಕೊಂಡಾಗ ಬಂದಿ ನಿಯಂತ್ರಣ ಕಳೆದುಕೊಂಡು ಚಕ್ಕಡಿ ನೆಲಕ್ಕುರುಳಿತಂತೆ. ಆಗ ಅಲ್ಲೇ ಇದ್ದ ದುಂಡು ಕಲ್ಲನ್ನು ಚಕ್ಕಡಿ ನಿಯಂತ್ರಣಕ್ಕೆ ಇಟ್ಟುಕೊಂಡು ಬರಲಾಯಿತು.

ದವಸ-ಧಾನ್ಯ ತುಂಬಿದ್ದ ಚಕ್ಕಡಿ(ಎತ್ತಿನ) ಬಂಡಿ ದಾವಣಗೆರೆಯ ಹಳೇ ಪೇಟೆ ಪ್ರವೇಶಿಸುತ್ತಿದ್ದಂತೆ ಈಗಿನ ದೇವಸ್ಥಾನದ ಬಳಿ ಚಕ್ಕಡಿ, ಅಚ್ಚು ಎಲ್ಲವೂ ಮುರಿದು ಬಿದ್ದು ಬಂಡಿಯಲ್ಲಿದ್ದ ದುಂಡು ಗಲ್ಲು ರಸ್ತೆ ಮೇಲೆ ಬಿದ್ದಿದೆ. ಸ್ಥಳೀಯರೆಲ್ಲರೂ ಸೇರಿ ಕಲ್ಲನ್ನು ಮೇಲೆತ್ತಲು ಪ್ರಯತ್ನಿಸಿದಾಗ ದುಗ್ಗಮ್ಮ ಸಣ್ಣ ಮಗುವಿನ ಮೈಮೇಲೆ ಬಂದು ಅಪ್ಪಣೆ ಕೊಡಿಸಿದಳಂತೆ.

ನಾನು ದುಗ್ಗಾವತಿ ದುರ್ಗಮ್ಮ, ನಾನು ಈ ದುಂಡು ಕಲ್ಲಿನ ರೂಪದಲ್ಲಿ ದುಗ್ಗಾವತಿಯಿಂದ ಇಲ್ಲಿಗೆ ಬಂದಿದ್ದೇನೆ. ಈ ಸ್ಥಳ ನೋಡಿ ಮಹಾದಾನಂದಾವಾಯ್ತು.. ಇಂತಹ ಪ್ರಶಾಂತವಾದ, ಪ್ರಶಸ್ಥವಾದ ಸ್ಥಳದಲ್ಲಿ ನೆಲೆಯಾಗಿ ಭಕ್ತಾದಿಗಳ ಅಭೀಷ್ಟವನ್ನ ನೆರವೇರಿಸುವುದೇ ನನ್ನ ಕರ್ತವ್ಯ, ಆದ್ದರಿಂದ ನನಗೆ ಇಲ್ಲಿಯೇ ಗರ್ಭಗುಡಿ ಕಟ್ಟಿಸಿ, ನನ್ನನ್ನು ಭಕ್ತಿಯಿಂದ ಆರಾಧಿಸಿ. ನಿಮ್ಮ ಕ್ಷೇಮ, ಕಷ್ಟ, ಸುಖಗಳಿಗೆ ನಾನು ಹೊಣೆಯಾಗಿ ನಿಮ್ಮನ್ನು ಕಾಪಾಡುತ್ತೇನೆಂದು ಅಂತರ್ಧಾನವಾದಳಂತೆ. ಹಾಗಾಗಿ ದುಂಡು ಕಲ್ಲನ್ನಿಟ್ಟು “ದುಗ್ಗಮ್ಮ; ಎಂಬ ಹೆಸರಿನಿಂದ ಪೂಜೆಸಿಕೊಂಡು ಬರಲಾಗುತ್ತಿದೆ.

ಶ್ರೀ ದುರ್ಗಾಂಬಿಕಾ ದೇವಿಯ ದೇವಾಲಯವನ್ನ 1935ರಲ್ಲಿ ಚಿತ್ರದುರ್ಗ ಮುರುಘಾ ಮಠದ ಲಿಂಗೈಕ್ಯ ಶ್ರೀ ಜಯದೇವ ಜಗದ್ಗುರುಗಳು ಲೋಕಾರ್ಪಣೆ ಮಾಡಿದ್ರು. ಐದು ವರ್ಷದ ಕಾಲ ಯಾವುದೇ ಜಾತ್ರೆ, ಸಂಭ್ರಮ ಇರಲಿಲ್ಲ. ನಂತರ 1940ರಲ್ಲಿ ಗ್ರಾಮದ ಹಿರಿಯರು ಒಟ್ಟಾಗಿ ಜಾತ್ರೆ ಮಾಡುವಂತೆ ತೀರ್ಮಾನ ಮಾಡಿದ್ರು.

ನಂತರ ಪ್ರತಿ ಎರಡು ವರ್ಷಕ್ಕೊಮ್ಮೆ ದುಗ್ಗಮ್ಮನ ಜಾತ್ರೆ ನಡೆಯತ್ತೆ. ಜಾತ್ರೆಗೆ ಇಡೀ ಹಳೇ ಪೇಟೆ ಮದುವಣಗಿತ್ತಿಂತೆ ಸಿಂಗಾರಗೊಂಡಿರತ್ತೆ. 15 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ, ಮೂರು ದಿನ ಜಂಗಿ ಕುಸ್ತಿ ಆಯೋಜಿಸಲಾಗತ್ತೆ. ಜಂಗಿ ಕುಸ್ತಿಯ ವಿಜೇತನಿಗೆ ಬೆಳ್ಳಿಗೆ ಗದೆ ನೀಡಲಾಗತ್ತೆ. ಹೀಗೆ 15 ದಿನಗಳ ಕಾಲ ನಡೆಯುವ ಜಾತ್ರೆಗೆ ಲಕ್ಷಾಂತರ ಭಕ್ತಾದಿಗಳು ಸಾಕ್ಷಿಯಾಗ್ತಾರೆ.

ದೇವಸ್ಥಾನಕ್ಕೆ ಆಡಳಿತ ಮಂಡಳಿ ಇದ್ದು, ದೇವಸ್ಥಾನದ ಅಭಿವೃದ್ಧಿ ಕೆಲ್ಸಾ, ಜಾತ್ರೆ ಸಾರಾಕುವುದು ಸೇರಿದಂತೆ ಎಲ್ಲ ಕೆಲಸ ಕಾರ್ಯಗಳನ್ನ ನೋಡಿಕೊಳ್ಳತ್ತೆ. ಇನ್ನು ದೇವಸ್ಥಾನಕ್ಕೆ ಎದುರಿನಲ್ಲಿ ದಾಸೋಹದ ಕೊಠಡಿ ನಿರ್ಮಾಣ ಮಾಡಲಾಗಿದೆ. ಪ್ರತಿ ಮಂಗಳವಾರ, ಶುಕ್ರವಾರ ದಾಸೋಹ ನಡೆಯುತ್ತೆ.

About Karnataka Express

Check Also

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಅವರಿಂದ ಈ ದಿನದ ರಾಶಿ ಭವಿಷ್ಯ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ …

Leave a Reply

Your email address will not be published. Required fields are marked *